ಬೆಂಗಳೂರು: ಪತ್ರಕರ್ತರಿಗೆ ರೈಲ್ವೆ ಪಾಸ್ ನೀಡು ಯೋಜನೆಯನ್ನು ಪುನರಾರಂಭಿಸುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದಂತ ಶಿವಾನಂದ ತಗಡೂರು ಮನವಿ ಮಾಡಿದ್ದಾರೆ.
ಈ ಕುರಿತಂತೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದಿರುವಂತ ಅವರು, ಭಾರತ ಸರ್ಕಾರದ ರೈಲ್ವೆ ಮಂತ್ರಾಲಯದಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆ ರೈಲ್ವೆ ಪಾಸ್ ನೀಡುವ ಯೋಜನೆ ಈ ಮೊದಲು ಜಾರಿಯಲ್ಲಿದ್ದು. ಇದರಿಂದಾಗಿ ಶೇ.50ರಷ್ಟು ರಿಯಾಯಿತಿ ದರದಲ್ಲಿ ರೈಲು ಪ್ರಯಾಣ ಮಾಡುವ ಸೌಲಭ್ಯವನ್ನು ಪತ್ರಕರ್ತರಿಗೆ ಕಲ್ಪಿಸಲಾಗಿತ್ತು ಎಂದಿದ್ದಾರೆ.
ಕೋವಿಡ್ ನಂತ್ರ ಪತ್ರಕರ್ತರ ರೈಲ್ವೆ ಪಾಸ್ ಸೌಲಭ್ಯವನ್ನು ರದ್ದು ಮಾಡಲಾಗಿದೆ. ಇದರಿಂದಾಗಿ ಕೇಂದ್ರ ಸರ್ಕಾರದಿಂದ ಪತ್ರಕರ್ತರಿಗೆ ಲಭ್ಯವಿದ್ದ ಯೋಜನೆಯು ಇಲ್ಲದಂತಾಗಿದೆ. ಆದುದರಿಂದ ತಾವುಗಳು ಈ ಬಗ್ಗೆ ಮರುಚಿಂತನೆ ಮಾಡಿ, ಮಾನ್ಯತೆ ಪಡೆದ ಪತ್ರಕರ್ತರಿಗೆ ಈ ಮೊದಲು ಇದ್ದಂತೆ ರೈಲ್ವೆ ಪಾಸ್ ಸೌಲಭ್ಯವನ್ನು ಕೂಡಲೇ ಪುನರಾರಂಭಿಸುವಂತೆ ವಿನಂತಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಬೆಂಗಳೂರಲ್ಲಿ 25,000 ಕೋಟಿ ವೆಚ್ಚದಲ್ಲಿ ORR, ಬ್ಯುಸಿನೆಸ್ ಕಾರಿಡಾರ್ ಅನುಷ್ಠಾನ: ಸಚಿವ ಹೆಚ್.ಕೆ ಪಾಟೀಲ್
ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ಅಲ್ಲ, ಬಡಿದಾಟ ನಡೆಯುತ್ತಿದೆ: ಸಂಸದ ಬೊಮ್ಮಾಯಿ ಭವಿಷ್ಯ