ಬೆಂಗಳೂರು: ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದ್ದು, 14 ಕ್ಷೇತ್ರಗಳಲ್ಲಿ ಒಟ್ಟಾರೆ ಮತದಾನದ ಶೇಕಡಾವಾರು ಪ್ರಮಾಣ ಶೇ.69.56ಕ್ಕೆ ಇಳಿದಿದೆ.
ಚುನಾವಣಾ ಆಯೋಗ ಶನಿವಾರ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಬೆಂಗಳೂರು ಕೇಂದ್ರ 54.06%, ಬೆಂಗಳೂರು ಉತ್ತರ 54.45% ಮತ್ತು ಬೆಂಗಳೂರು ದಕ್ಷಿಣ 53.17% ಮತದಾನವನ್ನು ದಾಖಲಿಸಿದೆ. 2019 ರ ಚುನಾವಣೆಗೆ ಹೋಲಿಸಿದರೆ ಒಟ್ಟಾರೆ ಮತದಾನದಲ್ಲಿ ಶೇಕಡಾ 0.6 ರಷ್ಟು ಹೆಚ್ಚಳವಾಗಿದ್ದು ಮುಖ್ಯವಾಗಿ ಮಂಡ್ಯ (81.67%), ಕೋಲಾರ (78.27%) ಮತ್ತು ಚಿಕ್ಕಬಳ್ಳಾಪುರ (77%) ಕ್ಷೇತ್ರಗಳಲ್ಲಿ ಉತ್ತಮ ಮತದಾನವಾಗಿದೆ.
2019 ರ ಲೋಕಸಭಾ ಚುನಾವಣೆಯಲ್ಲಿ, ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಒಟ್ಟಾರೆ ಶೇಕಡಾ 55 ರಷ್ಟು ಮತದಾನವಾಗಿದ್ದರೆ, ರಾಜ್ಯದ ಸರಾಸರಿ ಶೇಕಡಾ 65 ರಷ್ಟಿತ್ತು. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಶೇ.54.3, ಬೆಂಗಳೂರು ದಕ್ಷಿಣದಲ್ಲಿ ಶೇ.53.64, ಬೆಂಗಳೂರು ಉತ್ತರದಲ್ಲಿ ಶೇ.54.73ರಷ್ಟು ಮತದಾನವಾಗಿತ್ತು.
ಬೆಂಗಳೂರಿನ ಮತದಾರರು ಚುನಾವಣಾ ಪ್ರಕ್ರಿಯೆಯ ಬಗ್ಗೆ ನಿರಾಸಕ್ತಿ ತೋರಿಸುತ್ತಿರುವುದು ಇದೇ ಮೊದಲಲ್ಲ. ಈ ಪ್ರವೃತ್ತಿಯು 2000 ರ ಆರಂಭದಲ್ಲಿ ಪ್ರಾರಂಭವಾಯಿತು ಮತ್ತು ಪ್ರತಿ ಬಾರಿಯೂ ಮತದಾನದ ಅಂಕಿಅಂಶಗಳು ಕುಸಿಯುವುದರೊಂದಿಗೆ ಮುಂದುವರೆದಿದೆ