ಶಿವಮೊಗ್ಗ : ತಾಂತ್ರಿಕ ಕಾರಣಗಳಿಂದ ತಡವಾಗಿದ್ದ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪರೀಕ್ಷಾ ಫಲಿತಾಂಶವನ್ನು ಗುರುವಾರ ಪ್ರಕಟಿಸಲಾಗಿದೆ.
ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ( UUCMS) ಪೋರ್ಟಲ್ ನಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ವಿದ್ಯಾರ್ಥಿಗಳು ತಂತಮ್ಮ ಅಕೌಂಟ್ ಗಳಲ್ಲಿ ಲಾಗಿನ್ ಆಗಿ ಫಲಿತಾಂಶ ಪಡೆದುಕೊಳ್ಳಬಹುದು.
ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಳೆದ ತಿಂಗಳೇ ಮುಗಿದಿತ್ತು. ಆದರೆ ವಿವಿಯ ಸಿಬಿಸಿಎಸ್ ಪರಿನಿಯಮವನ್ನು ಯುಯುಸಿಎಮ್ ಎಸ್ ಸಾಫ್ಟ್‌ವೇರ್ ಗೆ ಅಳವಡಿಸುವಲ್ಲಿ ತಾಂತ್ರಿಕ ತೊಡಕು ಎದುರಾಗಿತ್ತು. ಈಗ ರಾಜ್ಯ ಮಟ್ಟದ ನೋಡಲ್ ಅಧಿಕಾರಿಗಳ ಸಹಕಾರದೊಂದಿಗೆ ಸಮಸ್ಯೆ ಪರಿಹಾರವಾಗಿದ್ದು, ಫಲಿತಾಂಶ ನೀಡಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಎಸ್.ಎಂ. ಗೋಫಿನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ‘ರಾಮನ ಭಕ್ತ’ರಿಗೆ ಶಾಕ್: ‘ಬೆಂಗಳೂರು-ಅಯೋಧ್ಯೆ’ ವಿಮಾನ ಪ್ರಯಾಣ ದರ ಶೇ.400ರಷ್ಟು ಏರಿಕೆ
‘ಗ್ಯಾರಂಟಿ ಯೋಜನೆ’ಗಳ ಟೀಕೆ ಮಾಡಿದವರೇ ‘ಗ್ಯಾರಂಟಿ’ ಹೆಸರಲ್ಲಿ ಪ್ರಚಾರ- ಸಂಸದ ಡಿ.ಕೆ. ಸುರೇಶ್