ನವದೆಹಲಿ: ಕೇರಳದ ವಯನಾಡಿನಲ್ಲಿ ಭಾರೀ ಭೂ ಕುಸಿತದ ಪರಿಣಾಮ ನೂರಾರು ಜನರು ಸಾವನ್ನಪ್ಪಿದ್ದರೇ, ಹಲವರು ನಾಪತ್ತೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ನಾಳೆ ಕೇರಳದ ವಯನಾಡಿಗೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಭೇಟಿ ನೀಡಲಿದ್ದಾರೆ.
ಕೇರಳದ ವಯನಾಡು ಜಿಲ್ಲೆಯಲ್ಲಿ ಭೂ ಕುಸಿತದ ಪರಿಣಾಮದಿಂದ ಈವರೆಗೆ 123 ಮಂದಿ ಸಾವನ್ನಪ್ಪಿದ್ದಾರೆ. ಮೆಪ್ಪಾಡು ಸೇರಿದಂತೆ ವಿವಿಧ ಗ್ರಾಮಗಳೇ ಭೂ ಕುಸಿತದಿಂದ ಕೊಚ್ಚಿ ಹೋಗಿ, ಹಲವರು ಸಾವನ್ನಪ್ಪಿದ್ದಾರೆ. ಮತ್ತೆ ಕೆಲವರು ನಾಪತ್ತೆಯಾಗಿದ್ದಾರೆ.
ಈ ಹಿನ್ನಲೆಯಲ್ಲಿ ನಾಳೆ ಕೇರಳದ ವಯನಾಡಿಗೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ದೆಹಲಿಯಿಂದ ಮೈಸೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಲಿರುವಂತ ಅವರು, ಮೈಸೂರಿನಿಂದ ರಸ್ತೆ ಮಾರ್ಗದ ಮೂಲಕ ನಾಳೆ ವಯನಾಡಿಗೆ ಪ್ರಯಾಣ ಬೆಳಸಲಿದ್ದಾರೆ. ಕಾರಿನಲ್ಲಿ ವಯನಾಡಿಗೆ ತೆರಳಲಿರುವಂತ ರಾಹುಲ್ ಗಾಂಧಿ ಭೂ ಕುಸಿತ ಪ್ರದೇಶವನ್ನು ವೀಕ್ಷಣೆ ಮಾಡಲಿದ್ದಾರೆ.
ದೋಷ ನಿವಾರಣೆಗಾಗಿ ಪೂಜೆ ಮಾಡುವುದಾಗಿ ಕರೆಸಿ ಮಹಿಳೆಯ ಮೇಲೆ ಅತ್ಯಾಚಾರ: ಪೂಜಾರಿ ಅರೆಸ್ಟ್
BREAKING: ಕ್ರೌಡ್ ಸ್ಟ್ರೈಕ್ ನಂತ್ರ ‘ಮೈಕ್ರೋಸಾಫ್ಟ್ 365’ ಸೇವೆ ಸ್ಥಗಿತ: ಬಳಕೆದಾರರು ಪರದಾಟ | Microsoft 365