ಬಳ್ಳಾರಿ: ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ 2023-24 ನೇ ಸಾಲಿನಡಿ ನಿಗಮದ ಕೌಶಲ್ಯ ಉನ್ನತೀಕರಣ ತರಬೇತಿ ಪಡೆಯಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಲಿಡ್‍ಕರ್ ಸಂಸ್ಥೆಯ ಜಿಲ್ಲಾ ಸಂಯೋಜಕರು ತಿಳಿಸಿದ್ದಾರೆ.
ಪಿ.ಯು.ಸಿ ಮತ್ತು ಡಿಪ್ಲೋಮಾ ಪೂರ್ಣಗೊಳಿಸಿದ ಚರ್ಮಕುಶಲ ಕರ್ಮಿಗಳಿಗೆ ಉತ್ತರಪ್ರದೇಶದ ಆಗ್ರಾದಲ್ಲಿ 60 ದಿನಗಳ ಕೌಶಲ್ಯ ಉನ್ನತೀಕರಣ ತರಬೇತಿ ನೀಡಲಾಗುವುದು.
ಅರ್ಜಿ ಸಲ್ಲಿಸಲು ಮಾರ್ಚ್ 12 ಕೊನೆಯ ದಿನವಾಗಿರುತ್ತದೆ : ತರಬೇತಿ ಪಡೆಯಲು ಆಸಕ್ತರು ಆಧಾರ್‍ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಗುರುತಿನ ಚೀಟಿ, ಬ್ಯಾಂಕ್ ಖಾತೆಯ ಪ್ರತಿ, 02 ಪಾಸ್ ಫೋಟೋ ಹಾಗೂ ಇತರೆ ದಾಖಲಾತಿಗಳ ವಿವರದೊಂದಿಗೆ ಅರ್ಜಿಯನ್ನು ನಗರದ ಮೋತಿ ವೃತ್ತದ ಬುಡಾ ಕಾಂಪ್ಲೆಕ್ಸ್‍ನ ಲಿಡ್‍ಕರ್ ಲೆದರ್ ಎಂಪೋರಿಯಂ, ಶಾಪ್ ನಂ. 24, ಗ್ರೌಂಡ್ ಪ್ಲೋರ್, ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ:08392-271741, ಮೊ:9480886274, 7676591259 ಗೆ ಸಂಪರ್ಕಿಸಬಹುದು ಎಂದು ಅವರು ಲಿಡ್‍ಕರ್‍ನ ಜಿಲ್ಲಾ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.