Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಜೇಡ ಕಡಿತ’ ಅಪಾಯಕಾರಿಯೇ.? ಜೇಡ ಕಚ್ಚಿದ್ರೆ ಏನಾಗುತ್ತೆ ಗೊತ್ತಾ?

22/03/2026 10:09 PM

ಅಂತರಂಗದ ಬದುಕಿಗೆ ಲಗ್ಗೆ ಇಟ್ಟ AI; ಈಗ ‘AI-ಸೆಕ್ಷುವಲ್’ ಹೊಸ ಟ್ರೆಂಡ್! | AI-sexual

22/03/2026 9:41 PM

ಇಸ್ರೇಲ್ – ಇರಾನ್ ವಾರ್ ಎಫೆಕ್ಟ್; ವಿಮಾನಯಾನ ಸಂಸ್ಥೆಗಳಿಗೆ ಬರೋಬ್ಬರಿ 5,000 ಕೋಟಿ ನಷ್ಟ

22/03/2026 9:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೇಡಿಕೆಗೆ ಅನುಗುಣವಾಗಿ ಔಷಧಿಗಳ ಪಟ್ಟಿ 732 ರಿಂದ 1032ಕ್ಕೆ ಹೆಚ್ಚಳ: ಸಚಿವ ದಿನೇಶ್ ಗುಂಡೂರಾವ್
KARNATAKA

ಬೇಡಿಕೆಗೆ ಅನುಗುಣವಾಗಿ ಔಷಧಿಗಳ ಪಟ್ಟಿ 732 ರಿಂದ 1032ಕ್ಕೆ ಹೆಚ್ಚಳ: ಸಚಿವ ದಿನೇಶ್ ಗುಂಡೂರಾವ್

By kannadanewsnow0913/03/2025 7:54 PM

ಬೆಂಗಳೂರು: ರಾಜ್ಯದಲ್ಲಿ ಔಷಧಿಗಳ ಕೊರೆತೆಯನ್ನ ಸರಿಪಡಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಲವು ಕ್ರಮಗಳನ್ನ ಕೈಗೊಂಡಿದ್ದು, ಔಷಧಿಗಳ ಸರಬರಾಜಿನಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಅಶ್ವಥ್ ನಾರಾಯಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಬೇಡಿಕೆಗೆ ಅನುಗುಣವಾಗಿ ಔಷಧಿಗಳ ಪಟ್ಟಿಯನ್ನು 732 ರಿಂದ 1032 ಕ್ಕೆ ಹೆಚ್ಚಿಸಲಾಗಿದ್ದು, ಈ ಬಾರಿಯ ಟೆಂಡರ್ ನಲ್ಲಿ ಖರೀಧಿಸಲಾಗುತ್ತಿದೆ ಎಂದರು.

