ನವದೆಹಲಿ: ಭಾರತದ ಚುನಾವಣಾ ಆಯೋಗಕ್ಕೆ ಇಬ್ಬರು ಆಯುಕ್ತರ ನೇಮಕವನ್ನು ಮಾರ್ಚ್ 15 ರೊಳಗೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಅನೂಪ್ ಚಂದ್ರ ಪಾಂಡೆ ಅವರ ನಿವೃತ್ತಿ ಮತ್ತು ಅರುಣ್ ಗೋಯೆಲ್ ಅವರ ಅನಿರೀಕ್ಷಿತ ರಾಜೀನಾಮೆಯ ನಂತರ ಚುನಾವಣಾ ಸಮಿತಿಯಲ್ಲಿ ಎರಡು ಸ್ಥಾನಗಳ ಭರ್ತಿಗಾಗಿ ತಯಾರಿ ನಡೆದಿದೆ.
ಅರುಣ್ ಗೋಯೆಲ್ ದಿಢೀರ್ ರಾಜೀನಾಮೆಯಿಂದ ತೆರವಾದ ಹುದ್ದೆ ಹಾಗೂ ಅನೂಪ್ ಚಂದ್ರ ಪಾಂಡೆ ಅವರ ನಿವೃತ್ತಿಯಿಂದ ತೆರವಾದ ಸ್ಥಾನಗಳಿಗೆ ಮಾರ್ಚ್.15ರೊಳಗೆ ಇಬ್ಬರು ಚುನಾವಣಾ ಆಯುಕ್ತರನ್ನು ನೇಮಕ ಮಾಡೋ ಸಾಧ್ಯತೆ ಇದೆ ಎಂಬುದಾಗಿ ವರದಿಯಿಂದ ತಿಳಿದು ತಿಳಿದು ಬಂದಿದೆ.
ಇದರ ನಡುವೆ ಮಾರ್ಚ್.14, 15ರ ಒಳಗಾಗಿ ಲೋಕಸಭಾ ಚುನಾವಣೆ 2024ಕ್ಕೆ ಚುನಾವಣಾ ದಿನಾಂಕ ಘೋಷಣೆ ಮಾಡೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅದಕ್ಕೂ ಮುಂಚೆಯೇ ಕೇಂದ್ರ ಚುನಾವಣಾ ಆಯೋಗಕ್ಕೆ ಇಬ್ಬರು ಆಯುಕ್ತರ ನೇಮಕವನ್ನು ಮಾಡೋ ಸಾಧ್ಯತೆ ಇದೆ. ಆ ಬಗ್ಗೆ ಕಾದು ನೋಡಬೇಕಿದೆ.
ನಿಮ್ಮ ಮಕ್ಕಳು ಈ ಒಂದು ಮಂತ್ರವನ್ನು ಪಠಿಸುವುದರಿಂದ ಹೆಚ್ಚು ಅಂಕಗಳನ್ನು ಗಳಿಸ್ಬಹುದು ಗೊತ್ತಾ?
BREAKING : ಮಂಡ್ಯ : ತಮಿಳುನಾಡಿಗೆ ನೀರು ಬಿಟ್ಟ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರ ಬಂಧನ