ನವದೆಹಲಿ:ಸಿಬಿಐ ಸಲ್ಲಿಸಿದ ‘ಉದ್ಯೋಗಕ್ಕಾಗಿ ಭೂಮಿ’ ಭ್ರಷ್ಟಾಚಾರ ಪ್ರಕರಣದಲ್ಲಿ ಸಲ್ಲಿಸಲಾದ ಅಂತಿಮ ನಿರ್ಣಾಯಕ ಚಾರ್ಜ್ಶೀಟ್ ಅನ್ನು ಎಲ್ಹಿಯ ರೂಸ್ ಅವೆನ್ಯೂ ನ್ಯಾಯಾಲಯವು ಪರಿಗಣಿಸಿದೆ. ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಮಗಳು ಹೇಮಾ ಯಾದವ್ ಮತ್ತು ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಸೇರಿದಂತೆ ಎಲ್ಲಾ ಆರೋಪಿಗಳಿಗೆ ರೂಸ್ ಅವೆನ್ಯೂ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಕಳೆದ ವರ್ಷ ಲಾಲು ಯಾದವ್ ಸೇರಿದಂತೆ 78 ಜನರ ವಿರುದ್ಧ ಸಿಬಿಐ ನಿರ್ಣಾಯಕ ಚಾರ್ಜ್ಶೀಟ್ ಸಲ್ಲಿಸಿತ್ತು. 2004ರಿಂದ 2009ರ ಅವಧಿಯಲ್ಲಿ ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗ ಈ ಹಗರಣದಲ್ಲಿ ಭಾಗಿಯಾಗಿದ್ದರು. ಸರ್ಕಾರಿ ಉದ್ಯೋಗಕ್ಕೆ ಬದಲಾಗಿ ಅವರು ಉದ್ಯೋಗ ಅರ್ಜಿದಾರರು ಮತ್ತು ಅವರ ಕುಟುಂಬಗಳ ಭೂಮಿ ಮತ್ತು ಆಸ್ತಿಯನ್ನು ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮುಂಬೈ, ಜಬಲ್ಪುರ್, ಕೋಲ್ಕತಾ, ಜೈಪುರ ಮತ್ತು ಹಾಜಿಪುರದ ರೈಲ್ವೆ ವಲಯಗಳಲ್ಲಿ ಪ್ಲಾಟ್ಗಳಿಗೆ ಬದಲಾಗಿ ಉದ್ಯೋಗಗಳನ್ನು ನೀಡಲಾಯಿತು. ಲಾಲು ಯಾದವ್ ಸೇರಿದಂತೆ ಎಲ್ಲಾ ಆರೋಪಿಗಳು ಮಾರ್ಚ್ 11 ರಂದು ಹಾಜರಾಗುವಂತೆ ರೂಸ್ ಅವೆನ್ಯೂ ನ್ಯಾಯಾಲಯ ಆದೇಶಿಸಿದೆ.