ಕೆಲವೊಂದು ಔಷಧಿಗಳ ಕೊರತೆಗೆ ಕಾರಣ ಟೆಂಡರುಗಳಲ್ಲಿ ಯಾರೂ ಭಾಗವಹಿಸದೇ ಇರುವುದು. ಈ ಔಷಧಿಗಳ ಮೌಲ್ಯ ಮತ್ತು ಪ್ರಮಾಣ ಕಡಿಮೆ ಇರುವುದರಿಂದ ಹಲವಾರು ಬಾರಿ ಟೆಂಡರ್ ಆಹ್ವಾನಿಸದರೂ ಯಾರೂ ಸ್ಪಂದಿಸಿಲ್ಲ. ಹೀಗಾಗಿ ಔಷಧಿ ಸರಬರಾಜು, ಖರೀದಿ ಪ್ರಕ್ರಿಯೆಯ ಟೆಂಡರ್ ಷರತ್ತುಗಳನ್ನು ಸರಳೀಕರಣ ಮಾಡಿ ಔಷಧಿಗಳನ್ನು ಸರಬರಾಜು ಮಾಡಲು ಹೆಚ್ಚಿನ ಬಿಡ್ ದಾರರು ಭಾಗವಹಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು. ಪ್ರಸ್ತುತ ಆರೋಗ್ಯ ಸಂಸ್ಥೆಗಳು ತುರ್ತು ಸಂದರ್ಭದಲ್ಲಿ ಅಗತ್ಯ ಪ್ರಮಾಣದಲ್ಲಿ ಔಷಧಗಳನ್ನು ತಮ್ಮ ಮಟ್ಟದಲ್ಲಿ ಸೂಕ್ತ ಪ್ರಾಧಿಕಾರದ ಅನುಮೋದನೆಯೊಂದಿಗೆ ಸ್ಥಳೀಯ ರಾಷ್ಟ್ರೀಯ ಉಚಿತ ಸೇವೆಗಳ ಕಾರ್ಯಕ್ರಮದ ಅಡಿಯಲ್ಲಿ, ಆರೋಗ್ಯ ಸಂಸ್ಥೆಗಳು ಕೊರತೆ ಔಷಧಿಗಳನ್ನು ಅಗತ್ಯ ಪ್ರಮಾಣದಲ್ಲಿ ಖರೀದಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತಿದೆ. ತ್ವರಿತವಾಗಿ ಅವಶ್ಯವಿರುವ ಔಷಧಿಗಳನ್ನು ಖರೀದಿಸಲು ಕೆಎಸ್‍ಎಂಎಸ್‍ಸಿಎಲ್ ನ ಹಿಂದಿನ ಸರಬರಾಜುದಾರರಿಂದ 25% ಹೆಚ್ಚುವರಿ ಪ್ರಮಾಣದಲ್ಲಿ ಖರೀದಿಸಲು ಕ್ರಮ ವಹಿಸಲಾಗುತ್ತಿದೆ ಹಾಗೂ 23 ಔಷಧಿಗಳನ್ನು 4G Excemption ಮೂಲಕ KAPL (ಕರ್ನಾಟಕ ಆ್ಯಂಟಿ ಬಯೋಟಿಕ್ಸ್ ಅಂಡ್ ಫಾರ್ಮ್ ಸ್ಯೂಟಿಕಲ್ಸ್ ಲಿಮಿಟೆಡ್) ನಿಂದ ಒಟ್ಟು 9.50ಕೋಟಿ ಮೌಲ್ಯದ ಔಷಧಿಗಳನ್ನು ಖರೀದಿಸಲು ಪ್ರಸ್ತಾವನೆ ಪರಿಶೀಲನೆಯಲ್ಲಿರುತ್ತದೆ ಎಂದು ಸಚಿವರು ಸ್ಪಷ್ಟನೆ ನೀಡಿದರು.‌

