ಬೆಂಗಳೂರು : ಕನ್ನಡದ ಖ್ಯಾತ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ (94) ವಿಧವಿಶರಾಗಿದ್ದು, ಇಂದು ಬೆಳಿಗ್ಗೆ 8 ಗಂಟೆಯಿಂದ 2 ಗಂಟೆಯವರೆಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ.
ಭೈರಪ್ಪ ಅವರು 1931 ಆಗಸ್ಟ್ 20 ರಂದು ಹಾಸನ ಜಿಲ್ಲೆಯ ಸಂತೇಶಿವಾರ ಗ್ರಾಮದಲ್ಲಿ ಜನಿಸಿದರು. ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಎಂಬುದು ಎಸ್.ಎಲ್. ಬೈರಪ್ಪ ಅವರ ಪೂರ್ಣ ಹೆಸರು. ಹೊಯ್ಸಳ ಕರ್ನಾಟಕ ಬ್ರಾಹ್ಮಣ ಕುಟುಂಬದಲ್ಲಿ ಭೈರಪ್ಪ ಅವರು ಜನಿಸುತ್ತಾರೆ. ಎಸ್ ಎಲ್ ಭೈರಪ್ಪ ಪ್ರಸಿದ್ಧ ಕಾದಂಬರಿಕಾರ ತತ್ವಜ್ಞಾನಿ ಲೇಖಕರಾಗಿದ್ದರು. 1958 ರಲ್ಲಿ ಎಂ ಎ ಫಿಲಾಸಫಿ ಪಡೆದಿದ್ದರು.1963 ರಲ್ಲಿ ಕ್ಷೇತ್ರದಲ್ಲಿ ಪಿಎಚ್ ಡಿ ಮಾಡಿದ್ದರು.
ಭೈರಪ್ಪ ಅವರ ಕೃತಿಗಳು ಕರ್ನಾಟಕ ರಾಜ್ಯದಲ್ಲಿ ಜನಪ್ರಿಯವಾಗಿವೆ ಮತ್ತು ಅವರನ್ನು ಆಧುನಿಕ ಭಾರತದ ಜನಪ್ರಿಯ ಕಾದಂಬರಿಕಾರರಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. 2023ರಲ್ಲಿ ಎಸ್ಎಲ್ ಭೈರಪ್ಪ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಕನ್ನಡ ಕಾದಂಬರಿ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.
ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ
ಬೈರಪ್ಪ ಅವರಿಗೆ ಬಂದ ಪದವಿಗಳು ಮತ್ತು ಪ್ರಶಸ್ತಿಗಳು ಅಂದರೇ, ಭೈರಪ್ಪ ಅವರಿಗೆ 2010ರಲ್ಲಿ ಸರಸ್ವತಿ ಸಮ್ಮಾನ್, 2015ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್, 2016ರಲ್ಲಿ ಪದ್ಮಶ್ರೀ, ಮತ್ತು 2023ರಲ್ಲಿ ಪದ್ಮಭೂಷಣ ಪ್ರಶಸ್ತಿಗಳು ಲಭಿಸಿವೆ. ವಿಶೇಷತೆ ಅಂದರೆ, ಭೈರಪ್ಪನವರ ಕಾದಂಬರಿಗಳು ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿದ್ದು, ಅನೇಕ ಸಾರ್ವಜನಿಕ ಚರ್ಚೆಗಳಿಗೆ ಕಾರಣವಾಗಿವೆ.