ರಾಜ್ಯಪಾಲರಿಗೆ ಅಗೌರವ ತೋರಿದ ಸದಸ್ಯರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ, ಸ್ಪೀಕರ್‌ಗೆ ಪತ್ರ: ಆರ್‌.ಅಶೋಕ ಆಕ್ರೋಶ

ಬೆಂಗಳೂರು: ವಿಶೇಷ ಅಧಿವೇಶನದ ದಿನವನ್ನು ಕರಾಳ ದಿನವನ್ನಾಗಿಸಿದ ಕಾಂಗ್ರೆಸ್‌ ಸರ್ಕಾರ, ರಾಜ್ಯಪಾಲರಿಗೆ ಅಗೌರವ ತೋರಿ ಸಂವಿಧಾನಕ್ಕೆ ಅಪಮಾನ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ಸದನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಅಧಿವೇಶನದ ದಿನವನ್ನು ಕರಾಳ ದಿನವನ್ನಾಗಿಸಿದೆ. ರಾಜ್ಯಪಾಲರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಾರೆ. ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಸಾಂಕೇತಿಕವಾಗಿ ಭಾಷಣ ಮಂಡಿಸಿ ಧನ್ಯವಾದ ಹೇಳಿ ಹೋಗಿದ್ದಾರೆ. ಹಿಂದೆ ಹಂಸರಾಜ್‌ ಭಾರಧ್ವಾಜ್‌ ಕೂಡ ಹಾಗೆಯೇ ಮಾಡಿದ್ದರು. … Continue reading ರಾಜ್ಯಪಾಲರಿಗೆ ಅಗೌರವ ತೋರಿದ ಸದಸ್ಯರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ, ಸ್ಪೀಕರ್‌ಗೆ ಪತ್ರ: ಆರ್‌.ಅಶೋಕ ಆಕ್ರೋಶ