ಬೆಂಗಳೂರು: ನಾಳೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ. ಈ ಮತದಾನದಲ್ಲಿ ಪಾಲ್ಗೊಳ್ಳೋದಕ್ಕೆ ತೆರಳುವಂತ ಮತದಾರರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ KSRTC ಬಸ್ ಸಂಚರಿಸುವಂತ ಮಾರ್ಗಗಳಲ್ಲಿ ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ.
ಇಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯು, ರಾಜ್ಯದಲ್ಲಿ ದಿನಾಂಕ 26-04-2024 ಹಾಗೂ 07-05-2024ರಂದು ಎರಡು ಸುತ್ತಿನಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ ಎಂದಿದೆ.
ಮೊದಲ ಸುತ್ತಿನ ಮತದಾನಕ್ಕಾಗಿ ಬೆಂಗಳೂರಿನಿಂದ ಹೊರ ಊರುಗಳಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುವ ಹಿನ್ನಲೆಯಲ್ಲಿ, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 25-04-2024, 26-04-2024 ಹಾಗೂ 27-04-2024ರಂದು ಕೆ ಎಸ್ ಆರ್ ಟಿಸಿ ಬಸ್ ಕಾರ್ಯಾಚರಣೆಯ ವ್ಯಾಪ್ತಿಯ ಸ್ಥಳಗಳಿಗೆ ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ಗಳನ್ನು ಸಂಚಾರ ಮಾಡೋದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದಿದೆ.
ದಿನಾಂಕ 25-04-2024ರಂದು 575 ಹೆಚ್ಚುವರಿ ಬಿಎಂಟಿಸಿ ಬಸ್, ದಿನಾಂಕ 26-04-2024ರಂದು 465 ಬಸ್, ದಿನಾಂಕ 27-04-2024ರಂದು 120 ಹೆಚ್ಚುವರಿ ಬಿಎಂಟಿಸಿ ಬಸ್ ಸಂಚಾರದ ವ್ಯವಸ್ಥೆಯನ್ನು ಮಾಡಲಾಗಿದೆ.
ತುಮಕೂರಲ್ಲಿ ‘ಭೀಕರ ಅಗ್ನಿ ಅವಘಡ’: ಗ್ಯಾಸ್ ಪೈಕ್ ಸೋರಿಕೆಯಾಗಿ ಹೊತ್ತಿ ಉರಿದ ‘ಬಿರಿಯಾನಿ ಹೌಸ್’
‘ಮತದಾರರೇ, ಮತಗಟ್ಟೆ ಅಧಿಕಾರಿ’ಗಳೇ ಗಮನಿಸಿ: ನಾಳೆ ‘ಮತದಾನ ಕೇಂದ್ರ’ದಲ್ಲಿ ‘ಮೊಬೈಲ್ ಬಳಕೆ’ಗೆ ಅವಕಾಶವಿಲ್ಲ