ಬೆಂಗಳೂರು : ಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ಅನಧಿಕೃತ ರಾಜಕೀಯ ಜಾಹೀರಾತುಗಳನ್ನು ತೆರವುಗೊಳಿಸುವಂತೆ ರಾಜ್ಯ ಸರ್ಕಾರವು ಸೂಚನೆ ನೀಡಿದೆ.
ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರದತ್ತ ತಮ್ಮ ಗಮನವನ್ನು ಸೆಳೆಯಲಾಗಿದೆ. ದಿನಾಂಕ:20.03.2024 ರ ಭಾರತ ಚುನಾವಣಾ ಆಯೋಗದ ಪತ್ರವನ್ನು ಲಗತ್ತಿಸಿದೆ. ಸದರಿ ಪತ್ರದಲ್ಲಿ ಚುನಾವಣಾ ನೀತಿ ಸಂಹಿತ ಜಾರಿಯಾಗಿರುವುದರಿಂದ ತಕ್ಷಣವೇ ಎಲ್ಲಾ ಅನಧಿಕೃತ ರಾಜಕೀಯ ಜಾಹಿರಾತುಗಳನ್ನು ತೆರವುಗೊಳಿಸಿ. ತೆರವುಗೊಳಿಸಿದ ಬಗ್ಗೆ ಅಗತ್ಯ ಅನುಪಾಲನಾ ವರದಿಯನ್ನು ಕೂಡಲೇ ಒದಗಿಸುವಂತೆ ಕೋರಿರುತ್ತಾರೆ. ಆದುದರಿಂದ ಖಜಾನೆಯ ಆವರಣದಲ್ಲಿ ಇರುವ ಎಲ್ಲಾ ಅನಧಿಕೃತ ರಾಜಕೀಯ ಜಾಹಿರಾತುಗಳನ್ನು ಕೂಡಲೇ ತೆರವುಗೊಳಿಸಿ. ತೆರವುಗೊಳಿಸಿದ ಬಗ್ಗೆ ಅನುಪಾಲನಾ ವರದಿಯನ್ನು ಇಂದೇ ಸಲ್ಲಿಸಲು ಸೂಚಿಸಿದೆ.