ಹುಬ್ಬಳ್ಳಿ: ವಿಧಾನಸಭೆಯಲ್ಲಿ 18 ಶಾಸಕರ ಅಮಾನತು ಕ್ರಮದಿಂದ ಬೇಸರಗೊಂಡಿದ್ದಂತ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ರಾಜೀನಾಮೆ ನೀಡುವಂತ ನಿರ್ಧಾರಕ್ಕೆ ಬಂದಿದ್ದರು. ಆದರೇ ಈಗ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುತ್ತಿರುವಂತ ಘೋಷಣೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ನನ್ನ ಜೊತೆಗೆ ಗವರ್ನರ್, ಸಚಿವರು, ಸಾಹಿತಿಗಳು ಮಾತನಾಡಿದ್ದಾರೆ. ಮಾರ್ಚ್.27ರಂದು ಕುಳಿತು ಚರ್ಚೆ ಮಾಡಿ ನಿರ್ಧಾರಿಸೋಣ ಅಂತ ಹೇಳಿದ್ದಾರೆ. ಹೀಗಾಗಿ ರಾಜೀನಾಮೆ ವಿಚಾರವನ್ನು ಇಲ್ಲಿಗೆ ಕೈಬಿಟ್ಟುಬಿಡಿ ಎಂದರು.
ಅಂದಹಾಗೇ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ನೀಡುತ್ತಿರುವಂತ ಪತ್ರ ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಅವರ ಸಹಿ ಇರದಂತ ರಾಜೀನಾಮೆ ಪತ್ರ ಹರಿದಾಡಿತ್ತು. ಈಗ ಅವರು ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.
ಶಿವಮೊಗ್ಗ: ತಾಲ್ಲೂಕು ಪಂಚಾಯತ್ ಫಲಾನುಭವಿ ಆಧಾರಿತ ಕಾರ್ಯಕ್ರಮದಡಿ ಅರ್ಜಿ ಆಹ್ವಾನ