ಶಿವಮೊಗ್ಗ: ಇಂದು ಜನ್ನತ್ ಗಲ್ಲಿಯಲ್ಲಿನ ಗಣೇಶ ಮೂರ್ತಿಯನ್ನು ವಿಸರ್ಜನಾ ಮೆರವಣಿಗೆಯ ವೇಳೆ ನಡೆದಿದ್ದಂತ ಘಟನೆಯೊಂದು ನಡೆದಿತ್ತು. ಈ ಘಟನೆಯ ವೀಡಿಯೋವನ್ನು ಶೇರ್ ಮಾಡಿ ವೈರಲ್ ಮಾಡಿದ್ರೇ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಎಚ್ಚರಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಡಿವೈಎಸ್ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇವತ್ತು ಸಾಗರ ನಗರದ ಜೈಭುವನೇಶ್ವರಿ ಯುವಕರ ಸಂಘದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಸಂಘಟಕರಿಗೆ, ಪದಾಧಿಕಾರಿಗಳಿಗೆ ಒಂದು ವಿಚಾರವಾಗಿ ಅಸಮಾಧಾನ ಉಂಟಾಗಿತ್ತು. ಪೊಲೀಸರ ಜೊತೆಗೆ ತಮ್ಮ ಅಸಮಾಧಾನವನ್ನು ಹಂಚಿಕೊಂಡಿದ್ದರು. ನಮ್ಮ ಕಡೆಯಿಂದ ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ ಎಂಬ ಆಶ್ವಾಸನೆ ನೀಡಿದ ಬಳಿಕದ ಮೆರವಣಿಗೆ ಶಾಂತಿಯುತವಾಗಿ ನಡೆಯಿತು. ವಿಸರ್ಜನೆ ಕೂಡ ನಡೆದಿದೆ. ಶಾಂತಿಯುತವಾಗಿದೆ. ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದರು.
ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ನಡೆದಂತ ಘಟನೆಯ ವೀಡಿಯೋ ಏನು ಬಂದಿದೆ ಅದು ಬಿಎನ್ ಎಸ್ ಸೆಕ್ಷನ್ 20 ಅಡಿಯಲ್ಲಿ ಬರಲಿದೆ. ಈ ಕಾಲಂ ಅಡಿಯಲ್ಲಿ ಯಾವುದೇ ರೀತಿಯ ಸುದ್ದಿಯನ್ನು ಹಬ್ಬಿಸೋದಾಗಲೀ, ವೀಡಿಯೋವನ್ನು ಶೇರ್ ಮಾಡೋದಾಗಲೀ ಅಪರಾಧವಾಗಿರುತ್ತದೆ. ಆದುದ್ದರಿಂದ ಯಾರೂ ಈ ರೀತಿಯ ವೀಡಿಯೋ ಶೇರ್ ಮಾಡಬಾರದು. ಆ ರೀತಿಯಾಗಿ ವೀಡಿಯೋ ಶೇರ್ ಮಾಡಿದ್ರೇ, ಬಿಎನ್ಎಸ್ ಕಾಯ್ದೆಯ ಕಲಂ 20 ಉಲ್ಲಂಘಿಸಿದ್ರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.