ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ನಾಲ್ಕನೇ ಹಂತದ ಮತದಾನ ಇಂದು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಲೋಕಸಭಾ ಕ್ಷೇತ್ರಗಳಲ್ಲಿ ಮುಕ್ತಾಯಗೊಂಡಿದೆ. ಈ ಹಂತದಲ್ಲಿ ಒಟ್ಟು 1,717 ಅಭ್ಯರ್ಥಿಗಳು ಕಣದಲ್ಲಿದ್ದರು. 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಲ್ಕನೇ ಹಂತದಲ್ಲಿ 62.9% ಮತದಾನ ದಾಖಲಾಗಿದೆ.
ತೆಲಂಗಾಣದ ಎಲ್ಲಾ 17 ಲೋಕಸಭಾ ಕ್ಷೇತ್ರಗಳು, ಆಂಧ್ರಪ್ರದೇಶದ ಎಲ್ಲಾ 25, ಉತ್ತರ ಪ್ರದೇಶದ 13, ಬಿಹಾರದ 5, ಜಾರ್ಖಂಡ್ ನ 4, ಮಧ್ಯಪ್ರದೇಶದ 8, ಮಹಾರಾಷ್ಟ್ರದ 11, ಒಡಿಶಾದ 4, ಪಶ್ಚಿಮ ಬಂಗಾಳದ 8 ಮತ್ತು ಜಮ್ಮು ಮತ್ತು ಕಾಶ್ಮೀರದ 1 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಿತು.
ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆದಿದ್ದು, 2019ರ ಆಗಸ್ಟ್’ನಲ್ಲಿ 370ನೇ ವಿಧಿಯನ್ನ ರದ್ದುಪಡಿಸಿದ ನಂತ್ರ ಇದು ಕಾಶ್ಮೀರದ ಮೊದಲ ಪ್ರಮುಖ ಚುನಾವಣೆಯಾಗಿದೆ. ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ ಎಲ್ಲಾ 175 ವಿಧಾನಸಭಾ ಸ್ಥಾನಗಳಿಗೆ ಮತ್ತು ಒಡಿಶಾದ 28 ವಿಧಾನಸಭಾ ಸ್ಥಾನಗಳಿಗೆ ಏಕಕಾಲದಲ್ಲಿ ಮತದಾನ ನಡೆಯಿತು.
ಈ ಸುತ್ತಿನಲ್ಲಿ 17.70 ಕೋಟಿ ಅರ್ಹ ಮತದಾರರಿಗೆ 1.92 ಲಕ್ಷ ಮತಗಟ್ಟೆಗಳಲ್ಲಿ 19 ಲಕ್ಷಕ್ಕೂ ಹೆಚ್ಚು ಮತಗಟ್ಟೆ ಅಧಿಕಾರಿಗಳನ್ನ ನಿಯೋಜಿಸಲಾಗಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಟಿಎಂಸಿಯ ಫೈರ್ ಬ್ರಾಂಡ್ ನಾಯಕ ಮೊಹುವಾ ಮೊಯಿತ್ರಾ ಮತ್ತು ಎಐಎಂಐಎಂನ ಅಸಾದುದ್ದೀನ್ ಒವೈಸಿ, ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ, ಟಿಎಂಸಿಯ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್, ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈಎಸ್ ಶರ್ಮಿಳಾ ಸೇರಿದಂತೆ ಪ್ರಮುಖ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಲೋಕಸಭಾ ಚುನಾವಣೆ ಏಪ್ರಿಲ್ 19 ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.
BREAKING : ಮುಂಬೈನಲ್ಲಿ ಧೂಳು ಬಿರುಗಾಳಿಗೆ ಬೃಹತ್ ಜಾಹೀರಾತು ಫಲಕ ಬಿದ್ದು, ಮೂವರು ಸಾವು, 57 ಮಂದಿಗೆ ಗಾಯ
ಎಚ್ಚರ ; ಭೂಮಿಯತ್ತ ಧಾಮಿಸುತ್ತಿದೆ ಬೃಹತ್ ಕ್ಷುದ್ರಗ್ರಹ ; ಸಾಮೂಹಿಕ ವಿನಾಶದ ಬೆದರಿಕೆ, ನಾಸಾ ಎಚ್ಚರಿಕೆ
ರೇವಣ್ಣಗೆ ಜಾಮೀನು ಮಂಜೂರು ವಿಚಾರ : ಕಾಂಗ್ರೆಸ್ ಪ್ರಕರಣವನ್ನು ‘ಮಾನಿಟರ್’ ಮಾಡುತ್ತಿದೆ : ಆರ್.ಅಶೋಕ್ ಆರೋಪ