ನವದೆಹಲಿ: ದೇಶದ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಾಗಿದೆ. 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಜೂ.4, 2024 ಫಲಿತಾಂಶ ಘೋಷಣೆ ಮಾಡಲಾಗುತ್ತಿದೆ.
ದೆಹಲಿಯ ವಿಜ್ಞಾನ ಭವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಮುಖ್ಯ ಚುನಾವಣಾ ಆಯುಗ್ತ ರಾಜೀವ್ ಕುಮಾರ್ ಅವರು, ನಾವು ಲೋಕಸಭಾ ಚುನಾವಣೆ ಸಂಪೂರ್ಣ ತಯಾರಿ ನಡೆಸಲಾಗಿದೆ. ಚುನಾವಣೆ ಒಂದು ಯುದ್ಧವಿದ್ದಂತೆ. ಜಮ್ಮು ಕಾಶ್ಮೀರ ವಿಧಾನ ಸಭಾ ಚುನಾವಣೆಗೆ ದಿನಾಂಕ ಘೋಷಣೆ ಬಾಕಿಯಿದೆ. 800 ಜಿಲ್ಲಾ ಚುನಾವಣಾಧಿಕಾರಿಗಳೊಂದಿಗೆ ಲೋಕಸಭಾ ಚುನಾವಣೆಗಾಗಿ ಚರ್ಚೆ ನಡೆಸಲಾಗಿದೆ. ಪೊಲೀಸ್, ರಾಜಕೀಯ ಪಕ್ಷಗಳು ಸೇರಿದಂತೆ ಎಲ್ಲರೊಂದಿಗೂ ಸಮೀಕ್ಷೆ ನಡೆಸಿ, ಚರ್ಚಿಸಲಾಗಿದೆ ಎಂದರು.
ನಾವು ಸ್ವತಂತ್ರ್ಯ, ನಿಷ್ಪಕ್ಷ ಪಾತ ಚುನಾವಣೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಭೌಗೋಳಿಕ, ಸಾಂಸ್ಕೃತಿಕ ವೈವಿದ್ಯತೆ ಹೊಂದಿರುವಂತ ಭಾರತದಲ್ಲಿ ಚುನಾವಣೆ ಒಂದು ಸವಾಲಿನ ಸಂಗತಿಯಾಗಿದೆ. 97 ಕೋಟಿ ಜನರು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುತ್ತಿದ್ದಾರೆ. 10.5 ಲಕ್ಷ ಪೋಲಿಂಗ್ ಭೂತ್ ಗಳನ್ನು ನಿರ್ಮಿಸಲಾಗುತ್ತಿದೆ. 1.5 ಕೋಟಿ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ ಎಂದರು.
ಕಳೆದ ಕೆಲ ದಿನಗಳ ಹಿಂದೆ 11 ರಾಜ್ಯಗಳ ಚುನಾವಣೆ ನಡೆಸಾಯಿತು. ಶಾಂತಿಯುತವಾಗಿ ಚುನಾವಣೆ ನಡೆಸಲಾಯಿತು. ಈ ಬಾರಿಯ ಲೋಕಸಭಾ ಚುನಾವಣೆಯನ್ನು ಸಕಲ ಸಿದ್ಧತೆಯೊಂದಿಗೆ ನಡೆಸೋದಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಎಲ್ಲಾ ಸಿದ್ಧತೆ ಮುಕ್ತಾಯಗೊಂಡಿದೆ ಎಂದರು.
ದೇಶದಲ್ಲಿ 49.7 ಕೋಟಿ ಪುರುಷರು, 47.1 ಕೋಟಿ ಮಹಿಳೆಯರು, 1.8 ಕೋಟಿ ಮೊದಲ ಬಾರಿಗೆ ಮತಚಲಾಯಿಸುತ್ತಿರುವವರು, 88.4 ಲಕ್ಷ ಅಂಗವಿಕಲರು, 19.1 ಲಕ್ಷ ಸೇವಾ ನಿರತ ಮತದಾರರು, 82 ಲಕ್ಷ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು, 48000 ಲಿಂಕತ್ವ ಅಲ್ಪ ಸಂಖ್ಯಾತರು, 19.74 ಕೋಟಿ ಯುವ ಮತದಾರರು ಇದ್ದಾರೆ ಎಂಬುದಾಗಿ ತಿಳಿಸಿದರು.
