ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಕಾಫಿ ಕುಡಿಯದೆ ಅದೆಷ್ಟೊ ಜನರಿಗೆ ದಿನ ಆರಂಭವೇ ಆಗುವುದಿಲ್ಲ. ದಕ್ಷಿಣ ಭಾರತದಲ್ಲಿ ಕಾಫಿ ಸೇವನೆಗೆ ತುಂಬಾ ಪ್ರಾಮುಖ್ಯತೆ ಮತ್ತು ಅಷ್ಟೇ ಪ್ರಸಿದ್ಧ ಕೂಡ ಹೌದು. ಮಿತವಾದ ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಇದೇ ಕಾಫಿಯಿಂದ ಮುಖದ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಹೌದು. ಕಾಫಿ ಇಂದ ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಮೂಕದ ಕಾಂತಿ ಹೆಚ್ಚಾಗುತ್ತದೆ.
ಕಾಫಿ ಫೇಸ್ ಪ್ಯಾಕ್ ಹಾಕಿದರೆ ಒಣ ಚರ್ಮ ಹೋಗಲಾಡಿಸಬಹುದು. ಮುಖಕ್ಕೆ ಕಾಫಿ ಹಚ್ಚಿದರೆ ಚರ್ಮ ಹೈಡ್ರೇಟ್ ಆಗುತ್ತದೆ. ಒಣ ಅಥವಾ ಸುಕ್ಕುಗಟ್ಟಿದ ಚರ್ಮಕ್ಕೆ ಕಾಫಿ ಫೇಸ್ ಪ್ಯಾಕ್ ತುಂಬಾ ಪರಿಣಾಮಕಾರಿಯಾಗಿದೆ. ಒಟ್ಟಾರೆ ಕಾಫಿ ಫೇಸ್ ಪ್ಯಾಕ್ ಚರ್ಮದ ಕಾಂತಿಯನ್ನು ನೈಸರ್ಗಿಕವಾಗಿ ಹೆಚ್ಚಿಸುತ್ತದೆ.
ಕಾಫಿ ಫೇಸ್ ಪ್ಯಾಕ್ ಹೇಗೆ ಮಾಡುವುದು ಮತ್ತು ಹೇಗೆ ಅದನ್ನು ಹಚ್ಚಿಕೊಳ್ಳುವುದು ಎಂದು ತಿಳಿದುಕೊಳ್ಳೋಣ,
ಒಂದನೇ ವಿಧಾನ, ಒಂದುವರೆ ಚಮಚ ಕಾಫಿ ಪುಡಿಗೆ ಸ್ವಲ್ಪ ಆಲಿವ್ ಆಯಿಲ್ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ತೆಳುವಾಗಿ ಹಚ್ಚಿಕೊಳ್ಳಿ. ಇಪ್ಪತ್ತು ನಿಮಿಷ ಬಿಟ್ಟು ಮುಖವನ್ನು ಸ್ವಲ್ಪ ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಎರಡನೇ ವಿಧಾನ, ಒಂದು ಚಮಚ ಕಾಫಿ ಫುಡಿಗೆ, ಅರಿಶಿನ, ಮೊಸರನ್ನು ಹಾಕಿ ಕಲಿಸಿ. ಈ ಪೇಸ್ಟ್ ಅನ್ನು ಮುಕ್ಕಕ್ಕೆ ಹಚ್ಚಿ ಇಪ್ಪತ್ತು ನಿಮಿಷ ಬಿಟ್ಟು ತೊಳೆಯಿರಿ. ಹೀಗೆ ಕಾಫಿ ಪೇಸ್ ಪ್ಯಾಕ್ ಅನ್ನು ವಾರದಲ್ಲಿ ಎರಡು ಬಾರಿ ಹಚ್ಚಿದರೆ ಸಾಕು. ದಿನವೂ ಈ ಫೇಸ್ ಪ್ಯಾಕ್ ಹಾಕಿದರೆ ತೊಂದರೆಯಾಗಬಹುದು. ಇನ್ನು ಫೇಸ್ ಪ್ಯಾಕ್ ಮಾಡುವಾಗ ಉತ್ತಮ ಗುಣಮಟ್ಟದ ಕಾಫಿ ಪುಡಿಯನ್ನೇ ಆಯ್ಕೆ ಮಾಡಿಕೊಳ್ಳುವಲ್ಲಿ ತುಂಬಾ ಎಚ್ಚರ ವಹಿಸಿ. ಕಳಪೆ ಕಾಫಿ ಪುಡಿ ಮುಖದ ಚರ್ಮಕ್ಕೆ ತೊಂದರೆ ನೀಡಬಹುದ. ಫೇಸ್ ಪ್ಯಾಕ್‌ಗೆ ಇನ್‌ಸ್ಟಂಟ್ ಕಾಫಿ ಫುಡಿ ಬೇಡ.
ಹೀಗೆ ಕಾಫಿ ಪ್ಯಾಕ್ ನೈಸರ್ಗಿಕವಾಗಿ ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ ಹಾಗು ಸೂರ್ಯನ ಕಿರಣಗಳಿಂದಾಗ ಸ್ಕಿನ್ ಟ್ಯಾನಿಂಗ್ ಅನ್ನು ಸಹ ನಿವಾರಣೆ ಮಾಡುತ್ತದೆ.