ಬೆಂಗಳೂರು :  ಅಡಿಕೆ ಬೆಳೆಗಾರರ ನೆಮ್ಮದಿ ಕಸಿದುಕೊಂಡ ಮಾರಕ ಎಲೆ ಚುಕ್ಕೆ ರೋಗದಿಂದ ಜನರು ಆತಂಕಗೊಂಡಿದ್ದಾರೆ, ಚಿಕ್ಕಮಗಳೂರು, ಶಿವಮೊಗ್ಗ, ಕರಾವಳಿ ಜಿಲ್ಲೆಯ ಭಾಗದಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಂಡಿದ್ದು, ರೈತರು ಆತಂಕದಲ್ಲಿದ್ದಾರೆ.

ಇದೀಗ ಎಲೆ ಚುಕ್ಕೆ ರೋಗದ ಕುರಿತು ಅಧ್ತಯನ ನಡೆಸಲು ಕೇಂದ್ರ ಸರ್ಕಾರ ರಚನೆ ಮಾಡಿರುವ ಏಳು ತಜ್ಞರ ಸಮಿತಿಯು ಈಗಾಗಲೇ ಸಭೆ ನಡೆಸಿದ್ದು, ನವೆಂಬರ್ 20 ಹಾಗೂ 21 ರಂದು ರೋಗ ಪೀಡಿತ ತೋಟಗಳಿಗೆ ಭೇಟಿ ನೀಡಲಿದೆ.

ಎಲೆ ಚುಕ್ಕೆ ರೋಗದಿಂದ ಅಡಕೆ ತೋಟ ನಾಶವಾಗುತ್ತಿರುವ ಬಗ್ಗೆ ಅಕ್ಟೋಬರ್ 19 ರಂದು ಮಾಜಿ ಸಿಎಂ ಯಡಿಯೂರಪ್ಪ  ಮತ್ತು ರಾಜ್ಯ ಅಡಕೆ ಕಾರ್ಯಪಡೆಯ ಅಧ್ಯಕ್ಷ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗವು ಕೇಂದ್ರ ಸರ್ಕಾರದ ಗಮನ ಸೆಳೆದು ಇದಕ್ಕೆ ಔಷಧಿ ಕಂಡು ಹಿಡಿಯಲು ತಜ್ಞರ ಸಮತಿ ರಚಿಸುವಂತೆ ಕೋರಿತ್ತು,

ನ.20  ರಂದು ಚಿಕ್ಕಮಗಳೂರು ಜಿಲ್ಲೆಯ ಕಳಸ ಭಾಗದ ತೋಟಗಳಿಗೆ ಸಮಿತಿ ಭೇಟಿ ನೀಡಲಿದ್ದು, ನ.21 ರಂದು ತೀರ್ಥಹಳ್ಳಿ ತಾಲೂಕಿನ ತೋಟಗಳಿಗೆ ನಿಯೋಗ ಭೇಟಿ ನೀಡಲಿದೆ. ತೋಟಗಳ ಭೇಟಿ ಬಳಿಕ ತಜ್ಞರು ಸಮಿತಿ ಸದಸ್ಯರು ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.

ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕರಾವಳಿ ಭಾಗದಲ್ಲಿ, ರೈತ ಸಮುದಾಯದ ಜೀವನಾಡಿಯದ, ಅಡಿಕೆ ಬೆಳೆ, ಎಲೆ ಚುಕ್ಕೆ ರೋಗದಿಂದ, ನಲುಗಿ ಹೋಗಿದ್ದಾರೆ. ಮಲೆನಾಡು ಕೃಷಿಕ ವರ್ಗವನ್ನು ಕಾಡುತ್ತಿರುವ ಎಲೆಚುಕ್ಕೆ ರೋಗ ಹೆಮ್ಮಾರಿಯಾಗಿ ಅಡಕೆ ತೋಟವನ್ನು ನಾಶ ಮಾಡುತ್ತಿದೆ. ಕಷ್ಟಪಟ್ಟು ಸಾಲಸೂಲ ಮಾಡಿ ಅಡಕೆ ತೋಟ ಬೆಳೆಸಿದ ರೈತರಿಗೆ ಎಲೆಚುಕ್ಕೆ ರೋಗ ದೊಡ್ಡ ಕಂಟಕವಾಗಿದೆ.

ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ರೋಗ ಹೆಚ್ಚಿನ ಪ್ರಮಾಣದಲ್ಲಿ ಆವರಿಸಿದೆ. ಇನ್ನೂ, . ಬಯಲು ಸೀಮೆಯಾದ ತುಮಕೂರಿನಲ್ಲಿಯೂ ನಿರಂತರ ಮಳೆ ಹಾಗೂ ಶೀತ ವಾತಾವರಣದಿಂದ ಎಲೆ ಚುಕ್ಕೆ ರೋಗ ಹರಡುತ್ತಿದೆ.. ಎಲೆ ಚುಕ್ಕೆ ರೋಗದ ಜತೆಗೆ ಕೆಲವೆಡೆ ಕೊಳೆ ರೋಗ, ಹಳದಿ ರೋಗ , ಹರಳು ಉದುರುವ ಸಮಸ್ಯೆ ಉಂಟಾಗಿದ್ದು, ರೈತರು ಆತಂಕದಲ್ಲಿದ್ದಾರೆ.

ನ.16ರಿಂದ 18ರವರೆಗೆ ಬೆಂಗಳೂರು ತಂತ್ರಜ್ಞಾನ ಸಮಾವೇಶ, ಪಿಎಂ ಮೋದಿ ಉದ್ಘಾಟನೆ: 5 ಸಾವಿರಕ್ಕೂ ಹೆಚ್ಚು ಉದ್ಯಮಿಗಳ ಆಗಮನ

ನಾಳೆ ಸಂಜೆ ತುಮಕೂರಿನ ತೊಂಡಗೆರೆಯಲ್ಲಿ ಹಿರಿಯ ನಟ ಲೋಹಿತಾಶ್ವ ಅಂತ್ಯಕ್ರಿಯೆ, ಪುತ್ರ ಶರತ್‌ ಲೋಹಿತಾಶ್ವ ಮಾಹಿತಿ

Share.
Exit mobile version