ಜಮ್ಮು: ಜಮ್ಮು ಮತ್ತು ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಗುಂಡಿನ ದಾಳಿ ನಡೆದಿದ್ದು, ಪಾಕ್ ಸೇನೆಯ ಗುಪ್ತಚರ ಘಟಕದಲ್ಲಿ ಕೆಲಸ ಮಾಡಿದ್ದ ಮತ್ತು ತರಬೇತಿ ಪಡೆದ ಲಷ್ಕರ್-ಎ-ತೈಬಾ (ಎಲ್‌ಇಟಿ) ಮಾರ್ಗದರ್ಶಕಯನ್ನು ಭಾರತೀಯ ಸೇನೆ ಬಂಧಿಸಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಕೋಟ್ಲಿಯ ಸಬ್ಜ್‌ಕೋಟ್ ಗ್ರಾಮದ ನಿವಾಸಿ ತಬಾರಕ್ ಹುಸೇನ್ (32) ಆರು ವರ್ಷಗಳಲ್ಲಿ ಎರಡನೇ ಬಾರಿಗೆ ಭಾರತದ ಗಡಿ ಭಾಗಕ್ಕೆ ನುಸುಳಲು ಪ್ರಯತ್ನಿದ್ದು, ಆತನನ್ನು ಇದೀಗ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿಂದೆ, ತಬಾರಕ್ ಮತ್ತು ಅವರ ಕಿರಿಯ ಸಹೋದರ ಹರೋನ್ ಅಲಿ ಅಮೃತಸರದ ಅಟ್ಟಾರಿ-ವಾಘಾ ಗಡಿಯ ಮೂಲಕ ವಾಪಸಾಗುವ ಮೊದಲು 26 ತಿಂಗಳ ಸೆರೆವಾಸ ಅನುಭವಿಸಿದ್ದರು.

ಸೇನೆಯು ಆತನನ್ನು ಬಂಧಿಸಲು ಮುಂದಾದಾಗ, “ನಾನು ಸಾಯಲು ಬಂದಿದ್ದೇನೆ. ನಾನು ದ್ರೋಹಕ್ಕೆ ಒಳಗಾಗಿದ್ದೇನೆ. ನನಗೆ ಮೋಸಮಾಡಿಬಿಟ್ಟರು. ಸಹೋದರರೇ, ನನ್ನನ್ನು ಇಲ್ಲಿಂದ ಪಾರು ಮಾಡಿʼ ಎಂದು ಗಾಯಗೊಂಡ ಹುಸೇನ್ ಕೂಗಿಕೊಳ್ಳುತ್ತಿದ್ದ ಎಂದು ಸೇನೆ ತಿಳಿಸಿದೆ.

ರಾಜೌರಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಅಸ್ಲಾಂ ಮಾತನಾಡಿ, ನೌಶೇರಾ ಸೆಕ್ಟರ್‌ನ ಸೆಹರ್ ಮಕ್ರಿ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆಯನ್ನು ಕಾವಲು ಕಾಯುತ್ತಿರುವ ಸೇನಾ ಪಡೆಗಳು ನುಸುಳುಕೋರ ತಬಾರಕ್‌ನ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದರು. ಈ ವೇಳೆ ತಬಾರಕ್‌ ತಪ್ಪಿಸಿಕೊಳ್ಳು ಯತ್ನಿಸಿದಾಗ ಆತನ ಮೇಲೆ ಗುಂಡು ಹಾರಿಸಿ ಬಂಧಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಟೋಲ್ ಶುಲ್ಕ ಪಾವತಿಸಲು ಕೇಳಿದ್ಕೆ ಮಹಿಳಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ… ವಿಡಿಯೋ

BIGG NEWS : ಉತ್ತರ ಕರ್ನಾಟಕಕ್ಕೆ ನ್ಯಾಷನಲ್ ಲಾ ಕಾಲೇಜು : ಸಿಎಂ ಬಸವರಾಜ ಬೊಮ್ಮಾಯಿ

BIGG NEWS : ರಾಜ್ಯ ಸರ್ಕಾರದಿಂದ `ಅನರ್ಹ ಪಡಿತರ ಚೀಟಿ’ದಾರರಿಗೆ ಬಿಗ್ ಶಾಕ್!

Share.
Exit mobile version