Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಬೇಸಿಗೆಯಲ್ಲಿ ಹೆಚ್ಚುತ್ತಿರುವ ‘ಎಸಿ ಶೀತ’ : ಹವಾನಿಯಂತ್ರಿತ ಗಾಳಿ ನಿಮ್ಮನ್ನು ಅನಾರೋಗ್ಯಕ್ಕೀಡು ಮಾಡಬಲ್ಲದೇ?

11/04/2026 9:12 PM

ಪ್ರಧಾನಿ ಮೋದಿ ಈಗ ‘ವ್ಲಾಗರ್’: ಪಶ್ಚಿಮ ಬಂಗಾಳದ ರ್‍ಯಾಲಿಗೂ ಮುನ್ನ ವೀಡಿಯೋ ಹಂಚಿಕೊಂಡ ಪ್ರಧಾನಿ; ಸೋಶಿಯಲ್ ಮೀಡಿಯಾದಲ್ಲಿ ವೈರಲ್!

11/04/2026 8:54 PM

ಮತದಾನ ಮತ್ತು ಚುನಾವಣೆಗೆ ಸ್ಪರ್ಧಿಸುವುದು ‘ಮೂಲಭೂತ ಹಕ್ಕು’ ಅಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

11/04/2026 8:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸೊರಬ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ: ತಾಲ್ಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ ಉಗ್ರ ಹೋರಾಟದ ಎಚ್ಚರಿಕೆ
KARNATAKA

ಸೊರಬ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ: ತಾಲ್ಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ ಉಗ್ರ ಹೋರಾಟದ ಎಚ್ಚರಿಕೆ

By kannadanewsnow0917/03/2026 6:05 PM

ಸೊರಬ: ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕನಿಷ್ಠ ಸೌಲಭ್ಯಗಳಿಲ್ಲದೆ ರೋಗಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ ಎಂದು ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ ಗಂಭೀರವಾಗಿ ಆರೋಪಿಸಿದ್ದಾರೆ.

ಮಂಗಳವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಅಂಬುಲೆನ್ಸ್ ಇಲ್ಲದೆ ಯುವಕನ ಬಲಿ: ಹೃದಯವಿದ್ರಾವಕ ಘಟನೆ

ಸಭೆಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ. ಜ್ಞಾನೇಶ್, “ಸೋಮವಾರ ತಾಲ್ಲೂಕಿನ ಮಾಕೊಪ್ಪ ಗ್ರಾಮದ 34 ವರ್ಷದ ಯುವಕ ಗಜೇಂದ್ರ ಎಂಬುವವರು ಕೃಷಿ ಕೆಲಸ ಮಾಡುವಾಗ ಕುಸಿದು ಬಿದ್ದಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲು ಅಂಬುಲೆನ್ಸ್ ವ್ಯವಸ್ಥೆ ಸಿಗಲಿಲ್ಲ. ಜನಪ್ರತಿನಿಧಿಗಳ ಹೊಣೆಗೇಡಿತನದಿಂದಾಗಿ ಯುವಕ ಜೀವ ಕಳೆದುಕೊಂಡಿದ್ದಾನೆ. ಜನರ ಜೀವಕ್ಕೆ ಇಲ್ಲಿ ಬೆಲೆ ಇಲ್ಲದಂತಾಗಿದೆ,” ಎಂದು ವಿಷಾದ ವ್ಯಕ್ತಪಡಿಸಿದರು.

ಆಸ್ಪತ್ರೆಯ ಅವ್ಯವಸ್ಥೆಗಳ ಪಟ್ಟಿ:

ಸಭೆಯಲ್ಲಿ ಬಿಜೆಪಿ ಮುಖಂಡರು ಆಸ್ಪತ್ರೆಯ ದಯನೀಯ ಸ್ಥಿತಿಯ ಬಗ್ಗೆ ಹಲವು ಅಂಶಗಳನ್ನು ಎತ್ತಿ ತೋರಿಸಿದರು:

  • ವೈದ್ಯರ ಕೊರತೆ: ಆಸ್ಪತ್ರೆಯಲ್ಲಿ 12 ವೈದ್ಯರು ಇರಬೇಕಾದ ಜಾಗದಲ್ಲಿ ಕೇವಲ ಮೂವರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

  • ಅಂಬುಲೆನ್ಸ್ ಸಮಸ್ಯೆ: ತಾಲ್ಲೂಕಿಗೆ 6 ವಾಹನಗಳ ಅವಶ್ಯಕತೆ ಇದೆ. ಆದರೆ ಇರುವ 3 ವಾಹನಗಳಲ್ಲಿ ಎರಡು ಕೆಟ್ಟು ನಿಂತಿವೆ. ಒಂದೇ ಒಂದು ಅಂಬುಲೆನ್ಸ್ ಪಂಚರ್ ಆಗಿದೆ ಎಂಬ ನೆಪವೊಡ್ಡಿ ಆಸ್ಪತ್ರೆಯ ಹಿಂಭಾಗ ನಿಲ್ಲಿಸಲಾಗಿದೆ.

  • ಸೌಲಭ್ಯಗಳ ಶೂನ್ಯ: ತಾಲ್ಲೂಕು ಕೇಂದ್ರದ ಆಸ್ಪತ್ರೆಯಲ್ಲಿ ಎಕ್ಸ್‌-ರೇ ಯಂತ್ರವೂ ಕಾರ್ಯನಿರ್ವಹಿಸುತ್ತಿಲ್ಲ. ತುರ್ತು ಸಂದರ್ಭದಲ್ಲಿ ಶಿರಾಳಕೊಪ್ಪದಿಂದ ಅಂಬುಲೆನ್ಸ್ ತರಿಸಿಕೊಳ್ಳಿ ಎಂಬ ಬೇಜವಾಬ್ದಾರಿ ಉತ್ತರ ಅಧಿಕಾರಿಗಳಿಂದ ಬರುತ್ತಿದೆ.

ಸಚಿವ ಮಧು ಬಂಗಾರಪ್ಪ ವಿರುದ್ಧ ಕಿಡಿ:

“ಜಿಲ್ಲೆಯಲ್ಲಿ ಪ್ರಭಾವಿ ಸಚಿವರಿದ್ದರೂ (ಮಧು ಬಂಗಾರಪ್ಪ) ತಾಲ್ಲೂಕಿನ ಆಸ್ಪತ್ರೆಗೆ ಒಂದು ಅಂಬುಲೆನ್ಸ್ ಕೊಡಿಸಲು ಸಾಧ್ಯವಾಗುತ್ತಿಲ್ಲ. ಶಿಕ್ಷಣ ಸಚಿವರು ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಇಂತಹ ಜನವಿರೋಧಿ ಆಡಳಿತಕ್ಕೆ ಮುಂಬರುವ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ,” ಎಂದು ಮುಖಂಡರು ಗುಡುಗಿದರು.

ಉಗ್ರ ಹೋರಾಟದ ಎಚ್ಚರಿಕೆ:

ಮುಂದಿನ 15 ದಿನಗಳ ಒಳಗಾಗಿ ಆಸ್ಪತ್ರೆಯಲ್ಲಿ ಕನಿಷ್ಠ ವೈದ್ಯಕೀಯ ಸೌಲಭ್ಯ ಹಾಗೂ ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸದಿದ್ದರೆ, ಸಾರ್ವಜನಿಕರೊಂದಿಗೆ ಬೀದಿಗಿಳಿದು ಉಗ್ರ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.

ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಪ್ರಧಾನ ಕಾರ್ಯದರ್ಶಿ ಜಾನಕಪ್ಪ ಯಲಸಿ, ರವೀಶ್ ಮಾಕೊಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ: ರಾಘವೇಂದ್ರ ಟಿ.ಜಗಿನಕೊಪ್ಪ, ಸೊರಬ

BREAKING: ಅಶ್ಲೀಲತೆಯ ಆರೋಪ: ‘ಕೆಡಿ’ ಚಿತ್ರದ ‘ಸರ್ಕೆ ಚುನರ್’ ಹಾಡು ನಿಷೇಧಿಸಿದ ಕೇಂದ್ರ ಸರ್ಕಾರ!

SHOCKING : ಎದೆಗೆ ರಿವಾಲ್ವರ್ ಇಟ್ಟು ರೀಲ್ಸ್ ಮಾಡಿದಾಗ ಮಿಸ್‌ಫೈರ್ : ಗೆಳೆಯನ ಮುಂದೆನೆ ಹೋಯ್ತು ಜೀವ | Watch Video

Share. Facebook Twitter LinkedIn WhatsApp Email

Related Posts

​ವಾಹನ ಸವಾರರ ಗಮನಕ್ಕೆ: ಹುಲಿಕಲ್ ಘಾಟ್ ರಸ್ತೆ ಸಂಚಾರ ಬಂದ್ – ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ

11/04/2026 8:25 PM2 Mins Read

ರಾಷ್ಟ್ರ ಮಟ್ಟದಲ್ಲಿ ಕೆಎಸ್‌ಆರ್‌ಟಿಸಿ ಮಿಂಚು: ಪ್ರತಿಷ್ಠಿತ ‘AdWorld Showdown’ನ 3 ಪ್ರಶಸ್ತಿಗಳು ನಿಗಮದ ಪಾಲು

11/04/2026 8:14 PM2 Mins Read

ಅನ್ಯ ಧರ್ಮೀಯರು ಕೂಡ ದೇವರ ದರ್ಶನ ಪಡೆಯಲು ಮುಚ್ಚಳಿಕೆ ನೀಡುವ ವಾಡಿಕೆ ಇದೆ: ಟಿಟಿಡಿ ಸದಸ್ಯ ನರೇಶ್ ಕುಮಾರ್

11/04/2026 7:48 PM2 Mins Read
Recent News

​ಬೇಸಿಗೆಯಲ್ಲಿ ಹೆಚ್ಚುತ್ತಿರುವ ‘ಎಸಿ ಶೀತ’ : ಹವಾನಿಯಂತ್ರಿತ ಗಾಳಿ ನಿಮ್ಮನ್ನು ಅನಾರೋಗ್ಯಕ್ಕೀಡು ಮಾಡಬಲ್ಲದೇ?

11/04/2026 9:12 PM

ಪ್ರಧಾನಿ ಮೋದಿ ಈಗ ‘ವ್ಲಾಗರ್’: ಪಶ್ಚಿಮ ಬಂಗಾಳದ ರ್‍ಯಾಲಿಗೂ ಮುನ್ನ ವೀಡಿಯೋ ಹಂಚಿಕೊಂಡ ಪ್ರಧಾನಿ; ಸೋಶಿಯಲ್ ಮೀಡಿಯಾದಲ್ಲಿ ವೈರಲ್!

11/04/2026 8:54 PM

ಮತದಾನ ಮತ್ತು ಚುನಾವಣೆಗೆ ಸ್ಪರ್ಧಿಸುವುದು ‘ಮೂಲಭೂತ ಹಕ್ಕು’ ಅಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

11/04/2026 8:46 PM
nitish kumar

ಬಿಹಾರದಲ್ಲಿ ನಿತೀಶ್ ಯುಗಾಂತ್ಯ: ಏಪ್ರಿಲ್ 13ಕ್ಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ; ಹೊಸ ನಾಯಕನ ಆಯ್ಕೆಗೆ ಕ್ಷಣಗಣನೆ!

11/04/2026 8:29 PM
State News
KARNATAKA

​ವಾಹನ ಸವಾರರ ಗಮನಕ್ಕೆ: ಹುಲಿಕಲ್ ಘಾಟ್ ರಸ್ತೆ ಸಂಚಾರ ಬಂದ್ – ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ

By kannadanewsnow0911/04/2026 8:25 PM KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ಮತ್ತು ಕುಂದಾಪುರವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ-52 ರ ಬಾಳೆಬರೆ ಘಾಟ್ (ಹುಲಿಕಲ್ ಘಾಟ್) ವ್ಯಾಪ್ತಿಯಲ್ಲಿ ರಸ್ತೆ…

ರಾಷ್ಟ್ರ ಮಟ್ಟದಲ್ಲಿ ಕೆಎಸ್‌ಆರ್‌ಟಿಸಿ ಮಿಂಚು: ಪ್ರತಿಷ್ಠಿತ ‘AdWorld Showdown’ನ 3 ಪ್ರಶಸ್ತಿಗಳು ನಿಗಮದ ಪಾಲು

11/04/2026 8:14 PM

ಅನ್ಯ ಧರ್ಮೀಯರು ಕೂಡ ದೇವರ ದರ್ಶನ ಪಡೆಯಲು ಮುಚ್ಚಳಿಕೆ ನೀಡುವ ವಾಡಿಕೆ ಇದೆ: ಟಿಟಿಡಿ ಸದಸ್ಯ ನರೇಶ್ ಕುಮಾರ್

11/04/2026 7:48 PM

ಪೋಷಕರೇ ಗಮನಿಸಿ: ನಿಮ್ಮ ಮಕ್ಕಳ `SSLC-PUC’ ಬಳಿಕ ಯಾವ ಕೋರ್ಸ್ ಬೆಸ್ಟ್? ಇಲ್ಲಿದೆ ವಿವರ !

11/04/2026 4:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.