ಬೆಂಗಳೂರು: ಕರ್ನಾಯಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವಂತ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿತ್ತು. ಈ ಪ್ರಶಸ್ತಿ ಪುರಸ್ಕೃತರಿಗೆ ದತ್ತಿ ಪ್ರಶಸ್ತಿಯನ್ನು ಕೊಪ್ಪಳದಲ್ಲಿ ಮಾ.9ರಂದು ನಡೆಯುವಂತ ಪ್ರದಾನ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ. ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕೊಪ್ಪಳದಲ್ಲಿ ಮಾ.9ರಂದು ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದಿದ್ದಾರೆ.
ಕೊಪ್ಪಳದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೂ.ಭಾ. ವಡ್ಡಟ್ಟಿ, ಸಿರಾಜ್ ಬಿಸರಳ್ಳಿ ಸ್ವಾಗತ
ನಮ್ಮ ನಾಡು ನಮ್ಮ ಹೆಮ್ಮೆ
ಹೋರಾಟದ ನೆಲ ಕೊಪ್ಪಳಕ್ಕೆ ಸ್ವಾಗತ….
ಬನ್ನಿ ಕೊಪ್ಪಳಕ್ಕೆ…
ಮನುಷ್ಯನ ಜೀವನದಲ್ಲಿ ಪ್ರಾಣಕ್ಕಿಂತಲೂ ಅತ್ಯಮೂಲ್ಯವಾದ ವಸ್ತು ಮತ್ತೊಂದು ಇರಲಾರದು ಎನಿಸುತ್ತದೆ.ಅಂತಹ ಅಮೂಲ್ಯವಾದ ಪ್ರಾಣವನ್ನು ನೀಡಿ, ಜೀವನವನ್ನು ಈ ನಾಡಿನ ,ದೇಶದ ಬಿಡುಗಡೆಗಾಗಿ ಸ್ವಾತಂತ್ರ್ಯ ಪ್ರೇಮಿ ಹೋರಾಟಗಾರರು ಹೋರಾಟದ ಮಾರ್ಗದಲ್ಲಿ ಅರ್ಪಣೆ ಮಾಡಿ ಹುತಾತ್ಮರಾಗಿದ್ದಾರೆ.
ಆ ಹೋರಾಟಗಾರರು ದೇಶದ ನಾಡಿನ ಬಿಡುಗಡೆಗಾಗಿ ಜೀವ ಅರ್ಪಿಸಿದ್ದು, ವಿದೇಶಿಯ ಆಡಳಿತದಿಂದ ಮುಕ್ತಿ ಪಡೆಯುವ, ದೇಶದ ಬಾಂಧವರೇ ಆಡಳಿತ ನಡೆಸಿ ಮುಂದಿನ ಪೀಳಿಗೆಯು ಭವಿಷ್ಯದ ಸ್ವಾತಂತ್ರ್ಯದ ಸುಖದ ದಿನಗಳಲ್ಲಿ ಬಾಳಲಿ ಎನ್ನುವ ಸದಾಶಯದ ಅಭಿಲಾಷೆಯನ್ನು ಹೊಂದಿದ್ದರು. ಆ ಹೋರಾಟಗಾರರು ಹುತಾತ್ಮರಾಗುವ ಪಟ್ಟಕ್ಕೆ ಹಂಬಲಿಸದವರಲ್ಲ. ಹೋರಾಟಗಾರರು ಜೀವನವನ್ನು ಅರ್ಪಿಸಿ, ವೀರ ಪರಂಪರೆಯನ್ನು ಹುಟ್ಟು ಹಾಕಿ ಹೋಗಿದ್ದಾರೆ. ಹೋರಾಟದ ದಾರಿಯಲ್ಲಿ ಜೀವನವನ್ನು ತ್ಯಾಗ ಮಾಡಿರುವ ಹೋರಾಟಗಾರರನ್ನು ಗೌರವಿಸಿ, ಸ್ಮರಿಸುವ ಮಹತ್ತರವಾದ ಕಾರ್ಯವನ್ನು ಸ್ವಾತಂತ್ರ್ಯದ ಫಲವನ್ನು ಅನುಭವಿಸುತ್ತಿರುವ ಇಂದಿನ ಪೀಳಿಗೆಯು ತ್ರೀಕರಣರ್ಪೂಕವಾಗಿ ಮಾಡಬೇಕಿದೆ.
