ಬೆಂಗಳೂರು : ಈ ಬಾರಿ ರಾಜ್ಯದಲ್ಲಿ ಭೀಕರ ಬರಗಾಲವಿದೆ. ಮಳೆ ಕೊರತೆಯಿಂದಾಗಿ ಅನೇಕ ಕಡೆಗಳಲ್ಲಿ ಉದ್ಭವವಾಗಿರುವ ನೀರಿನ ಸಮಸ್ಯೆಯನ್ನು ಪರಿಹರಿಸಲು ನಾವು ಕೂಡ ಶಕ್ತಿ ಮೀರಿ ಶ್ರಮಿಸುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಾಡಿನ ಜನತೆಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ಪ್ರೀತಿಯ ನಾಡಬಾಂಧವರಲ್ಲಿ ಮನವಿ, ನಮ್ಮ ಮೇಲೆ ಭರವಸೆಯನ್ನಿಟ್ಟು ನೀವು ಅಧಿಕಾರ ನೀಡಿದ ಮರುಕ್ಷಣದಿಂದಲೇ ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತನ್ನು ಈಡೇರಿಸುವತ್ತ ಕಾರ್ಯಪ್ರವೃತ್ತರಾದೆವು. ಗ್ಯಾರಂಟಿ ಯೋಜನೆಗಳ ಜಾರಿಯ ಜೊತೆಗೆ ನಮ್ಮ ಪ್ರಣಾಳಿಕೆಯ ಒಟ್ಟು ಭರವಸೆಗಳಲ್ಲಿ 162 ಭರವಸೆಗಳನ್ನು ಈಡೇರಿಸಲು ಕ್ರಮವಹಿಸಿದ್ದೇವೆ ಎಂದಿದ್ದಾರೆ.
ಈ ಬಾರಿ ರಾಜ್ಯದಲ್ಲಿ ಭೀಕರ ಬರಗಾಲವಿದೆ. ಮಳೆ ಕೊರತೆಯಿಂದಾಗಿ ಅನೇಕ ಕಡೆಗಳಲ್ಲಿ ಉದ್ಭವವಾಗಿರುವ ನೀರಿನ ಸಮಸ್ಯೆಯನ್ನು ಪರಿಹರಿಸಲು ನಾವು ಕೂಡ ಶಕ್ತಿ ಮೀರಿ ಶ್ರಮಿಸುತ್ತಿದ್ದೇವೆ ಎಂದರು.
ಬುದ್ಧ, ಬಸವಣ್ಣ, ಬಾಬಾ ಸಾಹೇಬರು, ಗಾಂಧೀಜಿ, ಕುವೆಂಪು, ನಾರಾಯಣ ಗುರುಗಳು, ಸಂತ ಶಿಶುನಾಳ ಶರೀಫರಾದಿಯಾಗಿ ಎಲ್ಲಾ ಮಾನವತಾವಾದಿಗಳಿಂದ ಸ್ಪೂರ್ತಿ ಪಡೆಯೋಣ. ಸಂವಿಧಾನ ವಿರೋಧಿ ಶಕ್ತಿಗಳಿಗೆ ಈ ನೆಲದಲ್ಲಿ ಅವಕಾಶವಿಲ್ಲ ಎಂದು ಸಾಬೀತು ಮಾಡೋಣ. ನಾಡನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸುವ ಪ್ರತಿಜ್ಞೆಗೈಯ್ಯೋಣ. ಕರ್ನಾಟಕದ ಹಿರಿಮೆ, ಗರಿಮೆ ಮತ್ತು ಸ್ವಾಭಿಮಾನವನ್ನು ಕಾಪಾಡಿಕೊಳ್ಳೋಣ ಎಂದು ಕರೆ ಕೊಟ್ಟಿದ್ದಾರೆ.