ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯಗಳ ಸಿದ್ಧತೆಯ ಮೌಲ್ಯಮಾಪನವನ್ನು ಚುನಾವಣಾ ಆಯೋಗ (ಇಸಿ) ಮುಂದಿನ ವಾರ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಭೇಟಿ ನೀಡುವ ಮೂಲಕ ಪ್ರಾರಂಭಿಸಲಿದೆ ಎನ್ನಲಾಗಿದೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ಚುನಾವಣಾ ಆಯುಕ್ತರಾದ ಅನೂಪ್ ಚಂದ್ರ ಪಾಂಡೆ ಮತ್ತು ಅರುಣ್ ಗೋಯೆಲ್ ಅವರು ಜನವರಿ 7 ರಿಂದ 10 ರವರೆಗೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಚುನಾವಣಾ ಆಯೋಗ ಇರಲಿದೆ ಅಂತ ತಿಳಿಸಿದೆ. ಭೇಟಿಗೆ ಮುಂಚಿತವಾಗಿ, ಉಪ ಚುನಾವಣಾ ಆಯುಕ್ತರು ಜನವರಿ 6 ರಂದು ಎರಡೂ ರಾಜ್ಯಗಳಲ್ಲಿನ ಸಿದ್ಧತೆಗಳ ಬಗ್ಗೆ ಪೂರ್ಣ ಆಯೋಗಕ್ಕೆ ಸಂಕ್ಷಿಪ್ತ ಮಾಹಿತಿಯನ್ನು ನೀಡಲಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯ ವ್ಯವಸ್ಥೆಗಳ ಮೇಲ್ವಿಚಾರಣೆಗಾಗಿ ಉಪ ಚುನಾವಣಾ ಆಯುಕ್ತರು ಬಹುತೇಕ ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ.