ಕೆಎನ್‌ಎನ್‌ಡಿಜಟಲ್‌ಡೆಸ್ಕ್: ವೈದ್ಯರು ಹೇಳುವ ಪ್ರಕಾರ ಮಹಿಳೆಯರಿಗೆ 28ದಿನಕ್ಕೆ ಮುಟ್ಟು ಬರೋದು ಸಾಮಾನ್ಯ, ಇದು ಅವರ ಉತ್ತಮ ಆರೋಗ್ಯದ ಲಕ್ಷಣ ಕೂಡ ಹೌದು. ಆದರೆ ಕೆಲವು ಮಹಿಳೆಯರಿಗೆ ಅನಿಯಮಿತವಾಗಿ ಅಂದರೆ ತಿಂಗಳಿಗೆ ಎರಡು ಬಾರಿ, ತಿಂಗಳಲ್ಲಿ 15ದಿನ ಮುಟ್ಟಿನಲ್ಲಿಯೇ ಕಾಲ ಕೆಳೆಯುವ ಮಹಿಳೆಯರೂ ಇದ್ದಾರೆ. ಈ ಸಮಸ್ಯೆ ಕೆಲವರಿಗೆ ಬಂದು ಹೋಗುತ್ತದೆ. ಆದರೆ ಇನ್ನೂ ಕೆಲವರಿಗೆ ಈ ಸಮಸ್ಯೆ ನಿರಂತರವಾಗಿರುತ್ತದೆ. ನಿಮಗೂ ಈ ಸಮಸ್ಯೆ ಇದ್ದರೆ ನಿರ್ಲಕ್ಷಿಸಬೇಡಿ. ಕೂಡಲೇ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ.
ಮಹಿಳೆಯರಿಗೆ ಹಾರ್ಮೋನ್ಸ್‌ಗಳ ಆಧಾರದ ಮೇಲೆ ಮುಟ್ಟಾಗುತ್ತದೆ. ಹೀಗೆ ಹಾರ್ಮೋನ್ಸ್‌ಗಳು ತಿಂಗಳಿಗೆ ಎರಡು ಬಾರಿ ಮುಟ್ಟಾಗುವಂತೆ ಮಾಡಿದರೆ ಅದು ಅನಿಯಮಿತ ಮುಟ್ಟು ಎಂದು ಪರಿಗಣಿಸಲಾಗುತ್ತದೆ. ಇದು ಡೇಂಜರ್ ಅಂತಾರೆ ಸ್ತ್ರೀರೋಗ ತಜ್ಞರು. ಅವಿವಾಹಿತ ಮಹಿಳೆಯರಿಗೆ ಹೀಗೆ ತಿಂಗಳಿಗೆ ಎರಡು ಬಾರಿ ಮುಟ್ಟಾದರೆ ಮುಂದೆ ಮದುವೆಯಾದ ಮೇಲೆ ಸುಲಭವಾಗಿ ಗರ್ಭಧರಿಸಲು ತೊಂದರೆಯಾಗುತ್ತದೆ. ಇದಕ್ಕೆ ಅನೇಕ ಅಡೆತಡೆಗಳು ಉಂಟಾಗುತ್ತವೆ. ಈ ಸಮಸ್ಯೆ ಇದ್ದರೆ ಇನ್ನಿತರ ಅನಾರೋಗ್ಯ ಸಮಸ್ಯೆಗಳು ಸಹ ಕಾಡತೊಡಗುತ್ತವೆ. ತಿಂಗಳಿಗೆ ಎರಡು ಬಾರಿ ಮುಟ್ಟಾದರೆ ಅನೇಕ ಸೈಡ್ ಎಫೆಕ್ಟ್‌ಗಳಿವೆ.