ಇನ್ನು ರಾಜ್ಯದಲ್ಲಿ ನಕಲಿ ಔಷಧ ಮಾರಾಟ ಜಾಲವನ್ನು ಹತ್ತಿಕ್ಕಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಔಷಧ ಮಾರಾಟಗಾರರ ವಿರುದ್ಧ ಕಾರ್ಯಾಚರಣೆ ನಡೆಸಿ 2023-24ನೇ ಸಾಲಿನಲ್ಲಿ 10 ಮೊಕದ್ದಮೆಗಳನ್ನು ಹಾಗೂ 2024-25ನೇ ಸಾಲಿನಲ್ಲಿ 5 ಮೊಕದ್ದಮೆಗಳನ್ನು ಔಷಧ ಮತ್ತು ಕಾಂತಿವರ್ಧಕ ನಿಯಮಾವಳಿಗಳ ಅಡಿಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. 87 ಫಾರ್ಮಸಿಗಳನ್ನು ಸಸ್ಪೆಂಡ್ ಮಾಡಿ 3 ಪಾರ್ಮಸಿಗಳನ್ನು ಮುಚ್ಚಲು ಕ್ರಮ ವಹಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ವಿಶೇಷವಾಗಿ ಕಳಪೆ ಗುಣಮಟ್ಟದ ಔಷಧಿಗಳ ವಿರುದ್ಧ ಆರೋಗ್ಯ ಇಲಾಖೆ ಸತತವಾಗಿ ಕ್ರಮ ಕೈಗೊಳ್ಳುತ್ತಿದೆ. ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರ ಖಂಡಗಳಲ್ಲಿ ಈ ಔಷಧ ತಯಾರಿಕ ಘಟಕಗಳು ಇವೆ. ಕಳಪೆ ಗುಣಮಟ್ಟದ ಔಷಧಿ ರಾಷ್ಟ್ರಮಟ್ಟದ ಸಮಸ್ಯೆಯಾಗಿದ್ದು ಇದನ್ನು ಹತ್ತಿಕ್ಕುವ ಪ್ರಯತ್ನವನ್ನು ರಾಜ್ಯ ಸರ್ಕಾರ ನಡೆಸಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕೂಡ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಗೆ ಒಟ್ಟು 112 ಔಷಧ ಪರಿವೀಕ್ಷಕರ ಹುದ್ದೆಗಳು ಮಂಜೂರಾಗಿದ್ದು, ಪ್ರಸ್ತುತ 08 ಔಷಧ ಪರಿವೀಕ್ಷಕರು ಕಾರ್ಯ ನಿರ್ವಹಿಸುತ್ತಿರುತ್ತಾರೆ. ಉಳಿದ 104 ಹುದ್ದೆಗಳು ಖಾಲಿ ಇರುತ್ತವೆ. 2018ರಲ್ಲಿ 83 ಪರಿವೀಕ್ಷಕರ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದ ಮೇರೆಗೆ 67 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ದಿನಾಂಕ: 23-06-2021ರಂದು ಇಲಾಖೆಗೆ ಆಯ್ಕೆಪಟ್ಟಿಯನ್ನು ಕಳುಹಿಸಲಾಗಿದೆ. ಸದರಿ ಆಯ್ಕೆಪಟ್ಟಿಯನ್ನು ವಿವಿಧ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಪ್ರಸ್ತುತ ಸರ್ವೋಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದ್ದು ವಿಚಾರಣಾ ಹಂತದಲ್ಲಿರುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಸದನಕ್ಕೆ ವಿವರಿಸಿದರು.

ಇಲಾಖೆಯಲ್ಲಿ ಖಾಲಿ ಇರುವ ಔಷಧ ಪರಿವೀಕ್ಷಕರ ಹುದ್ದೆಗಳ ಪ್ರಭಾರವನ್ನು ವೃತ್ತ ಕಚೇರಿಯ ಸಹಾಯಕ ಔಷಧ ನಿಯಂತ್ರಕರಿಗೆ ವಹಿಸಲಾಗಿರುತ್ತದೆ. ಸಹಾಯಕ ಔಷಧ ನಿಯಂತ್ರಕರುಗಳು ಅವರ ಕರ್ತವ್ಯಗಳ ಜೊತೆಯಲ್ಲಿ ಔಷಧ ಪರಿವೀಕ್ಷಕರ ಕೆಲಸವನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ರಾಜ್ಯದ ಸೂಪರ್ ಸ್ಪೆಷಾಲಿಟಿ ವೈದ್ಯರ ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ಚಿಂತನೆ: ಸಚಿವ ಡಾ.ಶರಣ್‌ ಪ್ರಕಾಶ್‌ ಪಾಟೀಲ್‌

ರಾಜ್ಯದಲ್ಲಿ ಅಕ್ವಾ ಪಾರ್ಕ್ ನಿರ್ಮಾಣಕ್ಕೆ ಕ್ರಮ: ಸಚಿವ ಮಂಕಾಳ ವೈದ್ಯ

Share. Facebook Twitter LinkedIn WhatsApp Email

Related Posts

ದಾವಣಗೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿರುದ್ಧ ಅಲ್ಪಸಂಖ್ಯಾತರ ಆಕ್ರೋಶ; ಕೈ ಪಾಳೆಯದಲ್ಲಿ ಭುಗಿಲೆದ್ದ ಅಸಮಾಧಾನ!

