ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಜೂನ್.4ರಂದು ಫಲಿತಾಂಶ ಘೋಷಣೆಯಾಗಲಿದೆ. ಈ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ, ಅಕ್ರಮ ಹಣ ವರ್ಗಾವಣೆ ಸೇರಿದಂತೆ ವಿವಿಧ ಕಾರಣಗಳಿಗೆ ಪ್ರಕರಣಗಳು ದಾಖಲಾಗಿದ್ದಾವೆ. ಹಾಗಾದ್ರೇ ಎಷ್ಟು ಪ್ರಕರಣ ದಾಖಲಾಗಿದ್ದಾವೆ ಅಂತ ಮುಂದೆ ಓದಿ.
ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗದಿಂದ ಮಾಹಿತಿ ನೀಡಿದ್ದು, a. ಕ್ಷಿಪಪಡೆಗಳು (FS), ಸ್ಥಿರ ಕಣಾವಲು ತಂಡಗಳು (SST) ಮತ್ತು ಪೊಲೀಸ್ ಅಧಿಕಾರಿಗಳು ನಗದು, ಮದ್ಯ ಡ್ರಗ್ಸ್, ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆ (Freebies) ವಶಪಡಿಸಿಕೊಂಡ ಪಕರಣಗಳಿಗೆ ಸಂಬಂಧಿಸಿದಂತೆ 600 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.b. 79,349 ಶಸ್ತ್ರಾಸ್ತ್ರಗಳನ್ನು ಠೇವಣಿ ಮಾಡಲಾಗಿದೆ, 838 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ, 8 ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ, CRPCಯ ತಡೆಗಟ್ಟುವ ವಿಭಾಗಗಳ ಅಡಿಯಲ್ಲಿ 4,629 ಪ್ರಕರಣಗಳನ್ನು ದಾಖಲಿಸಿದೆ, ಅದರಲ್ಲಿ 5,156 ವ್ಯಕ್ತಿ / ವ್ಯಕ್ತಿಗಳನ್ನು ಒಳಪಟ್ಟ ಪಕರಣಗಳನ್ನು ದಾಖಲಿಸಿದೆ ಎಂದಿದೆ.
C. ಅಬಕಾರಿ ಇಲಾಖೆ ಘೋರ ಅಪರಾಧ ಅಡಿಯಲ್ಲಿ 624 ಪ್ರಕರಣಗಳನ್ನು ದಾಖಲಿಸಿದೆ, ಪರವಾನಗಿ ಉಲ್ಲಂಘನೆ ಅಡಿಯಲ್ಲಿ469 ಪ್ರಕರಣ ದಾಖಲಿಸಿದೆ. NDPS ಅಡಿಯಲ್ಲಿ36 ಪುಕರಣಗಳನ್ನು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 15(a) ಅಡಿಯಲ್ಲಿ 2,087 ಪ್ರಕರಣಗಳನ್ನು ದಾಖಲಿಸಿದೆ, ಮತ್ತು 376 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ವಿಶೇಷ ವರದಿ:
a) ಸ್ಥಿರ ಕಣಾವಲು ತಂಡದವರು(SST) ರೂ. 1,44,00,000 ನಗದು ಹಣವನ್ನು ಹಿರಿಯೂರು ಚಿತ್ರದುರ್ಗ ಲೋಕಸಭಾ ಕ್ಷೇತ್ರ, ಚಿತ್ರದುರ್ಗ ಜಿಲ್ಲೆ ಇಲ್ಲಿ ವಶಪಡಿಸಿಕೊಂಡಿದ್ದಾರೆ.
b) ಕ್ಷಿಪ ಪಡೆಯವರು(FST) ರೂ.10,00,500 ನಗದು ಹಣವನ್ನು ಕುಣಿಗಲ್ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಕ್ಷೇತ್ರ, ತುಮಕೂರು ಜಿಲ್ಲೆ, ಇಲ್ಲಿ ವಶಪಡಿಸಿಕೊಂಡಿದ್ದಾರೆ.
c) ಅಬಕಾರಿ ಇಲಾಖೆಯವರು ರೂ. 59,00,972 ಮೌಲ್ಯದ 14,688 ltrs. ಭಾರತೀಯ ನಿರ್ಮಿತ ವಿದೇಶಿ ಮದ್ಯ (IMFL) )K.S.B.C.L DEPO, ಚಳ್ಳಕೆರೆ, ಚಿತ್ರದುರ್ಗ ತಾಲ್ಲೂಕು. ಅಪರಾಧವು ಅಬಕಾರಿ ಇಲಾಖೆಯ ನಿಗಧಿತ ಚಿಹ್ನೆ ಕಂಡುಬಂದಿರುವುದಿಲ್ಲ) ಚಿತ್ರದುರ್ಗ ಲೋಕಸಭಾ ಕ್ಷೇತ್ರ, ಚಿತ್ರದುರ್ಗ ಜಿಲ್ಲೆ ಇಲ್ಲಿ ವಶಪಡಿಸಿಕೊಂಡಿದ್ದಾರೆ.
