ಚಿಕ್ಕಬಳ್ಳಾಪುರ : ಬೆಂಗಳೂರು, ಮೈಸೂರು , ಬಳ್ಳಾರಿ, ಕೋಲಾರದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಬಹಳ ಆತಂಕ ಮೂಡಿಸಿತ್ತು. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಕೂಡ ಚಿರತೆ ಪ್ರತ್ಯಕ್ಷವಾಗಿದೆ.

ಇಂದು ಮಂಗಳವಾರ ಸಂಜೆ ಘಾಟಿ ದೇವಾಲಯದಲ್ಲಿ ಭಕ್ತರಿಗೆ ಚಿರತೆ ಕಾಣಿಸಿಕೊಂಡಿದೆ. ಲಘುಮೇನಗಳ್ಳಿ ಕ್ರಾಸ್ ಬಳಿ ಚಿರತೆ ರಸ್ತೆ ದಾಟಿದ್ದು, ಜನರು ಆತಂಕಗೊಂಡಿದ್ದಾರೆ.

ಈ ಹಿನ್ನೆಲೆ ಅರಣ್ಯ ಇಲಾಖೆ ಚಿರತೆ ಹಿಡಿಯಲು ಚನ್ನಾಪುರ ಸಮೀಪದ ನಂದಿಬೆಟ್ಟದ ತಪ್ಪಲಿನ ನೀಲಗಿರಿ ತೋಪಿನಲ್ಲಿ ಬೋನು ಇಟ್ಟಿದ್ದು, ಚಿರತೆ ಹಿಡಿಯಲು ಕಾದು ಕುಳಿತಿದ್ದಾರೆ.

OMG : ಆನೆಗೆ ತಿನ್ನಲು ಕಬ್ಬು ಕೊಟ್ಟ ಲಾರಿ ಚಾಲಕನಿಗೆ ಬಿತ್ತು 75 ಸಾವಿರ ದಂಡ..!

‘ಜನಾರ್ಧನ ರೆಡ್ಡಿ’ ಸ್ನೇಹಕ್ಕೆ ಪ್ರಾಣ ಕೊಡುವ ವ್ಯಕ್ತಿ : ಸಚಿವ ಶ್ರೀರಾಮುಲು

Share.
Exit mobile version