ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆಸದಂತೆ ಚುನಾವಣಾ ಆಯೋಗವು ಕಟ್ಟು ನಿಟ್ಟಿನ ನಿಯಂತ್ರಣ ಕ್ರಮ ಕೈಗೊಂಡಿದೆ. ಇದರ ನಡುವೆ ಅಕ್ರಮ ನಡೆಸೋದಕ್ಕೆ ಪ್ರಯತ್ನ ಪಟ್ಟಂತವರಿಗೆ ಚುನಾವಣಾಧಿಕಾರಿಗಳು ಶಾಕ್ ಮೇಲೆ ಶಾಕ್ ನೀಡಿದ್ದಾರೆ. ಹಾಗಾದ್ರೇ ರಾಜ್ಯಾಧ್ಯಂತ ಇದುವರೆಗೆ ಎಷ್ಟು ಹಣ, ವಸ್ತು ಸೀಜ್ ಅನ್ನೋ ಬಗ್ಗೆ ಮಾಹಿತಿ ಮುಂದೆ ಓದಿ.
ರಾಜ್ಯ ಚುನಾವಣಾಧಿಕಾರಿಗಳು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದಂತ ಒಟ್ಟು 15,78,61,211 ಹಣವನ್ನು ಜಪ್ತಿ ಮಾಡಿದ್ದಾರೆ. ಇದಲ್ಲದೇ ಮತದಾರರಿಗೆ ಹಂಚೋದಕ್ಕೆ ತಂದಿದ್ದಂತ 700 ವಾಲ್ ಕ್ಲಾಕ್ ಸೇರಿದಂತೆ ರೂ.17,35,475 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದಂತ ಬರೊಬ್ಬರಿ 23,37,95,611 ಮೌಲ್ಯದ ಮದ್ಯವನ್ನು ಜಪ್ತಿ ಮಾಡಿದ್ದಾರೆ. 66.35 ಕೆಜಿಯ ರೂ.65,71,600 ಮೌಲ್ಯದ ಮಾದಕ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಒಟ್ಟಾರೆಯಾಗಿ ಈವರೆಗೆ ಎಫ್ ಎಸ್, ಎಸ್ ಎಸ್ ಟಿ, ಪೊಲೀಸ್ ಅಧಿಕಾರಿಗಳಿಂದ 1.10 ಕೆಜಿ ಬಂಗಾರ, ಆದಾಯ ತೆರಿಗೆ ಇಲಾಖೆಯಿಂದ 0.98 ಕೆಜಿ ಬಂಗಾರ ಸೇರಿದಂತೆ ಒಟ್ಟಾರೆ 1,27,36,480 ಕೋಟಿ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಇದಲ್ಲದೇ 46.33 ಕೆಜಿಯ 21,47,240 ರೂ ಮೌಲ್ಯದ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಮೂಲಕ ಒಟ್ಟು 43,62,73,267 ಕೋಟಿ ಮೌಲ್ಯದ ವಸ್ತು, ಹಣ, ಮದ್ಯ, ಡ್ರಗ್ಸ್ ಜಪ್ತಿ ಮಾಡಿದ್ದಾರೆ.
‘ತವರು ಜಿಲ್ಲೆ’ಯನ್ನು ಗೆಲ್ಲಲು ನೇರವಾಗೇ ಅಖಾಡಕ್ಕೆ ಇಳಿದ ‘ಸಿಎಂ ಸಿದ್ಧರಾಮಯ್ಯ’
‘ಸೋನುಗೌಡ’ ಕಾನೂನು ಬಾಹಿರವಾಗಿ ‘ಮಗು ದತ್ತು’ ಪ್ರಕರಣ: ಪೊರೀಸರಿಂದ ‘ಸ್ಥಳ ಮಹಜರು’