ಶಿವಮೊಗ್ಗ : ಲೀಡ್ ಬ್ಯಾಂಕ್‌ಗಳು ಗ್ರಾಮೀಣ ಮತ್ತು ಹೋಬಳಿ ಮಟ್ಟದಲ್ಲಿ ತಮ್ಮ ಹೊಸ ಶಾಖೆಗಳನ್ನು ತೆರೆಯುವ ಮೂಲಕ ಈ ಭಾಗದ ಜನರಿಗೆ ಸರ್ಕಾರದ ಯೋಜನೆಗಳನ್ನು ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಜಿ.ಪಂ ಸಿಇಓ ಹೇಮಂತ್.ಎನ್ ಸಲಹೆ ನೀಡಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಶಿವಮೊಗ್ಗ ಇವರ ವತಿಯಿಂದ ಸೋಮವಾರ ಜಿಲ್ಲಾ ಪಂಚಾಯತ್ ನಜೀರ್‌ಸಾಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಡಿಸಿಸಿ-ಡಿಎಲ್‌ಆರ್‌ಸಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಹಾಗೂ ಹೋಬಳಿ ಮಟ್ಟದಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದ್ದು, ಲೀಡ್ ಬ್ಯಾಂಕ್‌ಗಳು ಆ ಭಾಗದಲ್ಲಿ ತಮ್ಮ ಬ್ರಾಂಚ್‌ಗಳನ್ನು ಸ್ಥಾಪಿಸಿಕೊಳ್ಳಬೇಕು. ಭದ್ರಾವತಿಯ ಗ್ರಾಮೀಣ ಹಾಗೂ ಹೋಬಳಿಗಳಲ್ಲಿ ಈಗಾಗಲೇ ಐಡಿಬಿಐ ಬ್ಯಾಂಕ್ ತನ್ನ ಬ್ರಾಂಚ್ ತೆರೆದಿದೆ. ಸೊರಬ, ಮುಡುಬ, ದೊಡಮಘಟ್ಟ ಭಾಗಗಳಲ್ಲಿ ಬ್ಯಾಂಕ್‌ಗಳ ಅವಶ್ಯಕತೆ ಇದೆ. ಹಾಗೂ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳೂ ಕೂಡ ಇದ್ದಾರೆ. ಹಾಗಾಗಿ ಈ ಭಾಗಗಳಲ್ಲಿ ಶಾಖೆಯನ್ನು ತೆರೆದರೆ ರೈತರಿಗೆ, ಸ್ವ ಉದ್ಯೋಗಿಗಳಿಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.
ರ್ಕಾರದಿಂದ ಆರ್ಥಿಕ ಸೇರ್ಪಡೆ ಜಾಗೃತಿ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಈ ಕಾರ್ಯಕ್ರಮದ ಕುರಿತಾಗಿ ಬ್ಯಾಂಕ್‌ಗಳು ನಗರ, ಗ್ರಾಮೀಣ ಹಾಗೂ ಹೋಬಳಿ ಮಟ್ಟದಲ್ಲಿ ಅರಿವು ಮೂಡಿಸಬೇಕು. ಆಯಾ ಭಾಗದ ಬ್ಯಾಂಕ್‌ಗಳು ಕ್ಯಾಂಪ್ ಮಾಡಿ ಫಲಾನುಭವಿಗಳಿಗೆ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಹಾಗೂ ಅದರಿಂದಾಗುವ ಅನುಕೂಲವನ್ನು ಹೇಳಬೇಕು.
ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮವನ್ನು ಜೂನ್ 2024 ರಿಂದ ಅರಂಭ ಮಾಡಲಾಗಿದೆ. 2025-26 ರವರೆಗೆ ಜಿಲ್ಲೆಯಲ್ಲಿ ಒಟ್ಟು 1000 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಅದರಲ್ಲಿ ಜೂನ್ 2025 ರವರೆಗೆ 250 ಅಭ್ಯರ್ಥಿಗಳನ್ನು ಆಯ್ಕೆಯಾಗಿದ್ದು, 261 ಅಭ್ಯರ್ಥಿಗಳು ತರಬೇತಿಯಲ್ಲಿ ಉತ್ತೀರ್ಣರಾಗಿದ್ದಾರೆ.
2025-26 ರವರೆಗೆ ಒಟ್ಟು 800 ಪ್ರಶಿಕ್ಷಣಾರ್ಥಿಗಳು ಒಳಗೊಂಡಿದ್ದಾರೆ. ಅದರಲ್ಲಿ ಜೂನ್ 2025 ರವೆರೆಗೆ 200 ಅಭ್ಯರ್ಥಿಗಳು ಆಯ್ಕೆಯಾಗಿದ್ದು, 261 ಅಭ್ಯರ್ಥಿಗಳು ತರಬೇತಿಯಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ತಾಲ್ಲೂಕು ಸೇರಿದಂತೆ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮಗಳು ಬಾಕಿ ಉಳಿದಿದ್ದು, ಕೂಡಲೇ ಆಯೋಜಿಸಬೇಕು. ಹಾಗೂ ತರಬೇತಿಯಲ್ಲಿ ಭಾಗವಹಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಬೇಕು ಎಂದರು.
ಪಶುಪಾಲನೆಗಾಗಿ ಸಾಲ ಕೊಡುವ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿ ಕಾರ್ಯಕ್ರಮವಾಗಿದ್ದು, ಇದನ್ನು ರೈತರಿಗೆ ಸರಿಯಾಗಿ ತಲುಪಿಸುವ ಕೆಲಸವನ್ನು ಬ್ಯಾಂಕ್‌ಗಳು ಮಾಡಬೇಕು. ಈಗಾಗಲೇ ಕೆಲವು ಬ್ಯಾಂಕ್ ತಮ್ಮ ಟಾರ್ಗೆಟ್ ತಲುಪುವಲ್ಲಿ ಹಿಂದೆ ಉಳಿದಿದ್ದು, ಈ ಸಂಬಂಧ ಲೀಡ್ ಬ್ಯಾಂಕ್ ಹಾಗೂ ಪಶುಪಾಲನೆ ಇಲಾಖೆ ಸಭೆ ನಡೆಸಿ ಈ ಯೋಜನೆಯನ್ನು ರೈತರಿಗೆ ತಲುಪಿಸುವ ಕಾರ್ಯ ಮಾಡಬೇಕು. ಮುಂದಿನ ಸಭೆಯಲ್ಲಿ ಬ್ಯಾಂಕ್‌ಗಳು ತಮ್ಮ ಟಾರ್ಗೆಟ್ ಸಂಖ್ಯೆಯನ್ನು ನಿರೀಕ್ಷಿತ ಮಟ್ಟಕ್ಕೆ ತಲುಪಿಸಬೇಕು. ಹಾಗೂ ಕೃಷಿ ಸಾಲದಂತೆ ಮೀನುಗಾರಿಕೆ ಸಾಲವೂ ಹೆಚ್ಚಿನ ಮಹತ್ವ ಪಡೆದಿದ್ದು, ಮೀನುಗಾರಿಕೆ ಸಾಲದ ಬಗ್ಗೆ ಬ್ಯಾಂಕ್ ಹಾಗೂ ಇಲಾಖೆಗಳು ಹೆಚ್ಚು ಪ್ರಚಾರ ನೀಡಿ ಅದರಿಂದ ಮೀನುಗಾರರಿಗೆ ಇರುವ ಅನುಕೂಲವನ್ನು ತಿಳಿಸಬೇಕು ಎಂದರು.