ಕ್ರೀ.ಶ. ೧೭೯೯-೧೮೦೦ ರಲ್ಲಿ ಟಿಪ್ಪು ಸುಲ್ತಾನನ ಸರದಾರ ದೋಂಢಿಯಾ ವಾಘನು ಬ್ರೀಟಿಷರ ವಿರುದ್ದ ಸೈನ್ಯವನ್ನು ಒಟ್ಟುಗೂಡಿಸುತ್ತಾ ನಗರ ಭಾಗದಿಂದ ಹರಪನಹಳ್ಳಿಗೆ ಬಂದು, ಅಲ್ಲಿಂದ ಡಂಬಳ ಶ್ರೀನಿವಾಸ ವೆಂಕಟಾದ್ರಿ ಬಹೂದ್ದರ ದೇಸಾಯಿ ಹತ್ತಿರ ಸೈನಿಕ ಸಹಾಯವನ್ನು ಪಡೆಯಲು ಬರುತ್ತಾನೆ. ದೊಂಢಿಯಾ ವಾಘನು ದೇಸಾಯಿ ಅವರಿಂದ ಸೈನಿಕ ಸಹಾಯದ ಭರವಸೆ ಪಡೆದು, ಧಾರವಾಡ ಸಮೀಪ ಸೈನ್ಯದೊಂದಿಗೆ ಮರಳುತ್ತಾನೆ. ಆದರೇ ಬ್ರೀಟೀಷ್ ಸೈನಾಧಿಕಾರಿ ಅರ್ಥರ್ ವೆಲ್ಲಸ್ಸಿ , ಕರ್ನಲ್ ಸ್ವೀವನ್ ಸನ್ ಮತ್ತು ಮರಾಠ ಜಂಟಿ ಸೈನ್ಯವು ದೊಂಢಿಯಾ ವಾಘನ ಮೇಲಿನ ಸಿಟ್ಟಿನಿಂದ ಡಂಬಳದ ಕೋಟೆಗೆ ಸೈನಿಕರೊಂದಿಗೆ ಮುತ್ತಿಗೆ ಹಾಕಿ, ಶ್ರೀನಿವಾಸ ವೆಂಟಾದ್ರಿ ಬಹೂದ್ದರ ದೇಸಾಯಿ ಶರಣಾಗತಿಗೆ ಆಗ್ರಹಿಸುತ್ತಾರೆ. ಅದರೇ ಶ್ರೀನಿವಾಸ ವೆಂಕಟಾದ್ರಿ ಬಹೂದ್ದರ ದೇಸಾಯಿಯು ಶರಣಾಗತಿಗೆ ಒಪ್ಪದೇ ಇದ್ದಾಗ , ದಾಳಿ ನಡೆಸಿ ಕೋಟೆ ವಶಪಡಿಸಿಕೊಂಡು ಶ್ರೀನಿವಾಸ ವೆಂಕಟಾದ್ರಿ ಬಹೂದ್ದರ ದೇಸಾಯಿ( ೧೮೦೦ ಜುಲೈ – ೨೬)ಸೆರೆ ಹಿಡಿದು, ನೇಣಿಗೆ ಹಾಕಲಾಗುತ್ತದೆ. ಬ್ರೀಟೀಷರ ಆಡಳಿತದ ವಿರುದ್ದ ಹೋರಾಟದ ಒಂದು ಕಿಚ್ಚಿನ ಕಿಡಿಯು ಅಲ್ಲಿಂದಲೇ ಹೊತ್ತಿಕೊಳ್ಳುತ್ತದೆ.
೧೮೧೯ರಲ್ಲಿ ಬಹೂದ್ದರಬಂಡಿ ಕೋಟೆಯಿಂದ ಅಡಳಿತ ನಡೆಸುತ್ತಿದ್ದ ವೀರಪ್ಪ ದೇಸಾಯಿಯು ಕಂದಾಯ ವಸೂಲಿ ಮಾಡುವ ಕಾರ್ಯನಿರ್ವಹಣೆಯ ಆಡಳಿತಗಾರನಾಗಿದ್ದನು. ಅದರೇ ಬ್ರೀಟೀಷರ ಮತ್ತು ನಿಜಾಮ್‌ನ ಕಂದಾಯದ ಪ್ರಮಾಣವು ಹೆಚ್ಚಾಗಿರುವದರಿಂದ ಅಸಮಾಧಾನಗೊಂಡ ವೀರಪ್ಪ ದೇಸಾಯಿ ನೇತೃತ್ವದಲ್ಲಿ ಆಭಾಗದ ಭೂಮಾಲೀಕರು ಬೆಂಬಲಕ್ಕೆ ನಿಂತರು. ವೀರಪ್ಪ ದೇಸಾಯಿಯು ಕೊಪ್ಪಳ ಮತ್ತು ಬಹೂದ್ದರ ಬಂಡಿ ಕೋಟೆಗಳನ್ನು ವಶಕ್ಕೆ ಪಡೆದುಕೊಂಡರು. ೧೮೧೯ ಮಾ.೨೩ರಂದು ಹೈದರಾಬಾದಿನಿಂದ ಬಂದ ನಿಜಾಮ್, ಬ್ರೀಟೀಷ ಸೈನ್ಯದ ರಸೆಲ್ ಬ್ರೀಗೇಡಿನ ಕ್ಯಾಪ್ಟನ್ ಜೋನ್ಸನ್, ಇದ್ರೂಸ್‌ಖಾನ್ ,ಕ್ಯಾಪ್ಟನ್ ಹಾರ್ಜನ ನೇತೃತ್ವದ ೩೦೦ ಅಶ್ವ ಸವಾರರು, ೯೦೦ ಕಾಲ್ದಳದ ಸೈನಿಕರು ಕೋಟೆಗಳಿಗೆ ಮುತ್ತಿಗೆ ವೀರಪ್ಪ ದೇಸಾಯಿ, ಸೋಮದೇವ ದೇಸಾಯಿಯವರನ್ನು ಸೋಲಿಸಿ ವಶಕ್ಕೆ ಪಡೆದುಕೊಂಡರು.
ಆ ನಂತರ ೧೮೦೦ ರಲ್ಲಿ ಹುತಾತ್ಮನಾದ ಶ್ರೀನಿವಾಸ ವೆಂಕಟಾದ್ರಿ ಬಹೂದ್ದರ ದೇಸಾಯಿ ವಂಶನಾದ ತಿರುಮಲ ಶ್ರೀನಿವಾಸ ವೆಂಕಟಾದ್ರಿದೇಸಾಯಿಯು ೧೮೫೮ರಲ್ಲಿ ನರಗುಂದ ಬಾಬಾಸಾಹೇಬ ಭಾವೆ, ಮುಂಡರಗಿ ಭೀಮರಾವ್ ನಾಡಗೌಡ, ಹಮ್ಮಿಗಿ ಕೆಂಚನಗೌಡರ ಜೊತೆಗೂಡಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ. ೧೮೫೮ರ ಮೇ ೩೧, ಜೂನ್ ೧ರಂದು ಕೊಪ್ಪಳ ಕೋಟೆಯಲ್ಲಿ ಭೀಮರಾವ್ ನಾಡಗೌಡ, ಹಮ್ಮಿಗಿ ಕೆಂಚನಗೌಡ ಸೇರಿದಂತೆ ನೂರಾರು ಜನ ಹೋರಾಟಗಾರರು ಬ್ರೀಟಿಷ ಸೈನಿಕರ ವಿರುದ್ದ ಹೋರಾಟ ಮಾಡಿ ಹುತಾತ್ಮರಾಗುತ್ತಾರೆ.
೧೮೫೮ ಜೂ.೧ರಂದು ಕೊಪ್ಪಳ ಕೋಟೆಯಲ್ಲಿ ರಾಯಚೂರಿನ ( ದೋಆಬ್ )ಕಲ್ಟೇರ್ ಆರ್.ಎನ್.ಟೇಲರ್ , ಕ್ಯಾಪ್ಟನ್ ರೇಮಿಂಗ್‌ಟನ್, ಲೆಪ್ಟನೆಂಟ್ ಟೇಲರ್ ಸಮ್ಮುಖದಲ್ಲಿ ಕೋರ್ಟ ಮಾರ್ಷಲ್ ನಡೆಸಿದ ಬ್ರೀಟೀಷರು ಭೀಮರಾವ್, ಕೆಂಚನಗೌಡರ ನೇತೃತ್ವದಲ್ಲಿ ಕೊಪ್ಪಳ ಕೋಟೆಯಲ್ಲಿ ಬ್ರೀಟೀಷ್ ವಿರೋಧಿ ಯುದ್ದದಲ್ಲಿ ಸೆರೆಸಿಕ್ಕ ೭೭ ಜನ ಹೋರಾಟಗಾರರನ್ನು ನಿಲ್ಲಿಸಿ ಅವರ ಎದೆಗೆ ಗುಂಡು ಹೊಡೆದು ಬ್ರೀಟೀಷರು ಕೊಂದರು. ಬ್ರೀಟಿಷರು ಡಂಬಳದ ತಿರುಮಲ ಶ್ರೀನಿವಾಸ ವೆಂಕಟಾದ್ರಿ ದೇಸಾಯಿಯವರನ್ನು ಕೂಡಾ ಬಂಧಿಸಿ ನೇಣಿಗೆ ಏರಿಸಿದರು.
ಬಂಡಾಯದಲ್ಲಿ ಪಾಲ್ಗೋಂಡಿದ್ದ ೩೮ ಜನ ಹೋರಾಟಗಾರರಿಗೆ ಹದಿನಾಲ್ಕು ವರುಷಗಳ ಶ್ರಮದ ಕಠಿಣ ಶಿಕ್ಷೆ , ೧೦ ಜನ ಹೋರಾಟಗಾರರಿಗೆ ಒಂದು ವರ್ಷದ ಕಠಿಣ ಶ್ರಮದ ಶಿಕ್ಷೆ, ಇಬ್ಬರಿಗೆ ಹದಿನಾಲ್ಕು ವರ್ಷಗಳ ಕಠಿಣ ಶ್ರಮದ ಶಿಕ್ಷೆ, ಇಬ್ಬರಿಗೆ ಒಂದು ವರ್ಷದ ಕಠಿಣ ಶ್ರಮದ ಶಿಕ್ಷೆ, ಒಬ್ಬರಿಗೆ ಐದು ವರ್ಷದ ಕಠಿಣ ಶ್ರಮದ ಶಿಕ್ಷೆಯನ್ನು ವಿಧಿಸಲಾಯಿತು. ಭೀಮರಾವ್ ,ಕೆಂಚನಗೌಡ ಕೂಡಾ ಹೋರಾಟದಲ್ಲಿ ಹುತಾತ್ಮರಾದರು. ಭೀಮರಾವ್, ಕೆಂಚನಗೌಡ ಮತ್ತವರ ಬೆಂಬಲಿಗ ಹೋರಾಟಗಾರರಿಗೆ ಸಹಾಯ ಮಾಡಿದ ಕಾರಣಕ್ಕೆ ಕೊಪ್ಪಳದಲ್ಲಿ ಸರದಾರನಾಗಿದ್ದ ಮಕ್ತುಂಪುರ ಗ್ರಾಮದ ಮುಕ್ತುಂ ಮೋದಿನ್ ನಾಯಕನಿಗೆ ಗಲ್ಲು ಶಿಕ್ಷೆ ವಿಧಿಸಿ, ನೇಣಿಗೆ ಏರಿಸಲಾಯಿತು.
ಬ್ರೀಟೀಷರ ಗುಂಡೇಟಿನ ಶಿಕ್ಷೆಯಿಂದ ಹುತಾತ್ಮರಾದ ಹೋರಾಟಗಾರರು
೧.ಲಿಂಗ ೨.ಗಿರಿಯಣ್ಣ, ೩.ಲಚುಮಾ ೪.ಹನುಮಾ ೫.ಭರಮಾ ೬.ಹುಲಿಗ್ಯಾ ೭.ಭೀಮಾ ೮. ಮುಲ್ಲಾ ೯.ಖಾಜಾ ೧೦. ಭರಮಾ ೧೧.ದುರುಗಾ ೧೨. ಹುಸೇನಸಾಹೇಬ ೧೩.ಮುಲ್ಲಾ ೧೪. ಹಮೀದಸಾಹೇಬ ೧೫. ಹುಸೇನಸಾಹೀಬ ೧೬.ಹಯಾತಸಾಹೀಬ ೧೭.ಫಕೀರಸಾಹೀಬ ೧೮.ಓ ಕುಂದಾ ೧೯.ರಂಗಾ ೨೦.ರಂಗಾ ೨೧. ತಿಮ್ಮ ೨೨.ಪೊಂಗರಿ ೨೩. ರಂಗ (ಮೂರನೇಯ) ೨೪.ಲಿಂಗ ೨೫.ಭೀಮ ೨೬. ಹುಸೇನಸಾಹೀಬ ೨೭.ಬಾವಾಸಾಬ ೨೮.ಹೀರಾಸಾಹೀಬ, ೨೯ ಇಮಾಮಸಾಹೇಬ (ಇವರೆಲ್ಲರೂ ಕೋರ್ಲಹಳ್ಳಿ ಗ್ರಾಮದವರು) ೩೦. ಹೊನ್ನಗುರಾ (ಗಂಗಾಪುರ) ೩೧.ಹನುಮಣ್ಣ (ರಾಟಿ) ೩೨.ಮುಲ್ಲಯ್ಯ ೩೩. ಹನುಮ ೩೪.ಬುಸ್ಸಯ್ಯ ( ವಡ್ಡರಹಟ್ಟಿ) ೩೫.ರಾಮಣ್ಣ ೩೬.ಚೆನ್ನ (ಶಿಂಗಟಾಲೂರು) ೩೭.ಬೂನಿಸಾಬ ೩೮.ಜೀವನಸಾಬ (ಹಮ್ಮಿಗಿ) ೩೯.ಭರಮಪ್ಪ (ನವಲಿ) ೪೦.ಹರೆಪ್ಪಾ (ಹೆಸರೂರು) ೪೧.ಲಿಂಗಾ (ಹರಪನಹಳ್ಳಿ) ೪೨.ಬುಸ್ಯಾ (ಮುಂಡವಾಡ) ೪೩. ಬುಸ್ಯಾ ತಲೇರಿ (ತಾಹರೀಗಿ )೪೪.ಜೂನಾ (ಹೊನ್ನಮ್ಮಿಗಿ) ೪೫. ದಾವೂದ ಸಾಹೇಬ ( ಹೊನ್ನಕಂಟಪುರ) ೪೬.ಲಚಮಾ, ೪೭ .ಸಿದ್ದ .೪೮.ಹನುಮ ೪೯.ಉಬ್ಬುಲದಾಸ (ಬಾಗೇವಾಡಿ) ೫೦.ತುಮಾಣಾ (ಕುಕನೂರು) ೫೧.ಬುಸ್ಯಾ (ಕುಂದಗೋಳ) ೫೨.ಭೀಮಾ (ಕುಕನೂರು) ೫೩.ಹನುಮಣ್ಣ (ಬಾಗೇವಾಡಿ) ೫೪.ಯಲ್ಲ ೫೫.ಉರವಿ ೫೬.ಕರಿಂiÀiಣ್ಣ ೫೭.ಕುರಖಾ ೫೮.ಉರವಿ (ಎರಡನೇಯ) ೫೯.ಲಿಂಗ ೬೦.ಯಲ್ಲ (ಹಮ್ಮಿಗಿ) ೬೧.ತುಮ್ಮಣ್ಣ ತಲೇರಿ ೬೨.ತುಮಿಯಾ ಯಲಸ್ತೇರ .೬೩.ಮುದ್ದುರಂಗ ೬೪.ಹನುಮಣ್ಣ (ಹೆಸರೂರು) ೬೫.ಮುದ್ದೆಲ್ಲನೂರು ( ಕೊರಹ) ೬೬.ಊರ್ವವಿ (ಕಂಪಲಿ) ೬೭.ಗರುಡ (ಹೆಸರೂರು) ೬೮. ಚೆನ್ನಪ್ಪ (ಬೆಟಗೇರಿ) ೬೯. ಗೊಗ್ಗರಪ್ಪ (ಹಮ್ಮಿಗಿ) ೭೦.ಭೀಮಪ್ಪಾ (ಹಿರೇನಡವಾಲ) ೭೧.ಚುನೀಯಾ ವರಕಪ್ಪ (ಹಮ್ಮಿಗಿ) ೭೨.ಪೀರೂ (ಹೆಸರೂರು) ೭೩.ಅವಣ್ಣ (ಹಂದಿಗನೂರು), ೭೪. ಹಯಾತಸಾಹೀಬ (ಬನ್ನೂರು) ೭೫. ಭೀಮಾ (ಹಮ್ಮಿಗಿ) ೭೬.ಸೈಯ್ಯದ್ ಬುಡೇನ್ (ಬಂಕಾಪೂರ) ೭೭.ಬುಸ್ಸರಣ್ಣ (ನಾವಲಗಿ) ಪಟ್ಟಿಯು ಈ ತೆರನಾಗಿದೆ.
ಹದಿನಾಲ್ಕು ವರ್ಷಗಳ ಕಠಿಣ ಶ್ರಮದ ಶಿಕ್ಷೆಗೆ ಒಳಗಾದ ಹೋರಾಟಗಾರರು
೧.ಹುಸನಪ್ಪ ೨.ಮಾನಪ್ಪಾ (ಭೀಮಹಳ್ಳಿ), ೩.ಇಮಾಮಸಾಬ ೪.ಹನುಮಾ (ಕೋರ್ಲಹಳ್ಳಿ), ೫.ನೂಲ್ಲೇಸಿ ಗೌಡ (ಹೂಜನಿ), ೬.ಕೆಂಚ (ಶಿಂಗಟಾಲೂರು), ೭.ಜಂಗೀ ೮.ಫಕೀರಸಾಬ (ಕವಲೂರು), ೯.ಕಾಶೀಮ ೧೦ಮೊಹಿಲ್ಲ (ಬೇನೂರು), ೧೧.ಲೋವನಹ (ಹೋಲಕೇಪೀರ್), ೧೨.ಕೂಕ್ಕೂಹ (ಮುತ್ತೂರು), ೧೩.ವೆಂಕ (ದದೇಗಲ್ಲ), ೧೪. ಭರಮಾ (ಬೆಟಗೇರಿ) ೧೫.ಯಮನೂ ಸಾಹಿಬ ( ಬೇನೂರು), ೧೬.ಇಮಾಮ ಸಾಹೀಬ ,೧೭ ಬುಂಡುಗಿ (ಹಳ್ಳಿಗುಡಿ), ೧೮.ತುಮ್ಮಾ (ಬೇಟಗೇರಿ) ೧೯.ಪುಟ್ಟಾ ೨೦.ಫಕೀರಾ ೨೧. ಹೀರಾ (ಹಳ್ಳಿಗುಡಿ), ೨೨.ವೆಂಕ (ಜಾಲ್ಲಿಹೊಳಿ), ೨೩.ಬುದಮಾ ೨೪.ಬಂಧಾ (ಚೆಲುವಂಗಿ), ೨೫.ಕಾಲೇಸಾಹೀಬ (ಭೀಮನೂರು), ೨೬.ಹೇರಾ ೨೭ ವೆಂಕ ೨೮.ಸೋನಾಹ ೨೯.ಭರಮಾ (ಜಾಲಿಹೊಳೆ), ೩೦ .ಮುದುಕ್ಯಾ ೩೧.ಹನುಮಾ ೩೨.ಯಲ್ಲಾ (ತಾವರಗೇರಿ), ೩೩.ನಿಂಬಾ ೩೪.ಜುಂಬಾ (ಭೀಮನೂರು) ೩೫.ದೇಮ್ಮಾ (ಕವಲೂರು), ೩೬.ಹುಲುಗ್ಯಾ (ಬೆಟಗೇರಿ) ೩೭.ಕುಲ್ಯಾ ೩೮.ಹನುಮಾ (ಕವಲೂರು) ೩೯.ಪರಶ್ಯಾ ೪೦ ಹಗುಮಾ ಬೇಗ(ನೂರುಗನಹಳ್ಳಿ) ಹೆಸರಿಸಬಹುದು. ಆ ಹೋರಾಟಗಾರರ ಕುಟುಂಬ ವರ್ಗದವರು ಆ ಕಡು ದು:ಖದ ಸಮಯವನ್ನು ಹೇಗೆ ಸಹಿಸಿಕೊಂಡಿರಬಹುದು ಎನ್ನುವದೇ ಅಗಾಧವಾದ ನೋವಿನ ಸಂಗತಿಯಾಗಿದೆ.
ನೂರಾರು ದೇಶಪ್ರೇಮಿಗಳು ಸ್ವಾತಂತ್ರ್ಯ ಹೋರಾಟದ ರಾಷ್ಟ್ರೀ ಯ ಚಳುವಳಿಯಲ್ಲಿ ಭಾಗವಹಿಸಿ ರಾಜಕೀಯ ಪ್ರಜ್ಞೆ ಮೆರೆದು ಕೆಚ್ಚೆದೆಯ ಹೋರಾಟ ಕಟ್ಟಿ, ತ್ಯಾಗ ಬಲಿದಾನಗಳು ನೀಡಿ, ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೋಂಡು ಅಜರಾಮರರಾಗಿ ಜನರ ನೆಮ್ಮದಿಯ ಬದುಕಿಗೆ ಕಾರಣಿಕರ್ತರಾಗಿದ್ದಾರೆ.ಅಂತಹ ಮಹನೀಯರನ್ನು ಸದಾವಕಾಲ ನೆನೆದು, ಸ್ಮರಣೆ ಮಾಡಿಕೊಳ್ಳಬೇಕಿರುವದು ಭಾರತೀಯರ, ಕನ್ನಡನಾಡಿನ ನಾಗರೀಕರ, ದೇಶಪ್ರೇಮಿಗಳ ಈ ಹೊತ್ತಿನ ಕರ್ತವ್ಯವಾಗಿದೆ.
ಈ ವೀರ ಯೋಧರ, ನಗುನಗುತ್ತಲೇ ನಾಡಿಗಾಗಿ ಪ್ರಾಣತೆತ್ತವರ ಸ್ಮರಣಾರ್ಥ ಕೊಪ್ಪಳ ನಗರದ ಹೃದಯಭಾಗದಲ್ಲಿ ೧೯೫೭ರ ಆಗಸ್ಟ್ ೧೫ ರಂದು ವೀರ ಸ್ಥಂಭವನ್ನು ಸ್ಥಾಪಿಸಲಾಗಿದೆ… ಅದನ್ನೇ ಎಲ್ಲರೂ ಅಶೋಕ ಸರ್ಕಲ್ ಎಂದು ಕರೆಯುತ್ತಾರೆ.. ಇತ್ತೀಚಿಗೆ ಅಶೋಕ ಸರ್ಕಲ್ ನ್ನು ನವೀಕರಣ ಮಾಡಲಾಗಿದೆ..
ಬನ್ನಿ ಖುದ್ದಾಗಿ ಈ ಈ ವೀರ ಸ್ಥಂಭವನ್ನು, ಪ್ರಾಣಾರ್ಪಣೆ ಮಾಡಿದ ಕೋಟೆಯನ್ನು ನೋಡಿ.. ಆ ವೀರ ಯೋಧರಿಗೆ, ಹುತಾತ್ಮರಿಗೆ ನಮನ ಸಲ್ಲಿಸಿ…
ಬನ್ನಿ ಕೊಪ್ಪಳಕ್ಕೆ ಎಂಬುದಾಗಿ ಕೊಪ್ಪಳ ಕೆ ಯು ಡಬ್ಲ್ಯೂ ಜೆ ಸಂಘದ ಹೂ.ಭಾ. ವಡ್ಡಟ್ಟಿ ಹಾಗೂ ಸಿರಾಜ್ ಬಿಸರಳ್ಳಿ ಸ್ವಾಗತ ಕೋರಿದ್ದಾರೆ.
ಮಾ.8ರಿಂದ ಜೂನ್ 30ರವರೆಗೆ ಮಹಿಳಾ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ: ಸಚಿವ ಪ್ರಿಯಾಂಕ್ ಖರ್ಗೆ