ಹೀಗೆ ತಿಂಗಳಿಗೆ ಎರಡು ಬಾರಿ ಋತುಚಕ್ರವಿರಲು ಮುಖ್ಯ ಕಾರಣ ಹಾರ್ಮೋನ್ ಇಂಬ್ಯಾಲ್ಸ್ ಎಂದು ವೈದ್ಯರು ಹೇಳುತ್ತಾರೆ. ಇದಲ್ಲದೆ ಈ ಸಮಸ್ಯೆಗೆ ಇನ್ನು ಕೆಲ ಕಾರಣಗಳಿವೆ. ಅವುಗಳೆಂದರೆ, ನಿಮ್ಮ ರಕ್ತ ಸಂಬಧದಲ್ಲಿ ಯಾರಾದರೂ ಫ್ರೈಬ್ರಾಯ್ಡ್‌ಗಳು ಹೊಂದಿದ್ದರೆ ನಿಗಮೆ ಈ ಸಮಸ್ಯೆ ಕಾಡುತ್ತದೆ. ಅಥವಾ ಬೇಗನೇ ಋತುಮತಿಯಾದರೂ ಹೀಗೆ ಆಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ತಾಯಂದಿರಿಗೆ ಅನಿಯಮಿತ ಋತುಸ್ರಾವಿದ್ದರೆ ಅಥವಾ ತಾಯಂದಿರು ಅನಿಯಮಿತ ರಕ್ತಸ್ರಾವ ಹೊಂದಿದ್ದರೆ ಅದು ಮಕ್ಕಳಿಗೂ ಬರುವ ಸಂಭವ ಹೆಚ್ಚು ಎಂದು ಹೇಳಲಾಗುತ್ತದೆ. ಮುಟ್ಟಿನ ಸಂದರ್ಭದಲ್ಲಿ ಅತಿಯಾಗಿ ರಕ್ತಸ್ರಾವ ಆಗೋದು ಸಾಮಾನ್ಯವಲ್ಲ. ಈ ಕುರಿತಾಗಿ ನಿರ್ಲಕ್ಷಿಸದೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯೋದು ತುಂಬಾ ಮುಖ್ಯವಾಗುತ್ತದೆ.
ಮುಟ್ಟಿನ ಸಮಯದಲ್ಲಿ ಕೆಲ ಮಹಿಳೆಯರಿಗೆ ಹುಣ್ಣು ಅಥವಾ ಅಲ್ಸರ್ ಸಮಸ್ಯೆ ತೀವ್ರವಾಗಿ ಕಾಡುತ್ತವೆ. ಅಲ್ಸರ್‌ನಿಂದಾಗಿ ಈ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗಿ, ನಿಶಕ್ತಿಯಾಗುವ ಸಾಧ್ಯತೆ ಹೆಚ್ಚಿಸುತ್ತದೆ. ಇದರಿಂದಾಗಿ ಗರ್ಭಕೋಶಕ್ಕೆ ಹಾನಿಯುಂಟಾಗುತ್ತದೆ.
ಇಂದಿನ ಮಹಿಳೆಯರು ಹೆಚ್ಚಾನುಹೆಚ್ಚು ಮನೆಯ ಆಚೆಗೂ ಹೋಗಿ ದುಡಿಯುತ್ತಾರೆ. ಸಹಜವಾಗಿ ಕೆಲಸದ ಒತ್ತಡ ಆಕೆ ಅನುಭವಿಸುತ್ತಾಳೆ. ಇದರಿಂದಾಗಿ ಹಾರ್ಮೋನ್ಸ್ ಇಂಬ್ಯಾಲ್ಸ್ ಕೂಡ ಆಗುತ್ತದೆ. ಹೀಗೆ ಕೆಲಸದ ಒತ್ತಡದಿಂದ ಹಾರ್ಮೋನ್ಸ್ ಇಂಬ್ಯಾಲ್ಸ್‌ನಿಂದಲೂ ಅನಿಯಮಿತವಾಗಿ ಋತುಚಕ್ರ ಉಂಟಾಗುತ್ತದೆ. ಹೀಗಾಗಿ ಕೆಲಸದ ಒತ್ತಡ ಹಾಗು ಮಾನಸಿಕ ಸಮತೋಲನದಿಂದ ಅನಿಯಮಿತ ಮುಟ್ಟು ಉಂಟಾಗುತ್ತದೆ ಎಂದು ವೈದ್ಯಲೋಕ ಹೇಳುತ್ತದೆ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.