ಬೆಂಗಳೂರು: ರಾಜ್ಯದಲ್ಲಿನ ಮೊದಲ ಹಂತದ ಲೋಕಸಮರದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಬುಧವಾರಕ್ಕೆ ಮುಕ್ತಯವಾಗಿದೆ. ಈ ನಡುವೆ ರಾಜ್ಯದಲ್ಲಿ ಒಟ್ಟು 358 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ವಾಪಸ್ಸು ತೆಗೆದುಕೊಂಡ ಬಳಿಕ ಒಟ್ಟು ಅಭ್ಯರ್ಥಿಗಳ ಸಂಖ್ಯೆ ಲೆಕ್ಕ ಸಿಗಲಿದೆ. ಒಟ್ಟು 358 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಈ ಪೈಕಿ 333 ಪುರುಷರು ಹಾಗೂ 25 ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ.
ಇದರಲ್ಲಿ ಒಟ್ಟು 211 ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನೋಂದಾಯಿತ ಮಾನ್ಯತೆ ಪಡೆಯದ ವಿವಿಧ ಪಕ್ಷಗಳ ಒಟ್ಟು 161 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಎಲ್ಲಿಲ್ಲಿ ಎಷ್ಟು ಅಭ್ಯರ್ಥಿಗಳು ನಾಮಪತ್ರ?:
ಉಡುಪಿ ಚಿಕ್ಕಮಗಳೂರು – 13
ಹಾಸನ – 21
ದಕ್ಷಿಣ ಕನ್ನಡ – 11
ಚಿತ್ರದುರ್ಗ (ಎಸ್‌ಸಿ) – 28
ತುಮಕೂರು – 22
ಮಂಡ್ಯ – 27
ಮೈಸೂರು – 28
ಚಾಮರಾಜನಗರ (ಎಸ್‌ಸಿ) – 25
ಬೆಂಗಳೂರು ಗ್ರಾಮಾಂತರ – 31
ಬೆಂಗಳೂರು ಉತ್ತರ – 25
ಬೆಂಗಳೂರು ಕೇಂದ್ರ – 32
ಬೆಂಗಳೂರು ದಕ್ಷಿಣ – 34
ಚಿಕ್ಕಬಳ್ಳಾಪುರ – 36
ಕೋಲಾರ (ಎಸ್‌ಸಿ) – 2