ನವದೆಹಲಿ: ಇಂದು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡಿದರು. ಈ ಭಾಷಣದ ಬಳಿಕ, 17ನೇ ಲೋಕಸಭೆಗೆ ಅಧಿಕೃತವಾಗಿ ತೆರೆಯನ್ನು ಎಳೆಯಲಾಗಿದೆ. ಈ ಮೂಲಕ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಲಾಯಿತು.
ಕಳೆದ ಐದು ವರ್ಷಗಳ ಆಡಳಿತದ ಅವಧಿಯನ್ನು “ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ”ಯನ್ನು ಭಾರತ ಕಂಡಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ವ್ಯಾಖ್ಯಾನಿಸಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿಯವರು 17ನೇ ಲೋಕಸಭೆಯ ಅಂತಿಮ ಅಧಿವೇಶನದ ಅಂತಿಮ ದಿನದಂದು ಸಂಸತ್ತಿನಲ್ಲಿ ಮಾತನಾಡಿದಂತ ಅವರು, ಈ ಐದು ವರ್ಷಗಳು ದೇಶದಲ್ಲಿ ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆಯ ಬಗ್ಗೆ ಇದ್ದವು. ಸುಧಾರಣೆ ಮತ್ತು ಕಾರ್ಯಕ್ಷಮತೆ ಎರಡೂ ನಡೆಯುವುದು ಬಹಳ ಅಪರೂಪ ಮತ್ತು ನಾವು ನಮ್ಮ ಕಣ್ಣ ಮುಂದೆಯೇ ಪರಿವರ್ತನೆಯನ್ನು ನೋಡಬಹುದು ಎಂದು ಹೇಳಿದರು.
ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ ಪ್ರಧಾನಿ ಮೋದಿ ಕೃತಜ್ಞತೆ
ನೀವು ಯಾವಾಗಲೂ ನಗುತ್ತಿದ್ದಿರಿ. ನಿಮ್ಮ ನಗು ಎಂದಿಗೂ ಮರೆಯಾಗಲಿಲ್ಲ. ನೀವು ಈ ಸದನಕ್ಕೆ ಹಲವಾರು ಸಂದರ್ಭಗಳಲ್ಲಿ ಸಮತೋಲಿತ ಮತ್ತು ನಿಷ್ಪಕ್ಷಪಾತ ರೀತಿಯಲ್ಲಿ ಮಾರ್ಗದರ್ಶನ ನೀಡಿದ್ದೀರಿ, ಇದಕ್ಕಾಗಿ ನಾನು ನಿಮ್ಮನ್ನು ಪ್ರಶಂಸಿಸುತ್ತೇನೆ. ಕೋಪ, ಆರೋಪಗಳ ಕ್ಷಣಗಳು ಇದ್ದವು. ಆದರೆ ನೀವು ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಯಂತ್ರಿಸಿದ್ದೀರಿ ಮತ್ತು ಸದನವನ್ನು ನಡೆಸಿದ್ದೀರಿ. ನಮಗೆ ಮಾರ್ಗದರ್ಶನ ನೀಡಿದ್ದೀರಿ. ಇದಕ್ಕಾಗಿ ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ ಬಳಿಕ ಸದನದ ಎಲ್ಲಾ ಸದಸ್ಯರಿಗೆ ಸ್ಪೀಕರ್ ಕೂಡ ಕೃತಜ್ಞತೆಯನ್ನು ಸಲ್ಲಿಸುವ ಮೂಲಕ, ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ 17ನೇ ಲೋಕಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
Lok Sabha adjourned sine die, as Budget session concludes. pic.twitter.com/5YLdXuCydJ
— ANI (@ANI) February 10, 2024
‘ನಮೋ ಹ್ಯಾಟ್ರಿಕ್’: ಸಂಸತ್ತಿಗೆ ‘ಕೇಸರಿ ಟೀ ಶರ್ಟ್’ ಧರಿಸಿ ಬಂದ ಸಚಿವ ಅನುರಾಗ್ ಠಾಕೂರ್
ರಾಜ್ಯ ‘ಗುತ್ತಿಗೆ, ಹೊರಗುತ್ತಿಗೆ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ: ಸಮಾನ ಕೆಲಸಕ್ಕೆ, ‘ಸಮಾನ ವೇತನ’ ಜಾರಿ