ಬೆಂಗಳೂರು: ವಸತಿ ಶಾಲೆಯಲ್ಲಿ ಕುವೆಂಪು ವಾಕ್ಯ ಬದಲಾವಣೆ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ಇಂದು ಹೆಚ್.ಸಿ ಮಹದೇವಪ್ಪ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸುದ್ದಿಗಾರರ ಜೊತೆಗೆ ಮಾತನಾಡಿದ ವರ ಧೈರ್ಯವಾಗಿ ಪ್ರಶ್ನಿಸಿ ಎನ್ನುವುದರಲ್ಲಿ ತಪ್ಪು ಏನಿದೇ ಹೇಳಿ ಅಂತ ಅವರು ಹೇಳಿದರು.
ಇನ್ನೂ ಇದರಲ್ಲಿ ತಪ್ಪೇನಿದೆ? ಕುವೆಂಪು ಅವರ ಬಗ್ಗೆ ನಮಗೆ ಅಭಿಮಾನವಿದೆ. ಇದು ಸಮಸ್ಯೆಯಲ್ಲ ಅಂತ ಹೇಳಿದರು. ಇನ್ನೂ ಬಿಜೆಪಿಯವರು ಎಲ್ಲವನ್ನೂ ವಿವಾದ ಮಾಡುತ್ತಾರೆ ಅಂತ ಹೇಳಿದರು.
BREAKING :ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡಗೆ ಬಂಧನದ ಭೀತಿ : ಫೆ.23ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್
UPDATE : ಪರ್ಫ್ಯೂಮ್ ಗೋಡೌನ್ ದುರಂತದಲ್ಲಿ ಮೂವರ ಸಾವು ಪ್ರಕರಣ : ಮೃತ 3ನೆ ವ್ಯಕ್ತಿ ಗುರುತು ಪತ್ತೆ
ಘಟನೆ ಹಿನ್ನೆಲೆ?
ಸರ್ಕಾರಿ ವಸತಿ ಶಾಲೆ, ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆ ವಿಚಾರವಾಗಿ ಒಂದು ಸುತ್ತೋಲೆ ಹೊರಡಿಸಿ ಅದಿನ್ನೇನು ವಿವಾದ ಆಗುತ್ತಿದ್ದಂತೆಯೇ ವಾಪಸ್ ಪಡೆದಿದ್ದ ಸರ್ಕಾರ ಇದೀಗ ಮತ್ತೊಂದು ಯಡವಟ್ಟು ಮಾಡಿಕೊಳ್ಳಲು ಮುಂದಾಗಿದೆಯಾ ಎಂಬ ಅನುಮಾನ ಸೃಷ್ಟಿಯಾಗಿದೆ’ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬರಹ ಬದಲಾದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಘಾಜಿಪುರದ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ.