ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಮಹಿಳೆಯರು ತಮ್ಮ ಜನನಾಂಗವನ್ನು ಶುಚಿತ್ವವಾಗಿಟ್ಟುಕೊಳ್ಳುವುದು ತುಂಬಾ ಪ್ರಾಮುಖ್ಯತೆ. ಒಂದು ವೇಳೆ ಗುಪ್ತಾಂಗವನ್ನು ಶುಚಿ ಇಟ್ಟುಕೊಂಡಿಲ್ಲವೆಂದರೆ ಒಂದರ ಮೇಲೊಂದು ಅನೇಕ ಸಮಸ್ಯೆಗಳು ಕಾಡತೊಡುಗುತ್ತವೆ. ಹಾಗಾಗಿ ಈ ವಿಷಯದಲ್ಲಿ ಮಹಿಳೆಯರು ನಿರ್ಲಕ್ಷ್ಯವಹಿಸದೇ, ತುಂಬಾ ಜಾಗರೂಕರಾಗಿರಬೇಕು. ಹಾಗಿದ್ದರೆ ಜನನಾಂಗದ ಶುಚಿತ್ವ ಬಗ್ಗೆ ಏನೆಲ್ಲಾ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿದುಕೊಳ್ಳೋಣ.
ಜನನಾಂಗದ ಶುಚಿತ್ವ ಕಾಪಾಡಲು ಮುಖ್ಯವಾಗಿ ಪಾಲಿಸಬೇಕಾದ ವಿಷಯ ಎಂದರೆ ಹೆಚ್ಚು ರಾಸಾಯನಿಕಯುಕ್ತ ಸೋಪ್‌ಗಳನ್ನು ಬಳಸಬಾರದು. ನಿಯಮಿತವಾಗಿ ಸೋಪ್ ಬಳಸಿ ಹಾಗು ಹದ ಬಿಸಿ ನೀರನ್ನು ಬಳಬಹುದು. ನಿತ್ಯವೂ ಎರಡು ಬಾರಿ ಜನನಾಂಗವನ್ನು ಹದ ಬಿಸಿ ನೀರಿನಂದ ಶುಚಿಗೊಳಿಸಬೇಕು.
ಧರಿಸುವ ಒಳ ಉಡುಪುಗಳು ಟೈಟ್ ಆಗಿರದೇ ಲೂಸ್ ಆಗಿರಬೇಕು. ಕಾಟನ್ ಒಳ ಉಡುಪು ಧರಿಸಿದರೆ ಉತ್ತಮ. ಪ್ರತಿನಿತ್ಯ ಒಳ ಉಡುಪುಗಳನ್ನು ಬಿಸಿ ನೀರಿನಿಂದ ತೊಳೆಯುವುದು ಉತ್ತಮ ಅಭ್ಯಾಸ. ಇನ್ನು ಜನನಾಂಗವನ್ನು ಶುಚಿಗೊಳಿಸಿದ ನಂತರ ಶುದ್ಧವಾದ ಬಟ್ಟೆಯಿಂದ ಒರೆಸಿ ಶುಭ್ರವಾದ ತಾಜಾ ಒಳ ಉಡುಪುಗಳನ್ನು ಧರಿಸಬೇಕು. ಒಂದು ಬಾರಿ ಜನನಾಂಗವನ್ನು ಶುಚಿಗೊಳಿಸಿದ ಮೇಲೆ ಧರಿಸಿದ ಒಳುಡುಪನ್ನು ಮತ್ತೇ ಧರಿಸಬೇಡಿ. ಜನನಾಂಗವನ್ನು ಸದಾ ತೇವ ಇರದಂತೆ ನೋಡಿಕೊಳ್ಳಿ. ವೈದ್ಯರು ಹೇಳುವ ಪ್ರಕಾರ ಆ ಜಾಗದಲ್ಲಿ ಆದಷ್ಟು ತೇವ ಇಲ್ಲದಂತೆ ಡ್ರೈ ಆಗಿರುವಂತೆ ನೋಡಿಕೊಳ್ಳಬೇಕು. ಹೀಗೆ ನಿತ್ಯವೂ ಈ ಸ್ವಚತಾ ಕೆಲಸ ಮಾಡಿದರೆ ಗುಪ್ತಾಂಗದ ಅನೇಕ ಆನಾರೋಗ್ಯದಿಂದ ತಪ್ಪಿಸಿಕೊಳ್ಳಬಹುದು. ಇನ್ನು ಮಾರುಕಟ್ಟೆತಲ್ಲಿ ಗುಪ್ತಾಂಗವನ್ನು ಶುಚಿಗೊಳಿಸಲು ಅನೇಕ ಕ್ರೀಂ, ಲೋಷನ್‌ಗಳು ಬಂದಿವೆ ಆದರೆ ಅವುಗಳನ್ನು ನೀವೇ ನೇರವಾಗಿ ಬಳಸಬೇಡಿ. ನಿಮ್ಮ ಜನನಾಂಗದ ಸಮಸ್ಯೆಯನ್ನು ವೈದರ ಬಳಿ ಹೇಳಿಕೊಂಡು ಅವರ ಸಲಹೆ ಸೂಚನೆಯಂತೆ ಅವುಗಳನ್ನು ಬಳಸುವುದು ಉತ್ತಮ. ಈ ವಿಷಯದಲ್ಲಿ ಸ್ವಯಂ ಚಿಕಿತ್ಸೆ ಬೇಡ.