ಓಪನಿಂಗ್ ಅಂಡ್ ಕ್ರೆಡಿಟ್ ಲಿಂಕೇಜ್ ಪೊಸಿಷನ್ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬ್ಯಾಂಕ್‌ಗಳು ಜೂನ್ 2025 ರಲ್ಲಿ 400 ಖಾತೆಗಳಿಗೆ ಕ್ರೆಡಿಟ್ ಲಿಂಕ್ ಮಾಡಿದೆ. ಇದರಲ್ಲಿ ಎಸ್‌ಬಿಐ 112 ಖಾತೆಗಳನ್ನು ಲಿಂಕ್ ಮಾಡಿದರೆ ಖಾಸಗಿ ಬ್ಯಾಂಕ್ ಹೆಚ್‌ಡಿಎಫ್‌ಸಿ ಬ್ಯಾಂಕ್ 125 ಖಾತೆಗಳನ್ನು ಕ್ರೆಡಿಟ್ ಲಿಂಕ್ ಮಾಡಿದೆ. ರಾಷ್ಟ್ರೀಯ ಬ್ಯಾಂಕ್ ಆದ ಎಸ್‌ಬಿಐ ಮುಂದಿನ ಬಾರಿ ಖಾಸಗಿ ಬ್ಯಾಂಕ್‌ಗಳಿಗಿಂತ ಉತ್ತಮ ಫಲಿತಾಂಶ ನೀಡಬೇಕು. ಹಾಗೂ ಕಾರ್ಯ ಕ್ರೆಡಿಟ್ ಲಿಂಕ್ ಮಾಡುವ ಪ್ರಕ್ರಿಯೆಗೆ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಸೂಚಿಸಿದರು.
ಪಿಎಂಎವೈ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 2809 ಅರ್ಜಿಗಳನ್ನು ಪಡೆದಿದ್ದು, ಅದರಲ್ಲಿ 1335 ಅರ್ಜಿಗಳು ಮಂಜೂರಾಗಿ 220 ಅರ್ಜಿಗಳಿಗೆ ಮನೆಯನ್ನು ವಿತರಿಸಲಾಗಿದೆ. ಇನ್ನೂ 1273 ಅರ್ಜಿಗಳು ಬಾಕಿ ಉಳಿದಿದೆ. ಇದಕ್ಕೆ ಸಂಬಂಧಪಟ್ಟಂತೆ ಬಾಕಿ ಇರುವ ಅರ್ಜಿದಾರರಿಗೆ ಕೂಡಲೇ ಪರಿಶೀಲಿಸಿ ಮನೆಯನ್ನು ಒದಗಿಸುವ ಕಾರ್ಯ ಮಾಡಬೇಕು. ಇದಕ್ಕೆ ಬೇಕಾದ ಇ-ಸ್ವತ್ತು ವ್ಯವಸ್ಥೆಯನ್ನು ಮಾಡಲು ಪಿಡಿಓ ಬಳಿ ಚರ್ಚಿಸುತ್ತೇನೆ ಎಂದರು.
ಸಭೆಯಲ್ಲಿ ಕೆನರಾ ಬ್ಯಾಂಕ್ ಉಪ ವ್ಯವಸ್ಥಾಪಕರಾದ ಆರ್.ದೇವರಾಜ್, ಲೀಡ್ ಜಿಲ್ಲಾ ಅಧಿಕಾರಿ ಬುಬುಲ್ ಬೋರ್ಡೊಲೊಯ್, ನಬಾರ್ಡ್ ನ ಶರತ್ ಗೌಡ.ಪಿ, ವಿವಿಧ ಬ್ಯಾಂಕ್‌ಗಳು ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.
ರಾಜ್ಯಾದ್ಯಂತ ‘ಗ್ಯಾರಂಟಿ’ಗಳಿಂದ ಶೇ.70ರಿಂದ 95ರಷ್ಟು ‘ಮಹಿಳೆಯರ ಜೀವನ ಮಟ್ಟ’ ಸುಧಾರಣೆ: ಅಧ್ಯಯನ ವರದಿ
BREAKING : ವರದಕ್ಷಿಣೆಗಾಗಿ ಪತಿಯ ಮನೆಯವರಿಂದ ಮೃಗಿಯ ವರ್ತನೆ : ಮಹಿಳೆಯ ಕೂದಲು ಹಿಡಿದು, ಒದ್ದು ಭೀಕರ ಹಲ್ಲೆ!