ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) CTET ಜುಲೈ 2024 ಪರೀಕ್ಷೆಗೆ ನೋಂದಣಿ ಮಾಡುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಈಗ ಪರೀಕ್ಷೆಗೆ ಹಾಜರಾಗಲು, ಅಭ್ಯರ್ಥಿಗಳು ಏಪ್ರಿಲ್ 5, 2024 ರ ಮಧ್ಯಾಹ್ನ 12 ಗಂಟೆಯ ಮೊದಲು ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ಮಾರ್ಚ್ 7, 2024 ರಂದು ಪ್ರಾರಂಭವಾಯಿತು. ಈ ಮೊದಲು ಅರ್ಜಿ ಸಲ್ಲಿಸಲು ಏಪ್ರಿಲ್ 2 ಕೊನೆಯ ದಿನವಾಗಿತ್ತು. ctet.nic.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ನೋಂದಣಿ ಮಾಡಬೇಕು. ಪರೀಕ್ಷೆಯನ್ನು ಜುಲೈ 7, 2024 ರಂದು ನಡೆಸಲಾಗುವುದು.
ಸಿಬಿಎಸ್ಇ ಬಿಡುಗಡೆ ಮಾಡಿದ ಅಧಿಸೂಚನೆಯ ಪ್ರಕಾರ, ಸಿಟಿಇಟಿ 2024 ಜುಲೈ ಸೆಷನ್ ಪರೀಕ್ಷೆಯನ್ನ ದೇಶಾದ್ಯಂತ 136 ನಗರಗಳಲ್ಲಿ ಸ್ಥಾಪಿಸಲಾದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದು. ಪರೀಕ್ಷೆಯನ್ನ ಒಟ್ಟು 20 ವಿವಿಧ ಭಾಷೆಗಳಲ್ಲಿ ನಡೆಸಲಾಗುತ್ತದೆ. ಸಿಟಿಇಟಿ 2024 ಪರೀಕ್ಷೆಯು ಎರಡು ಪತ್ರಿಕೆಗಳನ್ನ ಒಳಗೊಂಡಿರುತ್ತದೆ. ಪೇಪರ್ 1 1 ರಿಂದ 5 ನೇ ತರಗತಿಗಳಿಗೆ ಮತ್ತು ಪೇಪರ್ 2 6 ರಿಂದ 8 ನೇ ತರಗತಿಗಳಿಗೆ ಇರುತ್ತದೆ.
ಅರ್ಜಿ ಶುಲ್ಕ ಎಷ್ಟು?
ಅರ್ಜಿ ಸಲ್ಲಿಸುವ ಸಾಮಾನ್ಯ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳು ಒಂದು ಪತ್ರಿಕೆಗೆ 1000 ರೂ ಮತ್ತು ಎರಡೂ ಪತ್ರಿಕೆಗಳಿಗೆ 1200 ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಸ್ಸಿ, ಎಸ್ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳು ಪೇಪರ್ 1 ಗೆ 500 ರೂ ಮತ್ತು ಎರಡೂ ಪತ್ರಿಕೆಗಳಿಗೆ 600 ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
CTET 2024ಗೆ ಅರ್ಜಿ ಸಲ್ಲಿಸುವುದು ಹೇಗೆ.?
* ctet.nic.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
* ಮುಖಪುಟದಲ್ಲಿ ನೀಡಲಾದ CTET ಜುಲೈ-2024 ಗೆ ಅರ್ಜಿ ಸಲ್ಲಿಸಲು ಲಿಂಕ್ ಕ್ಲಿಕ್ ಮಾಡಿ.
* ಈಗ ವಿವರಗಳನ್ನ ನಮೂದಿಸಿ ಮತ್ತು ನೋಂದಾಯಿಸಿ ಮತ್ತು ಅರ್ಜಿ ನಮೂನೆಯನ್ನ ಭರ್ತಿ ಮಾಡಿ.
* ದಾಖಲೆಗಳನ್ನ ಅಪ್ ಲೋಡ್ ಮಾಡಿ ಸಲ್ಲಿಸಿ.
ಪ್ರವೇಶ ಪತ್ರ ಯಾವಾಗ ನೀಡಲಾಗುತ್ತದೆ.?
ಸಿಟಿಇಟಿ 2024 ರ ಪ್ರವೇಶ ಪತ್ರವನ್ನು ಪರೀಕ್ಷೆಗೆ 7 ದಿನಗಳ ಮೊದಲು ನೀಡಬಹುದು. ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕದ ಮೂಲಕ ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಬಹುದು. ಪ್ರವೇಶ ಪತ್ರವು ಪರೀಕ್ಷಾ ಕೇಂದ್ರದಲ್ಲಿ ಮಾನ್ಯವಾಗಿರುತ್ತದೆ. ಪರೀಕ್ಷೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ನಲ್ಲಿ ಹೊರಡಿಸಿದ ಅಧಿಸೂಚನೆಯನ್ನ ಪರಿಶೀಲಿಸಬಹುದು.
ಈ ಆರು ಲಕ್ಷಣಗಳು ಕಾಣಿಸಿಕೊಂಡ್ರೆ, ನಿಮ್ಮ ಯಕೃತ್ತು ಹಾಳಾಗಿದ್ಯಂತನೇ ಲೆಕ್ಕ
BREAKING : ಬಂಧನ ಪ್ರಶ್ನಿಸಿ ದೆಹಲಿ ಸಿಎಂ ‘ಕೇಜ್ರಿವಾಲ್’ ಸಲ್ಲಿಸಿದ್ದ ಅರ್ಜಿಯ ತೀರ್ಪು ಕಾಯ್ದಿರಿಸಿದ ಹೈಕೋರ್ಟ್