22/03/2026 9:33 PM1 Min Read

BIG NEWS: ಸಾಗರದ ಶೆಡ್ತೀಕೆರೆಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ: ರಮೇಶ್ ನಾರಾಯಣ್ ಹಾಗೂ ಇತರ ಶಿಕ್ಷಕರ ವಿರುದ್ಧ ‘ಮಕ್ಕಳ ಆಯೋಗ ಸುಮೋಟೋ ಕೇಸ್’ ದಾಖಲು

22/03/2026 9:07 PM2 Mins Read

BIG NEWS: ಮಂಡ್ಯದಲ್ಲಿ ‘LPG ಸಿಲಿಂಡರ್‌’ಗೆ ಮುಗಿಬಿದ್ದ ಜನ: ಪೊಲೀಸ್ ರಕ್ಷಣೆಯಲ್ಲಿ ‘ಗ್ಯಾಸ್‌’ ವಿತರಣೆ

22/03/2026 8:13 PM1 Min Read
Recent News

‘ಜೇಡ ಕಡಿತ’ ಅಪಾಯಕಾರಿಯೇ.? ಜೇಡ ಕಚ್ಚಿದ್ರೆ ಏನಾಗುತ್ತೆ ಗೊತ್ತಾ?

22/03/2026 10:09 PM

ಅಂತರಂಗದ ಬದುಕಿಗೆ ಲಗ್ಗೆ ಇಟ್ಟ AI; ಈಗ ‘AI-ಸೆಕ್ಷುವಲ್’ ಹೊಸ ಟ್ರೆಂಡ್! | AI-sexual

22/03/2026 9:41 PM

ಇಸ್ರೇಲ್ – ಇರಾನ್ ವಾರ್ ಎಫೆಕ್ಟ್; ವಿಮಾನಯಾನ ಸಂಸ್ಥೆಗಳಿಗೆ ಬರೋಬ್ಬರಿ 5,000 ಕೋಟಿ ನಷ್ಟ

22/03/2026 9:38 PM

ಗುಜರಾತ್ ಸಿಎಂಯಿಂದ ಭಾರತದ ಪ್ರಧಾನಿವರೆಗೆ, 24 ವರ್ಷಗಳ ನಿರಂತರ ಸೇವೆ : ಮೋದಿಯ ‘ಅಚಲ ಸಮರ್ಪಣೆ’ಯ ಸ್ಟೋರಿಯಿದು!

22/03/2026 9:33 PM
State News
KARNATAKA

ದಾವಣಗೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿರುದ್ಧ ಅಲ್ಪಸಂಖ್ಯಾತರ ಆಕ್ರೋಶ; ಕೈ ಪಾಳೆಯದಲ್ಲಿ ಭುಗಿಲೆದ್ದ ಅಸಮಾಧಾನ!

By kannadanewsnow0922/03/2026 9:33 PM KARNATAKA 1 Min Read

ದಾವಣಗೆರೆ: ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿ ದಾವಣಗೆರೆ ಜಿಲ್ಲೆಯಲ್ಲಿ ಹೊಸ ಸಂಚಲನ…

BIG NEWS: ಸಾಗರದ ಶೆಡ್ತೀಕೆರೆಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ: ರಮೇಶ್ ನಾರಾಯಣ್ ಹಾಗೂ ಇತರ ಶಿಕ್ಷಕರ ವಿರುದ್ಧ ‘ಮಕ್ಕಳ ಆಯೋಗ ಸುಮೋಟೋ ಕೇಸ್’ ದಾಖಲು

22/03/2026 9:07 PM

BIG NEWS: ಮಂಡ್ಯದಲ್ಲಿ ‘LPG ಸಿಲಿಂಡರ್‌’ಗೆ ಮುಗಿಬಿದ್ದ ಜನ: ಪೊಲೀಸ್ ರಕ್ಷಣೆಯಲ್ಲಿ ‘ಗ್ಯಾಸ್‌’ ವಿತರಣೆ

22/03/2026 8:13 PM

ಸಾಗರದಲ್ಲಿ ಅದ್ದೂರಿಯಾಗಿ ನೆರವೇರಿದ ‘ಶ್ರೀ ಮಹಾಗಣಪತಿ ರಥೋತ್ಸವ’: ಭಕ್ತಿಯ ಪರಾಕಾಷ್ಠೆ, ಸಂಸ್ಕೃತಿಯ ಸಂಗಮ

22/03/2026 7:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.