ಬೆಂಗಳೂರು:BMTC ಯ ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಈಗ ಗುತ್ತಿಗೆ ಆಧಾರದ ಮೇಲೆ ಗುತ್ತಿಗೆಗೆ ಪಡೆಯಬಹುದು.
ಮೊದಲ ಬಾರಿಗೆ ಮೆಟ್ರೋ ಫೀಡರ್ ಬಸ್ಗಳನ್ನು ಕಂಪನಿಗಳಿಗೆ ಖಾಯಂ ಗುತ್ತಿಗೆ ಆಧಾರದಲ್ಲಿ ನೀಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿರ್ಧರಿಸಿದೆ. ಬಿಎಂಟಿಸಿ ವತಿಯಿಂದ ನಮ್ಮ ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಬಸ್ ಸೇವೆ ನೀಡಲಾಗುತ್ತಿದೆ. ಬಸ್‌ಗಳ ಸಂಖ್ಯೆಯನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತಿದೆ. ಇದೀಗ ಈ ಸೇವೆಯನ್ನು ಶಾಲಾ-ಕಾಲೇಜುಗಳಿಗೆ, ಕಾರ್ಖಾನೆಗಳಿಗೂ ವಿಸ್ತರಣೆ ಮಾಡಲು ಬಿಎಂಟಿಸಿ ಮುಂದಾಗಿದೆ.
ಬಸ್ ಗಳ ಬಾಡಿಗೆ:
ಮಿಡಿ-ಬಸ್: ದಿನಕ್ಕೆ 80 ಕಿಮೀವರೆಗೆ 4,000 ರೂ. 80 ಕಿಮೀ ಮೇಲ್ಪಟ್ಟು, ರೂ 60/ಕಿಮೀ ಶುಲ್ಕ ನಿಗದಿ
ಸಾಮಾನ್ಯ ಬಸ್: ದಿನಕ್ಕೆ 80 ಕಿಮೀವರೆಗೆ 5,000 ರೂ. 80 ಕಿಮೀ ಮೇಲೆ, ರೂ 70/ಕಿಮೀ.ನಿಗದಿ
ಭಾರತ್ ಸ್ಟೇಜ್ 6 ಬಸ್: ದಿನಕ್ಕೆ 80 ಕಿಮೀವರೆಗೆ 6,000 ರೂ. 80 ಕಿಮೀ ಮೇಲೆ, ರೂ 80/ಕಿಮೀ. ನಿಗದಿ
ವೋಲ್ವೋ: ದಿನಕ್ಕೆ 80 ಕಿಮೀವರೆಗೆ 8,000 ರೂ. 80 ಕಿಮೀ ಮೇಲೆ, ರೂ 90/ಕಿಮೀ. ನಿಗದಿ
ಎಲೆಕ್ಟ್ರಿಕ್ ಬಸ್ (9 ಮೀ ಉದ್ದ): ದಿನಕ್ಕೆ 80 ಕಿಮೀವರೆಗೆ 9,000 ರೂ. 80 ಕಿಮೀ ಮೇಲೆ, ರೂ 100/ಕಿಮೀ.