ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಆರೋಗ್ಯ ಸಮತೋಲನದಲ್ಲಿರಿಸಲು ಹಸಿ ತರಕಾರಿ, ಸೊಪ್ಪು, ಹಣ್ಣುಗಳನ್ನು ನಿತ್ಯದ ಆಹಾರದಲ್ಲಿ ಸೇವನೆ ಮಾಡಬೇಕು. ಅದರಲ್ಲೂ ತರಕಾರಿ ಮತ್ತು ಸೊಪ್ಪುಗಳ ಸೇವೆನೆ ತುಸು ಹೆಚ್ಚೇ ಮಾಡಿದರೆ ಒಳಿತು. ಇದರಿಂದಾಗಿ ಖಾಯಿಲೆ ಬೀಳುವ ಪ್ರಸಂಗ ಕಡಿಮೆ ಎಂದು ವೈದ್ಯರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಮೆಂತ್ಯೆ ಸೊಪ್ಪಿನ ಸೇವನೆಯಿಂದಾಗುವ ಪ್ರಯೋಜನಗಳೇನು ಎಂದು ಒಂದೊಂದಾಗಿ ತಿಳಿದುಕೊಳ್ಳೋಣ ಬನ್ನಿ.
ಮೆಂತ್ಯೆ ಸೊಪ್ಪು ಸೇವನೆಯಿಂದಾಗಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗುತ್ತದೆ. ಇದರಲ್ಲಿ ಕಬ್ಬಿಣದ ಅಂಶ ಹೇರಲಾಗಿರುತ್ತದೆ. ಇದು ರಕ್ತ ಹೀನತೆ ಸಮಸ್ಯೆಯನ್ನು ಪರಿಹರಿಸುತ್ತದೆ. ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಮೆಂತ್ಯೆ ಸೊಪ್ಪನ್ನು ನಿತ್ಯದ ಆಹಾರದಲ್ಲಿ ಸೇವಿಸಿದರೆ ಹಿಮೋಗ್ಲೋಬಿನ್ ಪ್ರಮಾಣ ಏರಿಕೆ ಆಗುತ್ತದೆ. ಮೆಂತ್ಯೆ ಸೊಪ್ಪು ನಿತ್ಯವೂ ಸೇವಿಸಿದರೆ ಉರಿಯೂತ ಖಾಯಿಲೆ ನಿವಾರಣೆಯಾಗುತ್ತದೆ. ಸಲಾಡ್ ರೂಪದಲ್ಲಿ ಈ ಸೊಪ್ಪು ಸೇವಿಸಬಹುದು. ಅಥವಾ ಅಡುಗೆಯಲ್ಲೂ ಹಾಕಿ ಸೇವಿಸಬಹುದು.
ಬ್ರಾಂಕ್ರೈಟಿಸ್ ಹಾಗು ಇನ್ನಿತರ ಚರ್ಮಕ್ಕೆ ಸಂಬಂಧಿಸಿದ ಖಾಯಿಲೆಗಳಿಗೆ ಮೆಂತ್ಯೆ ಸೊಪ್ಪಿನ ಸೇವನೆ ತುಂಬಾ ಪರಿಣಾಮಕಾರಿ ಎಂದು ವೈದ್ಯರು ಹೇಳುತ್ತಾರೆ. ದೀರ್ಘಕಾಲದಿಂದಲೂ ಇದ್ದ ಕೆಮ್ಮು ನಿವಾರಣೆಗೆ ಮೆಂತ್ಯೆ ಸೊಪ್ಪನ್ನು ಹೇರಳವಾಗಿ ಸೇವಿಸಬೇಕು. ಮೈ ಕೈ ನೋವು, ಕಿಡ್ನಿ ಸಮಸ್ಯೆ ಮತ್ತು ಕಿಡ್ನಿ ಊತವನ್ನು ಮೆಂತ್ಯೆ ಸೊಪ್ಪು ಕಡಿಮೆ ಮಾಡುತ್ತದೆ.
ಮೆಂತ್ಯೆ ಸೊಪ್ಪಿನಲ್ಲಿ ದೇಹಕ್ಕೆ ಬೇಕಾಗುವ ನಾರಿನಾಂಶ ಅತೀ ಹೆಚ್ಚು ಪ್ರಮಾಣದಲ್ಲಿರುತ್ತದೆ. ನಾರಿನಾಂಶ ಹೇರಳವಾಗಿರುವ ಮೆಂತ್ಯೆ ಸೊಪ್ಪನ್ನು ತಿಂದರೆ ಪಚನ ಕ್ರಿಯೆ ಸರಾಗವಾಗಿ ಆಗುತ್ತದೆ ಹಾಗು ಮಲಬದ್ಧತೆ ನಿವಾರಿಸಿ, ಕರುಳನ್ನು ಇನ್ನಷ್ಟು ಆರೋಗ್ಯವಾಗಿರಿಸುತ್ತದೆ. ಮೆಂತ್ಯೆ ಸೊಪ್ಪು ಸೇವನೆಯಿಂದಾಗಿ ಪುರುಷರಲ್ಲಿ ಲೈಂಗಿಕ ಹಾರ್ಮೋನ್‌ಗಳು ಉತ್ಪತ್ತಿಯಾಗುತ್ತವೆ. ಇದರಿಂದಾಗಿ ಆರೋಗ್ಯಕರವಾಗ ಲೈಂಗಿಕಾಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.
ಮೆಂತ್ಯೆ ಸೊಪ್ಪು ಬಾಣಂತಿಯರಿಗೆ ತುಂಬಾ ಪ್ರಯೋಜನಕಾರಿ. ಬಾಣಂತಿಯರಿಗೆ ಎದೆ ಹಾಲು ಹೆಚ್ಚಿಸಲು ಈ ಸೊಪ್ಪು ಪ್ರಧಾನ ಪಾತ್ರ ನಿರ್ವಹಿಸುತ್ತದೆ. ಹಾಗಾಗಿ ವೈದ್ಯರು ಬಾಣಂತಿಯರಿಗೆ ಹೆಚ್ಚು ಮೆಂತ್ಯೆ ಸೊಪ್ಪು ಸೇವಿಸಲು ಸಲಹೆ ನೀಡುತ್ತಾರೆ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.