ಕೆಎನ್ಎನ್ಡಿಜಿಟಲ್ಡೆಸ್ಕ್: ಕೂದಲಿನ ಆರೈಕೆ ಅಷ್ಟು ಸುಲಭವಲ್ಲ. ಕೂದಲಿನ ಆರೈಕೆ ಮಾಡಿಕೊಳ್ಳಲು ಅನೇಕ ಮನೆಮದ್ದುಗಳಿವೆ ಹಾಗು ಮಾರುಕಟ್ಟೆಯಲ್ಲಿ ಅನೇಕ ಬಗೆಯ ಕಾಸ್ಮೆಟಿಕ್ಸ್ ಕೂಡ ಇವೆ. ಇವುಗಳಲ್ಲದೇ ಬಿಯರ್ ಮೂಲಕವಾಗಿಯೂ ಕೂದಲಿನ ಆರೈಕೆ ಮಾಡಿಕೊಳ್ಳಬಹುದು ಎಂಬ ಸಂಗತಿಯನ್ನು ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ.
ಏನೇ ಮನೆಮದ್ದುಗಳನ್ನು ಟ್ರೈ ಮಾಡಿ ಕೂದಲು ಸೊಂಪಾಗಿ ಬೆಳೆಯದಿದ್ದಾಗ ಬಿಯರ್ ಟ್ರೈ ಮಾಡಿ ನೋಡಿ. ಹೌದು. ಬಿಯರ್ ಬಳಸಿ ಕೂದಲು ತೊಳೆಯುವುದರಿಂದ ಕೂದಲು ಆರೋಗ್ಯಕರವಾಗಿ ಸೊಂಪಾಗಿ ಬೆಳೆಯುತ್ತವೆ ಅನ್ನೋದು ಸಂಶೋಧನೆವೊಂದರ ವರದಿಯಾಗಿದೆ. ಕಾರಣ ಬಿಯರ್ನಲ್ಲಿ ವಿಟಮಿನ್ ಬಿ ಹೇರಳವಾಗಿದ್ದು. ಇದು ಕೂದಲನ್ನು ಸೊಂಪಾಗಿಸುತ್ತದೆ.
ಅಷ್ಟೆ ಅಲ್ಲದೇ ಬಿಯರ್ನಲ್ಲಿ ಬಯೋಟಿಕ್, ಕ್ಯಾಲ್ಸಿಯಂ, ವಿಟಮಿನ್ ಡಿ, ಸತು, ಪೋಲೇಟ್ ನಂತಹ ಪೋಷಕಾಂಶಗಳಿವೆ. ಈ ಎಲ್ಲಾ ಪೋಷಕಾಂಶಗಳು ಕೂದಲಿನ ಆರೋಗ್ಯನ್ನು ಕಾಪಾಡುವುದರ ಜೊತೆಗೆ ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ.
ನಿಮಗೆ ಇನ್ನೊಂದು ಮುಖ್ಯವಾದ ವಿಷಯ ಗೊತ್ತಿರಲಿ. ನೀವು ಈಗಾಗಲೇ ಬಿಯರ್ ಬಳಸಿ ಕೂದಲು ತೊಳೆದುಕೊಳ್ಳುತ್ತಿದ್ದೀರಿ. ಅದು ಹೇಗೆ ಅಂತಿರಾ? ಅನೇಕ ಶಾಂಪು ಕಂಪನಿಗಳು ಶಾಂಪು ತಯಾರಿಸುವಲ್ಲಿ ಬಿಯರ್ ಅನ್ನು ಸೇರಿಸಿ ತಯಾರು ಮಾಡುತ್ತಿದ್ದಾರೆ. ಆದರೆ ಈ ವಿಷಯ ಅಷ್ಟಾಗಿ ಯಾರಿಗೂ ಗೊತ್ತಿಲ್ಲ. ಬಿಯರ್ ಹೆಸರಿನಲ್ಲಿ ಒಂದು ಶಾಂಪು ಕೂಡ ಇದೆ.
ಬಿಯರ್ನ ಕೂದಲನ್ನು ಕಂಡೀಷನರ್ ಮಾಡುತ್ತಿದೆ. ಇದು ಕೂದಲಿನ ಡ್ಯಾಮೇಜ್ ಆಗೋದನ್ನು ತಡೆಗಟ್ಟುತ್ತದೆ. ಬಿಯರ್ ತಯಾರಿಸುವ ಹಾಪ್ಸ್ ಎಂಬ ಅಂಶ ಕೂದಲಿನ ಆರೋಗ್ಯಕರವಾದ ಬೆಳವಣಿಗೆಯನ್ನು ಉತ್ತೇಜಿಸಿತ್ತದೆ. ಕೂದಲಿಗೆ ಬಿಯರ್ ಹಾಕುವ ಮುನ್ನ ಅದರಲ್ಲಿರುವ ಗ್ಯಾಸ್ ಅಂಶವನ್ನು ಹೊರತೆಗೆಯಬೇಕು ಅಂದರೆ ಬಿಯರ್ ಅನ್ನು ಡಿ-ಕಾರ್ಬೊನೇಟ್ ಮಾಡಬೇಕು. ಇಲ್ಲದಿದ್ದರೆ ಅದು ನೀರಿನೊಂದಿಗೆ ಸೇರಿದಾಗ ಗಟ್ಟಿ ನೀರಾಗಿ ಪರಿವರ್ತನೆ ಹೊಂದುತ್ತದೆ. ಬಿಯರ್ ಅನ್ನು ನೇರವಾಗಿ ಕೂದಲಿಗೆ ಹಾಕುವ ಮೊದಲು ಅದಕ್ಕೆ ನೀರು ಬೆರೆಸಿಕೊಳ್ಳಿ. ಅಥವಾ ಕಡಿಮೆ ಆಲ್ಕೋಹಾಲ್ ಇರುವ ಬಿಯರ್ ಬಳಸಿ ಕೂದಲಿನ ಆರೈಕೆ ಮಾಡಿಕೊಳ್ಳಿ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.