ಶಿವಮೊಗ್ಗ: ನಮ್ಮ ಮಾತೃಭಾಷೆಯಾದ ಕನ್ನಡವನ್ನು ಕಲಿತು ನಲಿಯಬೇಕು. ವ್ಯವಹಾರಿಕ ಭಾಷೆಯಾಗಿ ಇಂಗ್ಲೀಷ್ ಕಲಿಯಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲರಾದ ಎಚ್.ಬಿ.ರಾಘವೇಂದ್ರ ಅಭಿಪ್ರಾಯ ಪಟ್ಟರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ದಿಗಟೆಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ವಿಕಸನ ಶಿಬಿರ ಮತ್ತು ಉಚಿತ ಸಮವಸ್ತ್ರ, ಪುಸ್ತಕ, ಪೆನ್ನು ವಿತರಿಸಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಇಂಗ್ಲೀಷ್ ಭಾಷೆ ಜಗತ್ತಿನ ಸಂಪರ್ಕಕ್ಕೆ ಇರುವ ಬಹು ಮುಖ್ಯ ಕೊಂಡಿಯಾಗಿದೆ. ಹಾಲಿ ಕರ್ನಾಟಕದಲ್ಲಿ ಹಲವರು ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣವಾಗ ಬೇಕು ಎಂದು ಪ್ರವಚನ ಕೊಡುತ್ತಿದ್ದಾರೆ. ಆದರೆ ತಮ್ಮ ಮಕ್ಕಳನ್ನು ಮಾತ್ರ ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸುತ್ತಾ ಇದ್ದಾರೆ. ಇದು ಬಡವರ ಮಕ್ಕಳನ್ನು ಹೊಂಡಕ್ಕೆ ತಳ್ಳಿ ಆಳ ನೋಡುವ ಹುನ್ನಾರ. ಇಂತಹ ಹುನ್ನಾರಕ್ಕೆ ಪೋಷಕರು ಬಲಿಯಾಗದೆ ಮಕ್ಕಳು ಇಂಗ್ಲೀಷ್ ಕಲಿಯಲು ಪ್ರೋತ್ಸಾಹ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಇಂಗ್ಲೀಷ್ ಕಲಿಸುವ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿದರು.
ಮಾಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣಪ್ಪ ಮಾತನಾಡಿ ಸರ್ಕಾರಿ ಶಾಲೆ ಮಕ್ಕಳಿಗೆ ಇರುವ ಕೊರತೆಯನ್ನು ನೀಗಿಸಲು ದಾನಿಗಳು ಮುಂದೆ ಬರಬೇಕು ಎಂಬುದಾಗಿ ಕರೆ ನೀಡಿದರು.
ಸಿಆರ್ ಪಿ ಲೋಲ ಕುಮಾರ್ ಮಾತನಾಡಿ ದಿಗಟೆ ಕೊಪ್ಪ ಶಾಲೆಯಲ್ಲಿ ಈ ಭಾರಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ನೆಡಯಲಿದೆ. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಮಾದರಿ ಶಾಲೆ ಮಾಡೋಣ ಎಂದರು.
ಮುಖ್ಯ ಶಿಕ್ಷಕ ಸತ್ಯನಾರಾಯಣ ಎಂ.ಪಿ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ದಿಸೆಯಲ್ಲಿ ಶಾಲೆಯ ಶಿಕ್ಷಕ ವೃಂದ ಮತ್ತು ಎಸ್ ಡಿ ಎಂ ಸಿ.ಅಧ್ಯಕ್ಷರು ಸದಸ್ಯರು ವಿಶೇಷ ಪ್ರಯತ್ನ ಮಾಡುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಓದಿನಲ್ಲಿ ಆಸಕ್ತಿ ತೋರುತ್ತಿದ್ದಾರೆ ಎಂದರು.
ಎಸ್ ಡಿ ಎಂ ಸಿ ಅಧ್ಯಕ್ಷ ಅಣ್ಣಪ್ಪ ಮಾತನಾಡಿ ಖಾಸಗಿ ಶಾಲೆಯ ಮೋಹಕ್ಕೆ ನಮ್ಮ ಪೋಷಕರು ಒಳಗಾದೇ, ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲಾಗಿದೆ. ಪೋಷಕರು ಸದುಪಯೋಗ ಪಡಿಸಿಕೊಳ್ಳಿ. ಸರ್ಕಾರದ ಅನುದಾನ ಇಲ್ಲದಿದ್ದರೂ, ಈ ವರ್ಷದಿಂದ ಪ್ರೀ ನರ್ಸರಿ ಆರಂಭಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತ ಅಣ್ಣಪ್ಪ ಕೆಳದಿಪುರ, ಎಸ್.ಡಿ.ಎಂ.ಸಿ. ಸದಸ್ಯ ಉಪಾಧ್ಯಕ್ಷೆ ಸುಮ, ನಾಗರಾಜ ಬಂದಗದ್ದೆ, ಶಿಕ್ಷಕಿ ಸುಮಲತಾ, ಮೀನಾಕ್ಷಿ ವೇದಿಕೆಯಲ್ಲಿ ಇದ್ದರು. ಶಿಕ್ಷಕಿ ಸುವರ್ಣಮ್ಮ ಆಚಾರ್ ಸ್ವಾಗತಿಸಿದರೇ, ಶಿಕ್ಷಕಿ ಹೆಲೆನ್ ಗೋಮ್ಸ್ ವಂದಿಸಿ ನಿರೂಪಿಸಿದರು.
ವರದಿ: ಸಂದೀಪ್, ಸಾಗರ
BIG NEWS: ಹಾಸನದಲ್ಲಿ ಹಠಾತ್ ಸಾವಿನ ತನಿಖಾ ವರದಿ ಬಿಡುಗಡೆ ಮಾಡಿದ ಸರ್ಕಾರ: ಏನು ಕಾರಣ ಗೊತ್ತಾ?
GOOD NEWS: ‘ನರ್ಸಿಂಗ್ ಕೋರ್ಸ್’ ಶುಲ್ಕ ಹೆಚ್ಚಳದ ಆತಂಕದಲ್ಲಿದ್ದವರಿಗೆ ‘ಸಚಿವ ಶರಣಪ್ರಕಾಶ್ ಪಾಟೀಲ್’ ಗುಡ್ ನ್ಯೂಸ್