ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಟೂತ್‌ಪೇಸ್ಟ್ ಇರೋದು ಹಲ್ಲು ಉಜ್ಜೋಕೆ ಆದರೂ ಇದನ್ನು ಅನೇಕ ಬಾರಿ ಅನೇಕ ಕೆಲಸಗಳಲ್ಲಿ ಬಳಕೆ ಮಾಡಲಾಗುತ್ತದೆ. ಬಟ್ಟೆಯ ಮೇಲಿನ ಕರೆ ಹೋಗಲಾಡಿಸಲು ಹೀಗೆ ಅನೇಕ ರೀತಿಯಲ್ಲಿ ಟೂತ್‌ಪೇಸ್ಟ್ ಬಳಕೆ ಆಗುತ್ತದೆ. ಮುಖದ ಮೇಲಿನ ಮೊಡವೆ ಅಥವಾ ಮೊಡವೆಯ ಕಲೆಗಳನ್ನೂ ಹೋಗಲಾಡಿಸಲು ಟೂತ್‌ಪೇಸ್ಟ್ ಉಪಯೋಗಿಸಬಹುದು. ಅದು ಹೇಗೆ ಅಂತ ತಿಳಿದುಕೊಳ್ಳಲು ಮುಂದಿನ ಸಾಲುಗಳನ್ನು ಓದಿ,
ಮುಖದ ಮೇಲೆ ಮೊಡವೆ ಇದ್ದವರು. ಸ್ವಲ್ಪ ಟೂತ್‌ಪೇಸ್ಟ್‌ಗೆ ಒಂದು ಸ್ಪೂನ್ ನಿಂಬೆರಸ ಹಾಕಿ ಕಲಿಸಿ, ಮುಖದ ಮೇಲೆ ಮೊಡವೆ ಇದ್ದಲ್ಲಿ ಮಾತ್ರ ತೆಳುವಾಗಿ ಹಚ್ಚಿಕೊಳ್ಳಿ. ಇಪ್ಪತ್ತು ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ವಾರಕ್ಕೆ ಒಂದು ಬಾರಿ ಹೀಗೆ ಮಾಡಿ, ಮೊಡವೆಗಳು ಕ್ರಮೇಣ ಮಾಯವಾಗುತ್ತವೆ. ದಿನವೂ ಈ ಅಭ್ಯಾಸ ಒಳ್ಳೆಯದಲ್ಲ.
ಟೊಮೆಟೊ ರಸಕ್ಕೆ ಸ್ವಲ್ಪ ಪೇಸ್ಟ್ ಕಲಿಸಿ ಮುಖಕ್ಕೆ ಹಚ್ಚಿ, ಇದರಿಂದಾಗಿ ಚರ್ಮದ ಕಾಂತಿ ಹೆಚ್ಚುತ್ತದೆ. ಇನ್ನು ಸನ್ ಬರ್ನ್ ಆದಾಗ ಇದನ್ನು ಹಚ್ಚಿದರೆ ಮುಖದ ಚರ್ಮ ಮತ್ತೇ ಸಹಜ ಸ್ಥಿತಿಗೆ ಬರುತ್ತದೆ.
ಟೂತ್‌ಪೇಸ್ಟ್‌ಅನ್ನು ಸ್ಕ್ರಬ್ ರೀತಿಯಲ್ಲೂ ಬಳಸಬಹುದು. ಪೇಸ್ಟ್‌ಗೆ ಒಂದು ಸ್ಪೂನ್ ರೋಸ್ ವಾಟರ್, ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಬೆರಸಿ. ಇದನ್ನು ಮುಖಕ್ಕೆ ಸ್ಕ್ರಬ್ ಮಾಡಿಕೊಳ್ಳಿ. ಹೀಗೆ ಸೌಮ್ಯವಾಗಿ ಸ್ಕ್ರಬ್ ಮಾಡಿದರೆ ಮುಖದ ಕಾಂತಿ ಹೆಚ್ಚುತ್ತದೆ. ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗುತ್ತವೆ.
ಸೂಕ್ಷ್ಮ ಚರ್ಮ ಇದ್ದವರು ಹಾಗು ಚರ್ಮದ ಅಲರ್ಜಿ ಇದ್ದವರು ಇದನ್ನು ಬಳಸುವ ಮುನ್ನ ಎಚ್ಚರ ವಹಿಸಿ. ಮುಖಕ್ಕೆ ಹಚ್ಚುವ ಮುನ್ನ ಕೈ ಮೇಲೆ ಪ್ರಯೋಗ ಮಾಡಿಕೊಂಡು ಏನು ತೊಂದರೆ ಇಲ್ಲದೇ ಇರುವುದನ್ನು ಖಾತ್ರಿ ಮಾಡಿಕೊಂಡು ಮುಖಕ್ಕೆ ಟೂತ್‌ಪೇಸ್ಟ್ ಹಚ್ಚಿಕೊಂಡು ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.