ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಅಂಜೂರ ಒಂದು ಹಣ್ಣು. ಇದನ್ನು ಒಣಗಿಸಿದರೆ ಒಣ ಅಂಜೂರ ಡ್ರೈ ಫ್ರೂಟ್ಸ್ ಕೆಟಗರಿಗೆ ಸೇರುತ್ತದೆ. ಹಣ್ಣಿನಷ್ಟೇ ಒಣ ಅಂಜೂರ ಸೇವನೆ ದೇಹಕ್ಕೆ ತುಂಬಾ ಒಳ್ಳೆಯದು. ಒಣ ಅಂಜೂರದಲ್ಲಿ ಕೊಬ್ಬು, ನಾರಿನಾಂಶ, ಕ್ಯಾಲಿಸಿಯಂ, ಪ್ರೋಟೀನ್, ಕಬ್ಬಿಣಾಂಶ ಹೀಗೆ ದೇಹದ ಆರೋಗ್ಯ ಕಾಪಾಡಲು ಬೇಕಾದ ಅನೇಕ ಅಂಶಗಳು ಒದಗಿಸುತ್ತದೆ. ಉಪವಾಸ ಅಥವಾ ಡಯಟ್ ಮಾಡುವವರಿಗೆ ಒಣ ಅಂಜೂರ ದೇಹಕ್ಕೆ ಶಕ್ತಿ ನೀಡುತ್ತದೆ.
ಒಣ ಅಂಜೂರ ದೇಹದ ತೂಕ ನಿಯಂತ್ರಣ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ತೂಕ ಇಳಿಸುವವರು ದಿನವೂ ಒಂದರೆಡು ಒಣ ಅಂಜೂರ ಸೇವಿಸಿ ನೋಡಿ. ಒಳ್ಳೆಯ ರಿಸಲ್ಟ್ ನಿಮಗೆ ಸಿಗುತ್ತದೆ.
ಇದರಲ್ಲಿ ಹೆಚ್ಚು ನಾರಿನಾಂಶ ಮತ್ತು ಪ್ರೋಟೀನ್ ಇದ್ದು, ಹಸಿವನ್ನು ಕಂಟ್ರೋಲ್ ಮಾಡಿ ಹೆಚ್ಚಿನ ಆಹಾರ ಸೇವನೆ ಮಾಡದಂತೆ ತಡೆಯುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಇದ್ದವರು ಒಣ ಅಂಜೂರನ್ನು ರಾತ್ರಿ ನೀರಿನಲ್ಲಿ ನೆನಸಿ ಬೆಳಗ್ಗೆ ಅದರ ನೀರಿನೊಂದಿಗೆ ಸೇವಿಸಿದರೆ ಜೀರ್ಣಕ್ರಿಯೆ ಸಮಸ್ಯೆ ಕಡಿಮೆಯಾಗುತ್ತದೆ. ಇದರ ಸೇವನೆಯಿಂದ ಮಲಬದ್ಧತೆಯನ್ನೂ ಸಹ ಹೋಗಲಾಡಿಸಬಹುದು.
ಒಣ ಅಂಜೂರನ್ನು ಹಾಲಿನೊಂದಿಗೆ ಕುದಿಸಿ ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು. ಇದು ಸಹ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವಲ್ಲಿ ನೆರವಾಗುತ್ತದೆ.
ದೈಹಿವಾಗಿ ದಣಿದಾಗ ಅಥವಾ ಹೆಚ್ಚು ದೈಹಿಕ ವ್ಯಾಯಾಮ ಮಾಡಿದಾಗ ಒಣ ಅಂಜೂರ ಸೇವಿಸದರೆ ದೇಹಕ್ಕೆ ಶಕ್ತಿ ದೊರೆಯುತ್ತದೆ. ಜಿಮ್ ಮಾಡುವವರು ಇದನ್ನು ಹೆಚ್ಚು ಸೇವಿಸುತ್ತಾರೆ. ದೇಹಕ್ಕೆ ಅತಿಯಾಗಿ ಸುಸ್ತು ಆಯಾಸವಾದಾಗ ಒಂದು ಲೋಟ ಹಾಲಜ ಜೊತೆ ಇದನ್ನು ಸೇವಿಸಿದರೆ ದೇಹಕ್ಕೆ ನವಚೈತ್ನಯ ದೊರೆಯುತ್ತದೆ.