ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಮನೆಯಲ್ಲಿ ಸಿಗುವ ಕೆಲ ಅಡುಗೆ ಪದಾರ್ಥಗಳಿಂದ ರಕ್ತದೊತ್ತಡ ಸಮಸ್ಯೆಯನ್ನು ತಾತ್ಕಾಲಿಕವಾಗಿ ಶಮನ ಮಾಡಿಕೊಳ್ಳಬಹುದು. ಬಿಪಿ ಹೆಚ್ಚಾದರೂ ತೊಂದರೆಯೆ, ಕಡಿಮೆಯಾದರೂ ತೊಂದರೆಯೇ. ಮನೆಯಲ್ಲಿ ಇದ್ದಾಗ ಸಡನ್ ಆಗಿ ರಕ್ತದೊತ್ತಡ ಹಚ್ಚಾದರೆ ಈ ಮನೆ ಮದ್ದನ್ನು ಟ್ರೈ ಮಾಡಿ. ನಾವು ಹೇಳುವ ಈ ಮನೆ ಮದ್ದು ಬಿಪಿಗೆ ಔಷಧಿ ಅಲ್ಲ. ತಾತ್ಕಾಲಿಕವಾಗಿ ಬಿಪಿ ಏರಿಳಿತವನ್ನು ಕಂಟ್ರೋಲ್ ಮಾಡಿಕೊಳ್ಳಬಹುದು.
ರಕ್ತದೊತ್ತಡವು 90/70ಕ್ಕಿಂತಲೂ ಕಡಿಮೆ ಆದರೆ ಹೈಪೋಟೆನ್ಶನ್ ಉಂಟಾಗುತ್ತದೆ. ದೇಹದಲ್ಲಿ ರಕ್ತ ಮತ್ತು ಆಮ್ಲಜನಕ ಪೂರೈಕೆ ಸರಿಯಾಗಿ ಆಗದೇ ಇದ್ದಾಗ ದೇಹಕ್ಕೆ ಅಘಾತ ಉಂಟಾಗುತ್ತದೆ. ರಕ್ತದೊತ್ತಡ ಉಂಟಾದರೆ ಸಾಮಾನ್ಯವಾಗಿ ಆಯಾಸ, ಬಳಲಿಕೆ, ತಲೆ ನೋವು ಹೀಗೆ ಮುನ್ಸೂಚನೆ ನೀಡುತ್ತದೆ. ಆಗ ಕೂಡಲೇ ಮಾಡಬೇಕಾದ ಕೆಲ ಮನೆ ಮದ್ದುಗಳೆಂದರೆ,
ನಿಮಗೆ ಪದೇ ಪದೇ ಆರೋಗ್ಯದಲ್ಲಿ ನಿರಂತರವಾಗಿ ಸಮಸ್ಯೆ ಕಾಡುತ್ತಿದ್ದರೆ ಆಗ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಬಿಪಿ ಚೆಕ್ ಮಾಡಿಸಿಕೊಂಡು ಸೂಕ್ತ ಸಲಹೆ ಪಡೆಯಿರಿ. ಇನ್ನು ರಕ್ತದೊತ್ತಡ ಕಡಿಮೆಯಾದರೆ ಅಡುಗೆ ಉಪ್ಪನ್ನು ಸೇವಿಸಿ. ನೇರವಾಗಿ ಉಪ್ಪು ನೆಕ್ಕಿದರೂ ಪರವಾಗಿಲ್ಲ. ಉಪ್ಪು ನೆಕ್ಕಿದರೆ ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನಕ್ಕೆ ಬರುತ್ತದೆ ಹಾಗು ನಿರ್ಜಲೀಕರಣವನ್ನೂ ತಪ್ಪಿಸುತ್ತದೆ. ಆಗ ಬಿಪಿ ಕಂಟ್ರೋಲ್‌ಗೆ ಬರುತ್ತದೆ.
ದೇಹದಲ್ಲಿ ಬಿಪಿ ಏರಿಳಿತವಾಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಸಕ್ಕರೆ ಸೇವನೆ ಕೂಡ ಉತ್ತಮ ಪರಿಹಾರ. ಆದರೆ ಶುಗರ್ ಇರುವವರು ಸಕ್ಕರೆ ಸೇವನೆ ಮಾಡಬೇಡಿ. ಮಧುಮೇಹಿಳಲ್ಲದೇ ಇರುವವರು ಬರೀ ಸಕ್ಕರೆ ಅಥವಾ ಸಕ್ಕರೆ ನೀರನ್ನು ಕೂಡಿದರೂ ಆದೀತು.
ರಕ್ತದೊತ್ತಡ ಸಡನ್ ಆಗಿ ಕಡಿಮೆಯಾದರೆ ಎಲೆಕ್ಟ್ರೋಲೈಟ್ ಪಾನೀಯಗಳನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ಮನೆಯಲ್ಲಿ ಎಲೆಕ್ಟ್ರೋಲೈಟ್ ಪೌಡರ್‌ಗಳನ್ನು ಇಟ್ಟುಕೊಂಡರೆ ಒಳ್ಳೆಯದು. ಮಧುಮೇಹಿಗಳು ನಿಮ್ಮ ವೈದ್ಯರ ಸಲಹೆ ಮೇಲೆ ಎಲೆಕ್ಟ್ರೋಲೈಟ್ ಪಾನೀಯವನ್ನು ಸೇವಿಸಿ. ವೈದ್ಯರ ಸಲಹೆ ಇಲ್ಲದೆ ಇದನ್ನು ಸೇವಿಸಬೇಡಿ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.