ಸಾರ್ವಜನಿಕ ಕುಂದು ಕೊರತೆ ಪರಿಹಾರ
ಮತದಾರರ ಸಹಾಯವಾಣಿಯ ಮೂಲಕ ಸ್ವೀಕರಿಸಿದ 4,727 ಕರೆಗಳ ಪೈಕಿ 4,719 ಜನರ ಮಾಹಿತಿಯನ್ನು ಕೋರಿದ್ದಾರೆ, 01 ನಾಗರೀಕರು ಪ್ರತಿಕ್ರಿಯೆ ನೀಡಿದ್ದಾರೆ, 0 ಮತದಾರರು ಸಲಹೆಗಳನ್ನು ನೀಡಿದ್ದಾರೆ ಮತ್ತು 08 ನಾಗರೀಕರು ದೂರುಗಳನ್ನು ದಾಖಲಿಸಿದ್ದಾರೆ. ಒಟ್ಟು 4,727 ಕರೆಗಳನ್ನು ವಿಲೇವಾರಿ ಮಾಡಲಾಗಿದೆ. ಹೆಚ್ಚುವರಿಯಾಗಿ NGRS ಪೋರ್ಟಲ್‌ನಲ್ಲಿ 3,614 ನಾಗರೀಕರಿಂದ ದೂರುಗಳನ್ನು ದಾಖಲಿಸಲಾಗಿದೆ, ಅದರಲ್ಲಿ 3,339 ದೂರುಗಳನ್ನು ವಿಲೇವಾರಿ ಮಾಡಲಾಗಿದೆ.
ಸಿವಿಜಿಲ್(cVIGIL)
CVIGIL ಅಪ್ಲಿಕೇಶನ್ ಮೂಲಕ 3,533 ದೂರುಗಳನ್ನು ಸ್ವೀಕರಿಸಲಾಗಿದೆ. ಸ್ವೀಕರಿಸಿದ ಪ್ರಮುಖ 2,105 ದೂರುಗಳು ಅನುಮತಿಯಿಲ್ಲದ ಪೋಸ್ಟರ್‌ಗಳು/ಬ್ಯಾನರ್‌ಗಳಿಗೆ ಸಂಬಂಧಿಸಿವೆ, 251 ಕಡ್ಡಾಯ ಘೋಷಣೆ ಇಲ್ಲದ ಪೋಸ್ಟರ್‌ಗಳು, ಆಸ್ತಿ ವಿರೂಪಗೊಳಿಸುವಿಕೆ 55, ಹಣವಿತರಣೆ 28, ಉಡುಗೊರೆಗಳು/ಕೂಪನ್‌ಗಳ ವಿತರಣೆ 13, ನಿಷೇಧದ ಅವಧಿಯಲ್ಲಿ ಪುಚಾರ 08, ಮದ್ಯಹಂಚಿಕೆ 11, ಅನುಮತಿಯಿಲ್ಲದೆ ವಾಹನ ಬೆಂಗಾವಲು 11, ಧಾರ್ಮಿಕ ಅಥವಾ ಸಮುದಾಯಿಕ ಭಾಷಣಗಳು/ಸಂದೇಶಗಳು 08, ಬಂದೂಕುಗಳ ಪ್ರದರ್ಶನ ಬೆದರಿಕೆ 10, ಇತರೆ 3,161 ಇವುಗಳಲ್ಲಿ ದೂರುಗಳು ಸರಿಯಾಗಿವೆ ಎಂದು ಕಂಡುಹಿಡಿದು ಸೂಕ್ತಕ್ರಮ ಕೈಗೊಳ್ಳಲಾಗಿದೆ.
ಮಾಧ್ಯಮ(Media)
ಇಮೇಲ್ ಮೂಲಕ ಸ್ವೀಕರಿಸಿದ 48 ದೂರುಗಳು ಮತ್ತು ಪತ್ರಗಳ ಮೂಲಕ ಸ್ವೀಕರಿಸಿದ 134 ದೂರುಗಳು ಸುದ್ದಿ ಪತ್ರಿಕೆಗಳು ಮೂಲಕ ಸ್ವೀಕರಿಸಿದ 06 ದೂರುಗಳು, ಟಿವಿ ಚಾನೆಲ್‌ಗಳ ಮೂಲಕ ಸ್ವೀಕರಿಸಿದ 08 ದೂರುಗಳು ಮತ್ತು ಸಾಮಾಜಿಕ ಜಾಲತಾಣ ಮಾಧ್ಯಮ ಮೂಲಕ ಸ್ವೀಕರಿಸಿದ 17 ದೂರುಗಳು ಹೀಗೆ ಒಟ್ಟು ಸ್ವೀಕರಿಸಿದ 213 ದೂರುಗಳ ಪೈಕಿ 213 ದೂರುಗಳನ್ನು ವಿಲೇವಾರಿ ಮಾಡಲಾಗಿದೆ.
ಸುವಿಧಾ(SUVIDHA)
ಸುವಿಧಾ ಅಡಿಯಲ್ಲಿ ಅನುಮತಿಗಳಿಗಾಗಿ, 515 ಅರ್ಜಿಗಳು ಸ್ವೀಕರಿಸಲಾಗಿದೆ, ಅದರಲ್ಲಿ 328 ಅರ್ಜಿಗಳನ್ನು ಅಂಗೀಕರಿಸಲಾಗಿದೆ ಮತ್ತು 115 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 02 ಅರ್ಜಿಗಳು ಪುಗತಿಯಲ್ಲಿದೆ. 50 ಅರ್ಜಿಗಳು ಬಾಕಿ ಉಳಿದಿವೆ ಮತ್ತು 20 ಅರ್ಜಿಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.
ಲೋಕಸಭಾ ಚುನಾವಣೆ: ಈವರೆಗೆ ರಾಜ್ಯದಲ್ಲಿ ‘ಎಷ್ಟು ಹಣ, ಮದ್ಯ, ವಸ್ತು ಸೀಜ್’ ಗೊತ್ತಾ? ಇಲ್ಲಿದೆ ಡೀಟೆಲ್ಸ್
BREAKING: ನಾಳೆ ಬೆಳಗ್ಗೆ ಬಿಜೆಪಿಯೊಂದಿಗೆ ‘KRPP ಪಕ್ಷ’ ವಿಲೀನ: ಜನಾರ್ಧನ ರೆಡ್ಡಿ ‘BJP ಪಕ್ಷ’ ಸೇರ್ಪಡೆ