ಹುಬ್ಬಳ್ಳಿ: ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ 1,200 ಎಕರೆ ಭೂಮಿಯನ್ನು ಗುರುತಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿಗಳು ಜಿಲ್ಲೆಯ ತಹಶೀಲ್ದಾರ್ ಗಳಿಗೆ ಪತ್ರ ಬರೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ
ತಹಶೀಲ್ದಾರರು ಗುರುತಿಸಿರುವ ಎರಡು ಸ್ಥಳಗಳು ಹಿರೇಬೆಣಕಲ್-ಯಡೇಹಳ್ಳಿಯ ಐತಿಹಾಸಿಕ ಮಹತ್ವದ ಸ್ಮಾರಕಗಳು ಮತ್ತು ಉದ್ದೇಶಿತ ಕರಡಿ ಅಭಯಾರಣ್ಯವಾದ ಅರಿಸಿನಕೆರೆಯ ಪಕ್ಕದಲ್ಲಿವೆ.
ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ್ ಮಾತನಾಡಿ, ವಿಶ್ವ ಪರಂಪರೆಯ ತಾಣ ಹಂಪಿ ಮತ್ತು ಹಿರೇಬೆಣಕಲ್ ನಿಂದ 3 ರಿಂದ 4 ಕಿ.ಮೀ ದೂರದಲ್ಲಿರುವ ಭೂಮಿಯನ್ನು ಜಿಲ್ಲಾಡಳಿತ ಸಮೀಕ್ಷೆ ನಡೆಸಿ ಗುರುತಿಸಿದೆ.
ಹಿರೇಬೆಣಕಲ್ ಮತ್ತು ಅರಿಸಿನಕೆರೆ ಬಳಿಯ ಮೀಸಲು ಅರಣ್ಯ ಪ್ರದೇಶದ ಪಕ್ಕದ ಜಮೀನುಗಳು ಅಣು ವಿದ್ಯುತ್ ಸ್ಥಾವರಕ್ಕೆ ಸೂಕ್ತವಾಗಿವೆ ಎಂದು ತಾಲ್ಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ. ಇಲ್ಲಿ ಘಟಕ ಸ್ಥಾಪಿಸುವುದರಿಂದ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಮತ್ತು ಪರಿಸರಕ್ಕೆ ತೊಂದರೆಯಾಗುತ್ತದೆ’ ಎಂದು ಶ್ರೀನಾಥ್ ಶನಿವಾರ ತಿಳಿಸಿದರು.
ಕೇಂದ್ರ ಸರ್ಕಾರ ಹಲವು ಜಿಲ್ಲಾಡಳಿತಗಳಿಗೆ ಪತ್ರ ಬರೆದಿದೆ ಎಂದು ಕೊಪ್ಪಳ ಜಿಲ್ಲಾಡಳಿತದ ಮೂಲಗಳು ತಿಳಿಸಿವೆ