1.8 ಕೋಟಿ ಮೊದಲ ಬಾರಿಗೆ 18-19 ವರ್ಷದ ಯುವಕರು ಮತ ಚಲಾಯಿಸುತ್ತಿದ್ದಾರೆ. 19.74 ಕೋಟಿ ಮತದಾರರು 20-29 ವರ್ಷದೊಳಗಿನವರು ಆಗಿದ್ದಾರೆ. 13.4 ಲಕ್ಷ ಮತದಾರರು 17 ವರ್ಷಕ್ಕೆ ಮತಚಲಾಯಿಸಲು ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮತಕೇಂದ್ರದ ಬಳಿಯಲ್ಲಿ ಕುಡಿಯುವ ನೀರು, ಶೌಚಾಲಯ, ವೀಲ್ ಚೇರ್, ಮಾಹಿತಿ ಕೇಂದ್ರ ರಚಿಸಲಾಗಿದೆ. ಮತದಾರರಿಗೆ ಮತದಾನ ಮಾಡೋದಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಮೊಬೈಲ್ ನಲ್ಲಿಯೇ ಎಲ್ಲಾ ಮಾಹಿತಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ನೌ ಯುವರ್ ಕ್ಯಾಂಡಿಡೇಟ್ ಅಪ್ಲಿಕೇಷನ್ ನಲ್ಲಿ ಲೋಕಸಭಾ ಕ್ಷೇತ್ರವಾರು ಮಾಹಿತಿ ಲಭ್ಯವಿದೆ. ಮತದಾರರು ಯಾವ ಬೂತ್ ನಲ್ಲಿ ಮತ ಚಲಾಯಿಸೋದಕ್ಕೆ ಅವಕಾಶ ನೀಡಲಾಗಿದೆ ಎಂಬ ಮಾಹಿತಿ ಕೂಡ ಲಭ್ಯವಾಗಲಿದೆ. ಸುವಿಧ ಪೋರ್ಟಲ್ ನಲ್ಲಿ ಲೋಕಸಭಾ ಚುನಾವಣೆಯ ಕಣದಲ್ಲಿರುವಂತ ಅಭ್ಯರ್ಥಿಗಳ ಮಾಹಿತಿಯನ್ನು ನೀಡಲಾಗಿದೆ. ಅದನ್ನು ಮತದಾರರು ನೋಡಬಹುದಾಗಿದೆ ಎಂದರು.
ನಮ್ಮ ಎದುರು ಮೂರು ಸವಾಲುಗಳಿದ್ದಾವೆ. ಮಿಸ್ ಲೀಡಿಂಗ್, ಮಿಸ್ ಇನ್ಫರ್ಮೇಷನ್, ಹಣ, ವಯೋಲೇನ್ಸ್ ಗಳನ್ನು ಹೇಗೆ ತಡೆಗಟ್ಟ ಬೇಕು ಎನ್ನುವ ಬಗ್ಗೆ ಕ್ರಮವಹಿಸಲಾಗುತ್ತಿದೆ. ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಲೋಕಸಭಾ ಚುನಾವಣೆ ನಡೆಸೋದಾಗಿ ತಿಳಿಸಿದರು.
ಚುನಾವಣಾ ಅಕ್ರಮ ತಡೆಯಲು ಪ್ರತಿ ಜಿಲ್ಲೆಯಲ್ಲಿ ಕಂಟ್ರೋಲ್ ರೂಮ್ ಸ್ಥಾಪನೆ ಮಾಡಲಾಗುತ್ತದೆ. ಸಿಆರ್ ಪಿಎಫ್ ಸಿಬ್ಬಂದಿಯನ್ನು ಭದ್ರತೆಗಾಗಿ ನೇಮಕ ಮಾಡಲಾಗುತ್ತದೆ. ಸೂಕ್ಷ್ಮ ಮತಗಟ್ಟೆಯ ಮಾಹಿತಿಯನ್ನು ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ. ಪ್ರತಿ ರಾಜ್ಯದಲ್ಲೂ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗುತ್ತಿದೆ. ಡ್ರೋನ್ ಮೂಲಕ ಕಣ್ಗಾವಲು ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.
ಅಕ್ರಮ ಹಣ ವರ್ಗಾವಣೆ ತಡೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರತಿ ಜಿಲ್ಲೆಯಲ್ಲೂ ನಿಗಾ ವಹಿಸಲಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಮತದಾರರನ್ನು ಸೆಳೆಯೋದಕ್ಕೆ ನೀಡಲಾಗುವಂತ ಎಲ್ಲಾ ವಸ್ತುಗಳ ಬಗ್ಗೆಯೂ ಹದ್ದಿನ ಕಣ್ಣನಿಡಲಿದ್ದಾರೆ. ಎಲ್ಲಾ ವಿದದ ಪೊಲೀಸ್ ಅಧಿಕಾರಿಗಳು ಚುನಾವಣಾ ಹಣ ವರ್ಗಾವಣೆಯ ಅಕ್ರಮ ತಡೆಗೆ ಕ್ರಮವಹಿಸಲಿದ್ದಾರೆ ಎಂದು ಹೇಳಿದರು.
ಬ್ಯಾಂಕ್ ಗಳಿಗೂ ಅನುಮಾನಾಸ್ಪದ ಹಣ ವರ್ಗಾವಣೆಯ ಬಗ್ಗೆ ದಿನ ನಿತ್ಯ ಮಾಹಿತಿ ನೀಡಲಿದ್ದಾವೆ. ಆ ಮಾಹಿತಿಯನ್ನು ಆಧರಿಸಿ ಅಕ್ರಮ ಹಣ ವರ್ಗಾವಣೆಯ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತದೆ. ಏರ್ಪೋರ್ಟ್, ರೈಲು ನಿಲ್ದಾಣ, ಬಸ್ ನಿಲ್ದಾಣ, ರಸ್ತೆ ಮಾರ್ಗದಲ್ಲಿ ಹಣ ಸಾಗಾಟದ ಬಗ್ಗೆ ಹದ್ದಿನ ಕಣ್ಣಿಡಲಾಗುತ್ತದೆ ಎಂದರು.
