ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಸದ್ಯ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕಿ ಲಿಂಗಾಯತರದ್ದೆ ಮೇಲುಗೈ ಸಾಧಿಸಿದ್ದು, ಒಕ್ಕಲಿಗರು, ಬ್ರಾಹ್ಮಣರು ಎರಡನೇ ಸ್ಥಾನದಲ್ಲಿದ್ದಾರೆ. ಇತರೆ ಏಳೆಂಟು ಜಾತಿ ಅಭ್ಯರ್ಥಿಗಳಿಗೂ ಕೂಡ ಟಿಕೆಟ್ ಪಡೆದುಕೊಂಡಿದ್ದಾರೆ. ಇದಲ್ಲದೇ ಹಾಲಿ ಸಂಸದರಲ್ಲಿ9 ಮಂದಿಗೆ ಟಿಕೆಟ್ ಮಿಸ್ ಆಗಿದ್ದು, ಈಗಾಗಲೇ ಹಲವು ಮಂದಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಜಾತಿವಾರು ಯಾರಿಗೆ ಎಷ್ಟು ಟಿಕೆಟ್?
ಲಿಂಗಾಯತ – 08
ಒಕ್ಕಲಿಗ – 02
ಬ್ರಾಹ್ಮಣ – 02
ಪರಿಶಿಷ್ಟ ಜಾತಿ – 03
ಪರಿಶಿಷ್ಟ ಪಂಗಡ – 01
ಬಂಟ – 01
ಬಿಲ್ಲವ – 01
ಬಲಿಜ – 01
ಕ್ಷತ್ರಿಯ – 01
ಯಾರ್ಯಾರಿಗೆ ಟಿಕೆಟ್?
- ಚಿಕ್ಕೋಡಿ ಲೋಕಸಭಾ ಕ್ಷೇತ್ರ-ಅಣ್ಣಾ ಸಾಹೇಬ್ ಜೊಲ್ಲೆ
- ಬಾಗಲಕೋಟೆ ಲೋಕಸಭಾ ಕ್ಷೇತ್ರ-ಪಿ.ಸಿ.ಗದ್ದಿಗೌಡರ್
- ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ-ಕೋಟ ಶ್ರೀನಿವಾಸ ಪೂಜಾರಿ
- ಹಾವೇರಿ ಲೋಕಸಭಾ ಕ್ಷೇತ್ರ-ಬಸವರಾಜ ಬೊಮ್ಮಾಯಿ
- ಮೈಸೂರು ಕ್ಷೇತ್ರ-ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
- ಬೆಂಗಳೂರು ಗ್ರಾಮಾಂತರ ಕ್ಷೇತ್ರ-ಡಾ.ಸಿ.ಎನ್.ಮಂಜುನಾಥ
- ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ-ಶೋಭಾ ಕರಂದ್ಲಾಜೆ
- ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ-ತೇಜಸ್ವಿ ಸೂರ್ಯ
- ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ-ಪಿ.ಸಿ.ಮೋಹನ್
- ತುಮಕೂರು ಲೋಕಸಭಾ ಕ್ಷೇತ್ರ-ವಿ.ಸೋಮಣ್ಣ
- ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ-ಕ್ಯಾಪ್ಟನ್ ಬ್ರಿಜೇಶ್ ಚೌಟಾ
- ಚಾಮರಾಜನಗರ ಲೋಕಸಭಾ ಕ್ಷೇತ್ರ-ಎಸ್.ಬಾಲರಾಜು
- ಧಾರವಾಡ ಲೋಕಸಭಾ ಕ್ಷೇತ್ರ-ಪ್ರಹ್ಲಾದ್ ಜೋಶಿ
- ಕೊಪ್ಪಳ ಲೋಕಸಭಾ ಕ್ಷೇತ್ರ-ಡಾ.ಬಸವರಾಜ ತ್ಯಾವಟೂರು
- ದಾವಣಗೆರೆ ಲೋಕಸಭಾ ಕ್ಷೇತ್ರ-ಗಾಯತ್ರಿ ಸಿದ್ದೇಶ್ವರ್
- ಬಳ್ಳಾರಿ ಲೋಕಸಭಾ ಕ್ಷೇತ್ರ-ಬಿ.ಶ್ರೀರಾಮುಲು
- ಕಲಬುರಗಿ ಲೋಕಸಭಾ ಕ್ಷೇತ್ರ-ಡಾ.ಉಮೇಶ್ ಜಾಧವ್
- ಬೀದರ್ ಲೋಕಸಭಾ ಕ್ಷೇತ್ರ-ಭಗವಂತ ಖೂಬಾ
- ವಿಜಯಪುರ ಲೋಕಸಭಾ ಕ್ಷೇತ್ರ-ರಮೇಶ್ ಜಿಗಜಿಣಗಿ
- ಶಿವಮೊಗ್ಗ ಲೋಕಸಭಾ ಕ್ಷೇತ್ರ-ಬಿ.ವೈ.ರಾಘವೇಂದ್ರ
- ಲೋಕಸಭಾ ಚುನಾವಣೆಗೆ ಹೊಸಮುಖಗಳು
- ಡಾ. ಸಿ.ಎನ್. ಮಂಜುನಾಥ್-ಬೆಂಗಳೂರು ಗ್ರಾಮಾಂತರ
- ಯದುವೀರ ಕೃಷ್ಣದತ್ತ ಒಡೆಯರ್-ಮೈಸೂರು-ಕೊಡಗು
- ಕ್ಯಾ. ಬ್ರಿಜೇಶ್ ಚೌಟ-ದಕ್ಷಿಣ ಕನ್ನಡ
- ಕೋಟ ಶ್ರೀನಿವಾಸ ಪೂಜಾರಿ-ಉಡುಪಿ-ಚಿಕ್ಕಮಗಳೂರು
- ಗಾಯತ್ರಿ ಸಿದ್ದೇಶ್ವರ-ದಾವಣಗೆರೆ
- ಡಾ. ಬಸವರಾಜ ಕ್ಯಾವತ್ತೂರ್-ಕೊಪ್ಪಳ
BREAKING : ಬೆಂಗಳೂರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವಿದೇಶಿ ಮಹಿಳೆಯ ಶವ ಪತ್ತೆ!