ಬೆಂಗಳೂರು: ರಾಜ್ಯದ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಸದ್ಯ 14 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳ ನಾಮಪತ್ರಗಳ ಪರಿಶೀಲನೆ ಕಾರ್ಯ ಮುಗಿದಿದ್ದು, ಒಟ್ಟು 276 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎನ್ನಲಾಗಿದೆ.ಈ ನಡುವೆ 14 ಕ್ಷೇತ್ರಗಳಲ್ಲಿಒಟ್ಟು 358 ಅಭ್ಯರ್ಥಿಗಳಿಂದ 492 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಆ ಪೈಕಿ 276 ಅಭ್ಯರ್ಥಿಗಳ 384 ನಾಮಪತ್ರಗಳು ಕ್ರಮಬದ್ಧವಾಗಿದ್ದು, 60 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಮುಖ್ಯ ಚುನಾವಣಾಧಿಕಾರಿಗಳು (ಸಿಇಒ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಏ.8ರಂದು ನಾಮಪತ್ರ ವಾಪಸ್ ಪಡೆಯಲು ಕೊನೆದಿನವಾಗಿದೆ.
ಪಾನಿಪುರಿ ಮಾರಾಟಗಾರನ ಮಗನ ‘MBBS’ ಪ್ರವೇಶ ರದ್ದುಗೊಳಿಸಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
ಜನವರಿಯಲ್ಲಿ 8.7 ಟನ್ ಗೋಲ್ಡ್ ಖರೀದಿಸಿ ಇಟ್ಟ ಆರ್‌ಬಿಐ! ಕಾರಣ ಏನು ಗೊತ್ತಾ?
ಪತ್ನಿ ಪದೇ ಪದೇ ಅತ್ತೆ-ಮಾವನ ಮನೆಯಿಂದ ಹೋಗುವುದು ಪತಿಗೆ ಹಿಂಸೆ ನೀಡಿದಂತೆ: ಹೈಕೋರ್ಟ್
.ಕ್ಷೇತ್ರವಾರು ಮಾಹಿತಿ ಈ ಕೆಳಗಿನಂತಿದೆ.
- ಉಡುಪಿ-ಚಿಕ್ಕಮಗಳೂರು: 13 ಅಭ್ಯರ್ಥಿಗಳು – 19 ಉಮೇದುವಾರಿಕೆ ಸಲ್ಲಿಕೆ – 10 ನಾಮಪತ್ರಗಳು ಕ್ರಮಬದ್ಧ – 4 ತಿರಸ್ಕೃತ
- ಹಾಸನ: 21 ಅಭ್ಯರ್ಥಿಗಳು – 29 ನಾಮಪತ್ರ ಸಲ್ಲಿಕೆ – 18 ಕ್ರಮಬದ್ಧ – 3 ತಿರಸ್ಕೃತ
- ದಕ್ಷಿಣ ಕನ್ನಡ: 11 ಅಭ್ಯರ್ಥಿಗಳು – 21 ನಾಮಪತ್ರ ಸಲ್ಲಿಕೆ – 10 ಕ್ರಮಬದ್ಧ – 2 ತಿರಸ್ಕೃತ
- ಚಿತ್ರದುರ್ಗ: 28 ಅಭ್ಯರ್ಥಿಗಳು – 36 ನಾಮಪತ್ರ ಸಲ್ಲಿಕೆ – 24 ಕ್ರಮಬದ್ಧ – 4 ತಿರಸ್ಕೃತ
- ತುಮಕೂರು: 22 ಅಭ್ಯರ್ಥಿಗಳು – 31 ಉಮೇದುವಾರಿಕೆ – 22 ಕ್ರಮಬದ್ಧ
- ಮಂಡ್ಯ: 27 ಅಭ್ಯರ್ಥಿಗಳು – 37 ನಾಮಪತ್ರ ಸಲ್ಲಿಕೆ – 10 ತಿರಸ್ಕೃತ – 19 ಕ್ರಮಬದ್ಧ
- ಮೈಸೂರು: 28 ಅಭ್ಯರ್ಥಿಗಳು – 37 ನಾಮಪತ್ರ ಸಲ್ಲಿಕೆ – 5 ತಿರಸ್ಕೃತ – 24 ಕ್ರಮಬದ್ಧ
- ಚಾಮರಾಜನಗರ: 25 ಅಭ್ಯರ್ಥಿಗಳು – 36 ಉಮೇದುವಾರಿಕೆ – 22 ಕ್ರಮಬದ್ಧ – 5 ತಿರಸ್ಕೃತ
- ಬೆಂಗಳೂರು ಗ್ರಾಮಾಂತರ: 31 ಅಭ್ಯರ್ಥಿಗಳು – 45 ನಾಮಪತ್ರ ಸಲ್ಲಿಕೆ – 7 ತಿರಸ್ಕೃತ – 27 ಕ್ರಮಬದ್ಧ
- ಬೆಂಗಳೂರು ಉತ್ತರ: 25 ಅಭ್ಯರ್ಥಿಗಳು – 36 ನಾಮಪತ್ರ ಸಲ್ಲಿಕೆ – 6 ತಿರಸ್ಕೃತ – 21 ಕ್ರಮಬದ್ಧ
- ಬೆಂಗಳೂರು ಕೇಂದ್ರ: 32 ಅಭ್ಯರ್ಥಿಗಳು – 40 ಉಮೇದುವಾರಿಕೆ ಸಲ್ಲಿಕೆ – 28 ಕ್ರಮಬದ್ಧ – 4 ತಿರಸ್ಕೃತ
- ಚಿಕ್ಕಬಳ್ಳಾಪುರ: 36 ಅಭ್ಯರ್ಥಿಗಳು – 43 ನಾಮಪತ್ರ ಸಲ್ಲಿಕೆ – 4 ತಿರಸ್ಕೃತ – 32 ಕ್ರಮಬದ್ಧ
- ಕೋಲಾರ: 25 ಅಭ್ಯರ್ಥಿಗಳು – 33 ಉಮೇದುವಾರಿಕೆ ಸಲ್ಲಿಕೆ – 6 ತಿರಸ್ಕೃತ – 19 ನಾಮಪತ್ರಗಳು ಕ್ರಮಬದ್ಧವಾಗಿವೆ.
ದಿನಾಂಕ 05-04-2024 ರ ಪತ್ರಿಕಾ ಪ್ರಕಟಣೆ. #ceokarnataka #LokaSabhaElection2024 #Election2024 #seizure #management #illegal #saynotoinducements #beafairvoter pic.twitter.com/cjFxYS1ETY
— Chief Electoral Officer, Karnataka (@ceo_karnataka) April 5, 2024