ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ 14 ಕ್ಷೇತ್ರಗಳಿಗೆ ಇಂದು ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ. ಬೆಂಗಳೂರು ಸೇರಿದಂತೆ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದೂ, 3 ಗಂಟೆಯವರೆಗೆ ಬೆಂಗಳೂರಲ್ಲಿ ಎಷ್ಟು ಪ್ರಮಾಣದಲ್ಲಿ ಮತದಾನ ಆಗಿದೆ ಅಂತ ಮುಂದೆ ಓದಿ.

ಹೀಗಿದೆ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಮತದಾನದ ಶೇಖಡಾವಾರು ಪ್ರಮಾಣ:

ಮಧ್ಯಾಹ್ನ 03.00 ಗಂಟೆಯವರೆಗಿನ ವರದಿ

ಬೆಂಗಳೂರು ಕೇಂದ್ರ: ಶೇ. 40.10

ಬೆಂಗಳೂರು ದಕ್ಷಿಣ: ಶೇ. 40.77

ಬೆಂಗಳೂರು ಉತ್ತರ: ಶೇ. 41.12

ಇಲ್ಲಿದೆ ಮಧ್ಯಾಹ್ನ ‘3 ಗಂಟೆ’ಯವರೆಗೆ ರಾಜ್ಯದ ’14 ಕ್ಷೇತ್ರ’ಗಳ ಶೇಕಡವಾರು ಮತದಾನದ ಪ್ರಮಾಣ

ರಾಜ್ಯದಲ್ಲಿ ಇಂದು 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ. ಇಂದು ಮಧ್ಯಾಹ್ನ.1 ಗಂಟೆಯ ನಂತ್ರ, ಮಧ್ಯಾಹ್ನ 3 ಗಂಟೆಯವರೆಗೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಶೇ.50.93ರಷ್ಟು ಮತದಾನ ನಡೆದಿದೆ.

ಈ ಕುರಿತಂತೆ ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದ್ದು, ಇಂದು ಮಧ್ಯಾಹ್ನ 3 ಗಂಟೆಯವರೆಗೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ 50.93ರಷ್ಟು ಮತದಾನ ಆಗಿದೆ ಎಂಬುದಾಗಿ ತಿಳಿಸಿದೆ.

ಇಲ್ಲಿದೆ 14 ಲೋಕಸಭಾ ಕ್ಷೇತ್ರಗಳ ಶೇಕಡವಾರು ಪ್ರಮಾಣ

  1. ಬೆಂಗಳೂರು ಸೆಂಟ್ರಲ್- ಶೇ.40.10
  2. ಬೆಂಗಳೂರು ಉತ್ತರ – ಶೇ.41.12
  3. ಬೆಂಗಳೂರು ಗ್ರಾಮಾಂತರ- ಶೇ.40.77
  4. ಬೆಂಗಳೂರು ದಕ್ಷಿಣ – ಶೇ.40.77
  5. ಚಾಮರಾಜನಗರ – ಶೇ.54.82
  6. ಚಿಕ್ಕಬಳ್ಳಾಪುರ – ಶೇ.55.90
  7. ಚಿತ್ರದುರ್ಗ – ಶೇ.52.14
  8. ದಕ್ಷಿಣ ಕನ್ನಡ- ಶೇ.58.76
  9. ಹಾಸನ- ಶೇ.55.92
  10. ಕೋಲಾರ- ಶೇ.54.66
  11. ಮಂಡ್ಯ- ಶೇ.57.44
  12. ಮೈಸೂರು-ಕೊಡಗು – ಶೇ.53.55
  13. ತುಮಕೂರು- ಶೇ.56.62
  14. ಉಡುಪಿ-ಚಿಕ್ಕಮಗಳೂರು – ಶೇ.57.49

ಡಿಕೆಶಿ ರಾತ್ರೋರಾತ್ರಿ ಗಿಫ್ಟ್ ಕೂಪನ್, ಹಣ, ದೇವರ ಲಾಡು ಹಂಚಿದ್ದಾರೆ: HD ಕುಮಾರಸ್ವಾಮಿ ಗಂಭೀರ ಆರೋಪ

‘SC, ST, OBC’ ಹಕ್ಕುಗಳನ್ನ ಕಸಿದುಕೊಳ್ಳಲು ಕಾಂಗ್ರೆಸ್ ಪಿತೂರಿ : ಪ್ರಧಾನಿ ಮೋದಿ

Share.
Exit mobile version