ಹಾವೇರಿ: ನಮ್ಮ ದೇಶದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಲು ಈ ದೇಶದ ಕಾನೂನು ಕಾರಣವಾಗಿದೆ. ದೇಶದಲ್ಲಿ ಕಾನೂನು ಸುವಸ್ಥೆ ಸರಿಯಾಗಿದ್ದರೆ ಬಂಡವಾಳ ಹೂಡಿಕೆ ಹೆಚ್ಚಳವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲಾ ವಕೀಲರ ಸಂಘದ ಸಭೆಯಲ್ಲಿ ಭಾಗಿ ಮಾತನಾಡಿದ ಅವರು, ವಕೀಲವವೃತ್ತಿ ಬಹಳ ವಿಶಿಷ್ಟ ವೃತ್ತಿ, ನ್ಯಾಯದಾನ ಶ್ರೇಷ್ಠ ವಾಗಿರುವ ದಾನ. ಪ್ರಜಾಪ್ರಭುತ್ವ ದಲ್ಲಿ ಮುಕ್ತವಾದ ಅವಕಾಶ ಸ್ವಾತಂತ್ರ್ಯ ಎಷ್ಟಿದೆಯೋ ಅಷ್ಡೇ ಕರ್ತವ್ಯಗಳೂ ಇವೆ. ನಮ್ಮ ಹಕ್ಕುಗಳಿಗೆ ಎಷ್ಟು ಗೌರವಿಸುತ್ತೇವೊ, ಕರ್ತವ್ಯಗಳೂ ಅಷ್ಟೇ ಗೌರವಿಸಬೇಕು ಎಂದರು.
ನಾನು ವಕೀಲರ ಕುಟುಂಬದಿಂದ ಬಂದವನು. ನಮ್ಮ ಅಜ್ಜ ಹಾಗೂ ತಂದೆ ವಕೀಲರಾಗಿದ್ದರು. ನಾನು ಹತ್ತಿರದಿಂದ ವಕೀಲರ ವೃತ್ತಿಯನ್ನು ನೋಡಿದ್ದೇನೆ. ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಫಾಲಿ ನಾರಿಮನ್, ಸೋಲಿಸೊರಾಬ್ಜಿ ಅವರಂತಹ ಹಿರಿಯ ವಕೀಲರ ಸಂಪರ್ಕ ಪಡೆಯಲು ಅನುಕೂಲವಾಯಿತು ಎಂದರು.
ದೇಶದ ಸಂವಿಧಾನ ರಚನೆಯಲ್ಲಿ ನ್ಯಾಯವಾದಿಗಳ ಪಾಲು ದೊಡ್ಡದಿದೆ. ಅಂಬೇಡ್ಕರ್ ಅವರೇ ಸ್ವತ ನ್ಯಾಯವಾದಿಗಳಾಗಿದ್ದರು. ಅವರು ಜಗತ್ತಿನ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಸ್ವಾತಂತ್ರ್ಯ ಬಂದ ಆರಂಭದಲ್ಲಿ ಸಂಸತ್ತಿಗೆ ಆಯ್ಕೆ ಆಗುವುದರಲ್ಲಿ ವಕೀಲರ ಸಂಖ್ಯೆ ಹೆಚ್ಚಿತ್ತು. ಹಂತ ಹಂತವಾಗಿ ಕಡಿಮೆಯಾಗುತ್ತ ಬಂದಿದೆ ಎಂದರು.
ನಾನು ಕಾನೂನು ಸಚಿವನಾಗಿ ಕೆಲಸ ಮಾಡುವ ಅವಕಾಶ ದೊರೆತಿತ್ತು. ಕಾನೂನು ರಚನೆಯಲ್ಲಿ ಸ್ಪಷ್ಟತೆ ಇರಬೇಕು, ಗೊಂದಲಗಳು ಇರಬಾರದು. ಯಾರಿಗೆ ಕಾನೂನು ಮಾಡುತ್ತಿದ್ದೇವೆ. ಯಾವ ಕಾರಣಕ್ಕೆ ಕಾನೂನು ಮಾಡುತ್ತಿದ್ದದೇವೆ ಎನ್ನುವುದನ್ನು ತಿಳಿದುಕೊಂಡಿರಬೇಕು. ಕ್ರೈಮ್ ಲೀಡ್ಸ್ ಲಾ ಎನ್ನುವ ಗಾದೆ ಮಾತಿದೆ. ಇತ್ತೀಚೆನೆ ಸೈಬರ್ ಕ್ರೈಮ್ ಹೆಚ್ಚಳವಾಗುತ್ತಿವೆ. ಅದನ್ನು ಪತ್ತೆ ಹಚ್ಚಲು ನಾವು ಕಾನೂನು ತಿದ್ದುಪಡಿ ತಂದೆವು. ಅದರಿಂದ ಸೈಬರ್ ಕ್ರೈಮ್ ನಿಯಂತ್ರಿಸಲು ಅನುಕೂಲವಾಗಿದೆ ಎಂದರು.
ಮೋದಿಯವರು ಜನಸಂಖ್ಯೆಯನ್ನು ಬಂಡವಾಳ ಮಾಡಿಕೊಂಡರು. ಮನೆ ಮನೆಗೆ ನೀರು ಕೊಡುವ ಜಲ ಜೀವನ ಮಿಷನ್ ಯೋಜನೆ ಜಾರಿಗೆ ತಂದಿದ್ದಾರೆ. ದೇಶ ವೇಗವಾಗಿ ಬೇಳೆಯುತ್ತಿದೆ. ಇದು ದೇಶದ ಭವಿಷ್ಯಕ್ಕಾಗಿ ನಡೆಯುತ್ತಿರುವ ಚುನಾವಣೆ. ದೇಶದ ಹಿತದೃಷ್ಟಿಯಿಂದ ನೀವು ತೀರ್ಮಾನ ಮಾಡಬೇಕು. ನಾನು ಸಿಎಂ ಆಗಿದ್ದಾಗ ವಕೀಲರ ಸಮುದಾಯಕ್ಕೆ ಅಗತ್ಯ ಅನುಕೂಲಗಳನ್ನು ಮಾಡಿದ್ದೇನೆ. ಮುಂದೆಯೂ ಅಗತ್ಯ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಶಂಬಣ್ಣ ಜತ್ತಿ, ಪಿ.ಎಸ್ ಹೆಬ್ಬಾಳ, ಸಿ.ಪಿ ಜಾವಗಲ್ ಹಾಗೂ ಎನ್ ಎಸ್ ಕಾಳೆ ಹಾಜರಿದ್ದರು.
ಬೆಂಗಳೂರಿಗರೇ ಗಮನಿಸಿ: ತಾತ್ಕಾಲಿಕವಾಗಿ ‘ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರ’ ಸ್ಥಗಿತ