ಬೆಂಗಳೂರು: ಏಪ್ರಿಲ್.26ರಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ. 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಶೇ.100ರಷ್ಟು ಮತದಾನ ಮಾಡಿರುವ ಮತಗಟ್ಟೆಗಳಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂಬುದಾಗಿ ರಾಜ್ಯ ಚುನಾವಣಾ ಆಯೋಗ ಘೋಷಣೆ ಮಾಡಿದೆ.

ಈ ಕುರಿತಂತೆ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಎಸ್ ವಿಇಇಪಿ ನೋಡಲ್ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅದರಲ್ಲಿ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ, ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಮತದಾನವು ದಿನಾಂಕ: 26.04.2024 ರಂದು (ಎರಡನೇ ಹಂತ) ಹಾಗೂ ದಿನಾಂಕ: 07.05.2024 ರಂದು (ಮೂರನೇ ಹಂತ) ನಡೆಯಲಿದೆ, ಈ ಸಂಬಂಧ ಮತದಾರರಲ್ಲಿ ಜಾಗೃತಿ ಮೂಡಿಸಲು ಅಗತ್ಯ ಪ್ರಚಾರ/SVEEP ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ/ಆಯೋಜಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಲು ಭಾರತ ಚುನಾವಣಾ ಆಯೋಗವು ನಿರ್ದೇಶನಗಳನ್ನು ನೀಡಿರುತ್ತದೆ ಎಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ (AC no 110 booth no 15 yelnir guthyadka, AC no 200 booth no 86Banjarumale) 2 ಮತಗಟ್ಟೆಗಳಲ್ಲಿ ಶೇ. 100% ರಷ್ಟು ಮತದಾನ ಮಾಡಲು ನಿರ್ಧರಿಸಲಾಗಿರುತ್ತದೆ ಎಂದು ತಿಳಿಸಿರುತ್ತಾರೆ.

ಈ ನಿಟ್ಟಿನಲ್ಲಿ ರಾಜ್ಯದಲ್ಲಿ ನಡೆಯುವ 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಶೇ. 100% ರಷ್ಟು ಮತದಾನವಾಗುವ ಮತಗಟ್ಟೆಗಳಿಗೆ ಪ್ರಶಸ್ತಿ & ಪುರಸ್ಕಾರವನ್ನು ನೀಡಲು ಹಾಗೂ ಪುರಸ್ಕೃತ ಜಿಲ್ಲೆಗೆ SVEEP ವತಿಯಿಂದ ಹೆಚ್ಚುವರಿ ಅನುದಾನ ಒದಗಿಸಲು ನಿರ್ಧರಿಸಲಾಗಿದೆ ಎಂದು ಹೇಳಿದೆ.

ಆದ್ದರಿಂದ, ಶೇಕಡವಾರು ಮತದಾನ ಹೆಚ್ಚಿಸಲು ಎಲ್ಲಾ ರೀತಿಯ ಅಗತ್ಯ ಪ್ರಚಾರ/SVEEP ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದಾಖಲೆ ಪ್ರಮಾಣದ ಶೇ. 100% ಮತದಾನ ಯಶಸ್ವಿಯಾಗುವಂತೆ ಪ್ರಯತ್ನಿಸಲು ತಿಳಿಸಿದೆ. ತಮ್ಮ ಜಿಲ್ಲೆಗೆ ಸಂಬಂಧಿಸಿದ ಶೇ. 100% ಮತದಾನವಾಗಿರುವ ಮತಗಟ್ಟೆಗಳ ಮಾಹಿತಿಯನ್ನು ಈ ಕಛೇರಿಯ ಇ- ಮೇಲ್ ವಿಳಾಸ consveep@gmail.com ಗೆ ಹಾಗೂ ಭೌತಿಕ ಪ್ರತಿಗಳನ್ನು ಈ ಕಛೇರಿಗೆ ಕಳುಹಿಸಿಕೊಡುವಂತೆ ಕೋರಲು ನಿರ್ದೇಶಿಸಿದ್ದಾರೆ.

“ಅಮೆರಿಕಕ್ಕೆ ಮೋದಿಯಂತಹ ನಾಯಕನ ಅಗತ್ಯವಿದೆ” : ‘ನಮೋ’ ಶ್ಲಾಘಿಸಿದ ‘ಜೆಪಿ ಮೋರ್ಗಾನ್ CEO’

WhatsApp Updates:ಶೀಘ್ರದಲ್ಲೇ ವಾಟ್ಸಪ್ ನಲ್ಲಿ ಮೊಬೈಲ್ ಸಂಖ್ಯೆಯನ್ನು ಉಳಿಸದೆ ಕರೆ ಮಾಡುವ ಸೌಲಭ್ಯ

Share.
Exit mobile version