ಬೆಂಗಳೂರು: ನಗರದಲ್ಲಿನ ಕೆಫೆಗಳಿಗೆ ಕಾಫಿ ಕುಡಿಯೋದಕ್ಕೆ ಅನೇಕ ಯುವತಿಯರು, ಮಹಿಳೆಯರು ಹೋಗ್ತಾ ಇರುತ್ತೀರಿ. ನೀವು ಹೀಗೆ ಹೋಗ್ತಾ ಇದ್ದರೇ ಎಚ್ಚರ ಎನ್ನುವಂತೆ ಅದಕ್ಕೂ ಮುನ್ನಾ ಮುಂದೆ ಸುದ್ದಿ ಓದಿ.
ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕೆಫೆಯೊಂದಕ್ಕೆ ಕಾಫಿಗಾಗಿ ಮಹಿಳೆಯೊಬ್ಬರು ತೆರಳಿದ್ದಾರೆ. ಕಾಫಿಗೂ ಮುನ್ನ ವಾಶ್ ರೂಂಗೆ ತೆರಳಿದಾಗ, ಅಲ್ಲಿ ಮೊಬೈಲ್ ಒಂದನ್ನು ರೆಕಾರ್ಡಿಂಗ್ ಮೂಡ್ ನಲ್ಲಿ ಇರಿಸಿದ್ದು ಗಮನಕ್ಕೆ ಬಂದಿದೆ. ಕೂಡಲೇ ಮಹಿಳೆ ಮೊಬೈಲ್ ಸಹಿತ ಹೊರಗೆ ಬಂದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದಂತ ಸದಾಶಿವನಗರ ಠಾಣೆಯ ಪೊಲೀಸರು ಕೆಫೆಯಲ್ಲಿ ಕಾಫಿ ಮೇಕರ್ ಆಗಿ ಕೆಲಸ ಮಾಡುತ್ತಿದ್ದಂತ ಶಿವಮೊಗ್ಗ ಮೂಲಕ ಮನೋಜ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ಘಟನೆ ಸಂಬಂಧ ಕ್ಷಮೆಯಾಚಿಸಿದ್ದಾರೆ. ಈ ಘಟನೆಯ ಬೆನ್ನಲ್ಲೇ ಆರೋಪಿತ ಕೆಲಸಗಾರನನ್ನು ಕೆಫೆಯ ಕೆಲಸದಿಂದ ವಜಾಗೊಳಿಸಲಾಗಿದೆ.
ಅಂದಹಾಗೇ ಕೆಫೆಯ ವಾಶ್ ರೂಮ್ ನಲ್ಲಿ ಆರೋಪಿ ಮನೋಜ್ ಫ್ಲೈಟ್ ಮೂಡ್ ಆನ್ ನಲ್ಲಿ ಮೊಬೈಲ್ ಇರಿಸಿ, ರೆಕಾರ್ಡಿಂಗ್ ಆನ್ ಮಾಡಿ ಇಟ್ಟು ಬಂದಿದ್ದನಂತೆ. ಇದನ್ನು ಗಮನಿಸಿದಂತ ಮಹಿಳೆಯೊಬ್ಬರು ಪೊರೀಸರಿಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಮನೋಜ್ ಇನ್ನೂ ಎಷ್ಟು ಮಹಿಳೆಯರ ವಾಶ್ ರೂಂ ವೀಡಿಯೋ ರೆಕಾರ್ಡ್ ಮಾಡಿದ್ದಾನೋ ಎನ್ನುವ ಬಗ್ಗೆ ತನಿಖೆಯ ಬಳಿಕ ಪೊಲೀಸರಿಂದ ಮಾಹಿತಿ ಹೊರ ಬರಬೇಕಿದೆ.
BREAKING: ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಕೊಚ್ಚಿ ಹೋದ ಹಿನ್ನಲೆ: ಆ.13ರ ಬಾಗಿನ ಅರ್ಪಣೆ ಕಾರ್ಯಕ್ರಮ ಮುಂದೂಡಿಕೆ
‘ಚಂದ್ರಗುತ್ತಿ ದೇವಸ್ಥಾನ’ದ ಸರ್ವಾಂಗೀಣ ವಿಕಾಸಕ್ಕೆ ಕ್ರಮ: ಸಚಿವ ಮಧು ಬಂಗಾರಪ್ಪ