ಬೆಂಗಳೂರು: ಲೋಕಸಭಾ ಚುನಾವಣೆಗೆ ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಯ ಕಣದಿಂದ 53 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದ್ರೆ, ಕಣದಲ್ಲಿ ಬರೋಬ್ಬರಿ 247 ಅಭ್ಯರ್ಥಿಗಳಿದ್ದಾರೆ.
ಈ ಕುರಿತಂತೆ ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದ್ದು, ಇಂದು ಮೊದಲ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಏಪ್ರಿಲ್.6ರಂದು ಒಬ್ಬರು ಹಾಗೂ ಇಂದು 52 ಸೇರಿದಂತೆ 53 ಅಭ್ಯರ್ಥಿಗಳು ನಾಮಪತ್ರವನ್ನು ಹಿಂಪಡೆದಿದ್ದಾರೆ ಎಂದು ತಿಳಿಸಿದೆ.
ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆ ಕಣದಲ್ಲಿ ಒಟ್ಟು 247 ಅಭ್ಯರ್ಥಿಗಳಿದ್ದಾರೆ. ಇವರಲ್ಲಿ 226 ಪುರುಷ ಅಭ್ಯರ್ಥಿಗಳು ಹಾಗೂ 21 ಮಹಿಳಾ ಅಭ್ಯರ್ಥಿಗಳು ಆಗಿದ್ದಾರೆ ಎಂದು ಹೇಳಿದೆ.
ಮೊದಲ ಹಂತದ ಲೋಕಸಭಾ ಯಾವ ಕ್ಷೇತ್ರದಲ್ಲಿ ಎಷ್ಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ.?
- ಉಡುಪಿ-ಚಿಕ್ಕಮಗಳೂರು: 10
- ಹಾಸನ: 15
- ದಕ್ಷಿಣ ಕನ್ನಡ: 9
- ಚಿತ್ರದುರ್ಗ: 20
- ತುಮಕೂರು: 18
- ಮಂಡ್ಯ: 14
- ಮೈಸೂರು: 18
- ಚಾಮರಾಜನಗರ: 14
- ಬೆಂಗಳೂರು ಗ್ರಾಮೀಣ: 15
- ಬೆಂಗಳೂರು ಉತ್ತರ: 21
- ಬೆಂಗಳೂರು ಕೇಂದ್ರ: 24
- ಬೆಂಗಳೂರು ದಕ್ಷಿಣ: 22
- ಚಿಕ್ಕಬಳ್ಳಾಪುರ: 29
- ಕೋಲಾರ: 18
BIG UPDATE: ಗನ್ ಇಟ್ಟುಕೊಂಡು ಸಿಎಂ ಸಿದ್ಧರಾಮಯ್ಯಗೆ ಹಾರ ಹಾಕಿ ಪ್ರಕರಣ: ಪೊಲೀಸರಿಂದ ರಿಯಾಜ್ ವಿಚಾರಣೆ
‘ಯುಗಾದಿ’ಯಿಂದ ‘ಪ್ರಧಾನಿ ಮೋದಿ’ ಜಾತಕ ಹೇಗಿದೆ.? ಖ್ಯಾತ ‘ಜ್ಯೋತಿಷಿ’ಗಳು ನುಡಿದ ಭವಿಷ್ಯ ಹೀಗಿದೆ!