ಸಾಮಾಜಿಕ ಜಾಲತಾಣಗಳ ಬಗ್ಗೆಯೂ ಚುನಾವಣಾ ಆಯೋಗವು ಹದ್ದಿನ ಕಣ್ಣಿರಿಸಲಾಗಿದೆ. ರಾಜಕೀಯ ಪಕ್ಷಗಳು ಸೋಷಿಯಲ್ ಮೀಡಿಯಾವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳೋದಕ್ಕೆ ಸೂಚಿಸಲಾಗಿದೆ. ಫೇಕ್ ನ್ಯೂಸ್ ಗಳ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ. ಒಂದು ವೇಳೆ ಮಿಸ್ ಲೀಡಿಂಗ್ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದೇ ಆದ್ರೇ ಐಟಿ ಕಾಯ್ದೆ ಸೆಕ್ಷನ್ 79(3) (ಬಿ) ಅಡಿಯಲ್ಲಿ ಆ ಪೋಸ್ಟ್ ಗಳನ್ನು ಟೇಕ್ ಡೌನ್ ಮಾಡಲಾಗುತ್ತದೆ. ಇದಕ್ಕಾಗಿ ಅಧಿಕಾರಿಗಳನ್ನು ಕೂಡ ನೇಮಕ ಮಾಡಲಾಗುತ್ತಿದೆ ಎಂದರು.
ರಾಜಕೀಯ ನಾಯಕರು ಚುನಾವಣಾ ಪ್ರಚಾರದ ವೇಳೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡುವಂತಿಲ್ಲ. ಸ್ಟಾರ್ ಕ್ಯಾಂಪೇನರುಗಳಿಗೆ ಚುನಾವಣಾ ಪ್ರಚಾರವನ್ನು ಹೇಗೆ ನಡೆಸಬೇಕು ಎನ್ನುವ ಮಾರ್ಗಸೂಚಿಗಳನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ಮತದಾರರನ್ನು ಪ್ರಚೋದಿಸುವಂತಿಲ್ಲ. ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲಾಗುತ್ತಿದೆ. ರಾಜಕೀಯ ಪಕ್ಷಗಳ ಚುನಾವಣಾ ಜಾಹೀರಾತುಗಳ ಬಗ್ಗೆಯೂ ಕಣ್ಗಾವಲು ಇರಿಸಲಾಗಿದೆ. 2100 ವೀಕ್ಷಕರನ್ನು ನೇಮಕ ಮಾಡಲಾಗುತ್ತಿದೆ ಎಂದರು.
ಕರ್ನಾಟಕದ ಸುರಪುರ ವಿಧಾನಸಭಾ ಚುನಾವಣೆ ನಡೆಸಲಾಗುತ್ತಿದೆ. ಇದಲ್ಲದೇ ಬಿಹಾರ್, ಗುಜರಾತ್, ಹರಿಯಾಣ, ಜಾರ್ಖಂಡ್, ಮಹಾರಾಷ್ಟ್ರ, ತಿಪುರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ, ಹಿಮಾಚಲ ಪ್ರದೇಶ, ರಾಜಸ್ಥಾನ ವಿಧಾನಸಭಾಗೆ ಚುನಾವಣೆ ನಡೆಸಲಾಗುತ್ತಿದೆ ಎಂದರು.
543 ಲೋಕಸಭಾ ಕ್ಷೇತ್ರಗಳಿಗೆ 16 ಜೂನ್ 2024ರಂದು ಅವಧಿ ಮುಕ್ತಾಯಗೊಳ್ಳಲಿದೆ. 7 ಹಂತಗಳಲ್ಲಿ ಕಳೆದ ಬಾರಿ ಲೋಕಸಭಾ ಚುನಾವಣೆ ನಡೆದಂತೆ ಚುನಾವಣೆ ನಡೆಯಲಿದೆ ಎಂದರು.
ಎರಡನೇ ಹಂತದಲ್ಲಿ 28 ಮಾರ್ಚ್ ಅಧಿಸೂಚನೆ ಹೊರಡಿಸಲಾಗುತ್ತಿದೆ. 4 ಎಪ್ರಿಲ್ ನಾಮಪತ್ರವನ್ನು ಸಲ್ಲಿಸಲು ಕೊನೆಯ ದಿನವಾಗಿದೆ. 5 ಏಪ್ರಿಲ್ ನಾಮಪತ್ರವನ್ನು ಹಿಂತೆಗೆದುಕೊಳ್ಳಲು ಎರಡನೇ ಹಂತದ ಚುನಾವಣೆಗೆ ಕೊನೆಯ ದಿನವಾಗಿದೆ ಎಂದರು.
ಅಂದಹಾಗೇ ದೇಶಾದ್ಯಂತ 543 ಲೋಕಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗದಿಂದ ಚುನಾವಣೆ ಘೋಷಣೆ ಮಾಡಲಾಗಿದೆ.