ಬೆಂಗಳೂರು:”ಮದ್ಯ ಉತ್ಪಾದಕರು ದರ ಹೆಚ್ಚಳ ಮಾಡಿರಬಹುದು. ಆದರೆ, ನಾವಂತೂ ಹೆಚ್ಚಿಸಿಲ್ಲ” ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಸ್ಪಷ್ಟನೆ ನೀಡಿದ್ದಾರೆ.
ಆದಾಯದ ಸಂಗ್ರಹದ ಗುರಿ ಇದೆ.ಆದರೆ ಬಜೆಟ್ನಲ್ಲೂ ಸದ್ಯ ತೆರಿಗೆ ಹೆಚ್ಚಳದ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಯಾವುದೇ ಟಾರ್ಗೆಟ್ ಕೂಡ ನೀಡಿಲ್ಲ ಎಂದು ಹೇಳಿದರು.
ಅಬಕಾರಿ ಇಲಾಖೆ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿದೆ. ಇಂದಿನಿಂದ ಬಡವರು ಕುಡಿಯುವ ಮದ್ಯದ ದರದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿದೆ.ಈಗಾಗಲೇ ಈಗಾಗಲೇ 17% ರಷ್ಟು ಓವರ್ ಆಲ್ ಮಧ್ಯದ ಮೇಲೆ ದರ ಏರಿಕೆ ಮಾಡಲಾಗಿತ್ತು.ಈಗ ಮತ್ತೆ ಕೆಲ ಅದರಲ್ಲೂ ಬಡವರೇ ಹೆಚ್ಚಾಗಿ ಕುಡಿಯುತ್ತಿದ್ದ ಮದ್ಯಗಳ ಬೆಲೆ ಹೆಚ್ಚಿಸಿದೆ.
ಅಬಕಾರಿ ಇಲಾಖೆ ಹೊಸ ವರ್ಷದಂದು ಬರೋಬ್ಬರಿ 193 ಕೋಟಿ ಆದಾಯ ಗಳಿಸಿತ್ತು.ಹೊಸ ವರ್ಷದಂದೇ ಕುಡಿಯುವ ಮದ್ಯ ರೇಟ್ ಜಾಸ್ತಿಯಾಗಿ ಮದ್ಯಪ್ರಿಯರಿಗೆ ಶಾಕ್ ಆಗಿದೆ.
ಮದ್ಯ ಉತ್ವಾದನ ಕಂಪನಿಗಳು ಕ್ವಾಟರ್ಗೆ 20 ರಿಂದ ಮೂವತ್ತು ರೂಪಾಯಿ ಏರಿಸಿವೆ.
ಬ್ರಾಂಡ್- 1 (180 ಎಂಎಲ್): ಈ ಹಿಂದೆ 90 ರೂಪಾಯಿ, ಜನವರಿ 2 ರಿಂದ 111 ರೂಪಾಯಿ.
ಬ್ರಾಂಡ್ – 2 (180 ಎಂಎಲ್): ಹಿಂದೆ 110 ರೂಪಾಯಿ, ಇಂದಿನಿಂದ- 145 ರೂಪಾಯಿ.
ಬ್ರಾಂಡ್ – 3 (180 ಎಂಎಲ್): ನಿನ್ನೆಯ ದರ 90 ರೂಪಾಯಿ, ಇಂದಿನ ದರ 111 ರೂಪಾಯಿ.