ಬೆಂಗಳೂರು: ರಾಜ್ಯದ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಸದ್ಯ 14 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳ ನಾಮಪತ್ರಗಳ ಪರಿಶೀಲನೆ ಕಾರ್ಯ ಮುಗಿದಿದ್ದು, ಒಟ್ಟು 276 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎನ್ನಲಾಗಿದೆ.ಈ ನಡುವೆ 14 ಕ್ಷೇತ್ರಗಳಲ್ಲಿಒಟ್ಟು 358 ಅಭ್ಯರ್ಥಿಗಳಿಂದ 492 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಆ ಪೈಕಿ 276 ಅಭ್ಯರ್ಥಿಗಳ 384 ನಾಮಪತ್ರಗಳು ಕ್ರಮಬದ್ಧವಾಗಿದ್ದು, 60 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಮುಖ್ಯ ಚುನಾವಣಾಧಿಕಾರಿಗಳು (ಸಿಇಒ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಏ.8ರಂದು ನಾಮಪತ್ರ ವಾಪಸ್ ಪಡೆಯಲು ಕೊನೆದಿನವಾಗಿದೆ.
ಕಣದಲ್ಲಿ ಕೋಟ್ಯಧಿಪತಿ ಅಭ್ಯರ್ಥಿಗಳೇ ಇದ್ದು, ಹಲವ ಆಸ್ತಿಯಲ್ಲಿ ಹೆಚ್ಚಳವಾಗಿದೆ ಕೂಡ. ಇಲ್ಲಿ ಟಾಪ್ 6 ಶ್ರೀಮಂತ ಹಾಗೂ ಟಾಪ್ 6 ಬಡ ಅಭ್ಯರ್ಥಿಗಳ ಪಟ್ಟಿಯ ವಿವರ ನಿಮಗಾಗಿ ನೀಡಲಾಗಿದೆ.
ಈ ನಡುವೆ 2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬದ ಇಬ್ಬರು ಸೇರಿದಂತೆ ಜೆಡಿಎಸ್ನ ಮೂವರು ಸದಸ್ಯರಲ್ಲಿ, ಪಕ್ಷದ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅತ್ಯಂತ ಶ್ರೀಮಂತರಾಗಿದ್ದಾರೆ. ಆದರೆ, ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಆಸ್ತಿ ಕುಮಾರಸ್ವಾಮಿ ಅವರ ಆಸ್ತಿಗಿಂತ ಮೂರು ಪಟ್ಟು ಹೆಚ್ಚಾಗಿದೆ.
ಟಾಪ್ 6 ಶ್ರೀಮಂತ ಅಭ್ಯರ್ಥಿಗಳು ವಿವರ ಹೀಗಿದೆ
1. ವೆಂಕಟರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು
ಕ್ಷೇತ್ರ : ಮಂಡ್ಯ,
ಪಕ್ಷ : ಕಾಂಗ್ರೆಸ್
ಆಸ್ತಿ : 622 ಕೋಟಿ ರೂ.
2. ಡಿಕೆ ಸುರೇಶ್
ಕ್ಷೇತ್ರ : ಬೆಂಗಳೂರು ಗ್ರಾಮಾಂತರ,
ಪಕ್ಷ : ಕಾಂಗ್ರೆಸ್
ಆಸ್ತಿ : 593 ಕೋಟಿ ರೂ.
3. ಎಚ್‌ಡಿ ಕುಮಾರಸ್ವಾಮಿ
ಕ್ಷೇತ್ರ : ಮಂಡ್ಯ,
ಪಕ್ಷ : ಜೆಡಿಎಸ್
ಆಸ್ತಿ : 217.2 ಕೋಟಿ ರೂ.
4. ಪ್ರೊ. ಎಂವಿ ರಾಜೀವ್‌ಗೌಡ
ಕ್ಷೇತ್ರ : ಬೆಂಗಳೂರು ಉತ್ತರ,
ಪಕ್ಷ : ಕಾಂಗ್ರೆಸ್
ಆಸ್ತಿ : 134 ಕೋಟಿ ರೂ.
5. ರಕ್ಷಾ ರಾಮಯ್ಯ
ಕ್ಷೇತ್ರ : ಚಿಕ್ಕಬಳ್ಳಾಪುರ,
ಪಕ್ಷ : ಕಾಂಗ್ರೆಸ್
ಆಸ್ತಿ : 99.8 ಕೋಟಿ ರೂ.
6. ಡಾ ಸಿಎನ್ ಮಂಜುನಾಥ್
ಕ್ಷೇತ್ರ : ಬೆಂಗಳೂರು ಗ್ರಾಮಾಂತರ,
ಪಕ್ಷ : ಬಿಜೆಪಿ
ಆಸ್ತಿ : 98.3 ಕೋಟಿ ರೂ.
ಟಾಪ್ 6 ಬಡ ಅಭ್ಯರ್ಥಿಗಳು
1. ಕ್ಯಾಪ್ಟನ್ ಬ್ರಿಜೇಶ್ ಚೌಟಾ
ಕ್ಷೇತ್ರ : ದಕ್ಷಿಣ ಕನ್ನಡ,
ಪಕ್ಷ : ಬಿಜೆಪಿ
ಆಸ್ತಿ : 70.8 ಲಕ್ಷ ರೂ.
2. ಆರ್ ಪದ್ಮರಾಜ್
ಕ್ಷೇತ್ರ : ದಕ್ಷಿಣ ಕನ್ನಡ,
ಪಕ್ಷ : ಕಾಂಗ್ರೆಸ್
ಆಸ್ತಿ : 1.8 ಕೋಟಿ ರೂ.
3. ಕೋಟ ಶ್ರೀನಿವಾಸ ಪೂಜಾರಿ
ಕ್ಷೇತ್ರ : ಉಡುಪಿ – ಚಿಕ್ಕಮಗಳೂರು,
ಪಕ್ಷ : ಬಿಜೆಪಿ
ಆಸ್ತಿ : 1.1 ಕೋಟಿ ರೂ.
4. ಸೌಮ್ಯ ರೆಡ್ಡಿ
ಕ್ಷೇತ್ರ : ಬೆಂಗಳೂರು ದಕ್ಷಿಣ,
ಪಕ್ಷ : ಕಾಂಗ್ರೆಸ್
ಆಸ್ತಿ : 2.3 ಕೋಟಿ ರೂ.
5. ತೇಜಸ್ವಿ ಸೂರ್ಯ
ಕ್ಷೇತ್ರ : ಬೆಂಗಳೂರು ದಕ್ಷಿಣ,
ಪಕ್ಷ : ಬಿಜೆಪಿ
ಆಸ್ತಿ : 4.1 ಕೋಟಿ ರೂ.
6. ಗೋವಿಂದ ಕಾರಜೋಳ
ಕ್ಷೇತ್ರ : ಚಿತ್ರದುರ್ಗ, ಪಕ್ಷ : ಬಿಜೆಪಿ
ಆಸ್ತಿ : 4.3 ಕೋಟಿ ರೂ.